ಮೆಸ್ಸಿ, ಸೊರೋಸ್, ಹಿಲರಿ ಕ್ಲಿಂಟನ್‍ಗೆ ಅಮೆರಿಕ ಅಧ್ಯಕ್ಷರ ಪದಕ ಪ್ರದಾನ
Update: 2025-01-05 15:54 GMT
ವಾಷಿಂಗ್ಟನ್: ಜೇನ್ ಗುಡಾಲ್, ಹಿಲರಿ ಕ್ಲಿಂಟನ್, ಮೆಸ್ಸಿ, ಜಾರ್ಜ್ ಸೊರೋಸ್ ಸೇರಿದಂತೆ 19 ಗಣ್ಯರಿಗೆ ಅಮೆರಿಕದ ಅತ್ಯುನ್ನತ ನಾಗರಿಕ ಗೌರವ `ಪ್ರೆಸಿಡೆನ್ಶಿಯಲ್ ಮೆಡಲ್ ಆಫ್ ಪ್ರೀಡಂ' ಅನ್ನು ಅಧ್ಯಕ್ಷ ಜೋ ಬೈಡನ್ ಶನಿವಾರ ಪ್ರದಾನ ಮಾಡಿದ್ದಾರೆ.
ಬಾಸ್ಕೆಟ್ ಬಾಲ್ ದಂತಕತೆ `ಮ್ಯಾಜಿಕ್ ಜಾನ್ಸನ್', ವೋಗ್ ಪತ್ರಿಕೆಯ ಸಂಪಾದಕರಾದ ಅನ್ನಾ ವಿಂಟೌರ್, ಕಾರ್ಯಕರ್ತ ಬೋನೊ, ಫುಟ್‍ಬಾಲ್ ಸೂಪರ್ ಸ್ಟಾರ್ ಲಿಯೊನೆಲ್ ಮೆಸ್ಸಿ, ನಟರಾದ ಡೆಂಝೆಲ್ ವಾಷಿಂಗ್ಟನ್ ಮತ್ತು ಮೈಕೆಲ್ ಜ್ಯೂ. ಸೇರಿದಂತೆ ಕಲಾವಿದರು, ಕ್ರೀಡಾ ತಾರೆಗಳು, ಕಾರ್ಯಕರ್ತರು ಮತ್ತು ರಾಜತಾಂತ್ರಿಕರು ಈ ಪ್ರತಿಷ್ಠಿತ ಪದಕ ಪಡೆದವರಲ್ಲಿ ಸೇರಿದ್ದಾರೆ.
ಕಪ್ಪು ವರ್ಣೀಯರ ನಾಗರಿಕ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದ ಫ್ಯಾನೀ ಲೂ ಹ್ಯಾಮರ್ ಗೆ ಮರಣೋತ್ತರ ಗೌರವ ನೀಡಲಾಗಿದೆ.