ರಶ್ಯದ ಎಂಐ-8 ಹೆಲಿಕಾಪ್ಟರ್ ಹೊಡೆದುರುಳಿಸಿದ ಉಕ್ರೇನ್ ನ ಡ್ರೋನ್

Update: 2025-01-01 16:24 GMT

PC : X/@DI_Ukraine

ಕೀವ್ : ಕಪ್ಪು ಸಮುದ್ರದ ಮೇಲೆ ಹಾರುತ್ತಿದ್ದ ರಶ್ಯದ ಎಂಐ-8 ಹೆಲಿಕಾಪ್ಟರ್ ಉಕ್ರೇನ್ ನ ನೌಕಾಪಡೆಯ ಡ್ರೋನ್ಗಳು ಹಾರಿಸಿದ ಕ್ಷಿಪಣಿಯಿಂದ ಧ್ವಂಸಗೊಂಡಿದ್ದು ಮತ್ತೊಂದು ಹೆಲಿಕಾಪ್ಟರ್ ಹಾನಿಗೊಂಡಿರುವುದಾಗಿ ವರದಿಯಾಗಿದೆ.

ಕಪ್ಪು ಸಮುದ್ರದ ಬಳಿ ಉಕ್ರೇನ್ ನ ಮಗೂರ ವಿ5 ನೌಕಾ ಡ್ರೋನ್ ನ ಮೇಲೆ ರಶ್ಯದ ಎರಡು ಹೆಲಿಕಾಪ್ಟರ್ಗಳು ದಾಳಿ ನಡೆಸಲು ಆರಂಭಿಸಿವೆ. ಆಗ ಡ್ರೋನ್ ಪ್ರಯೋಗಿಸಿದ ಕ್ಷಿಪಣಿಯಿಂದ ಎಂಐ-8 ಹೆಲಿಕಾಪ್ಟರ್ ಪತನಗೊಂಡಿದ್ದು ಹಾನಿಗೊಂಡ ಮತ್ತೊಂದು ಹೆಲಿಕಾಪ್ಟರ್ ಅಲ್ಲಿಂದ ನಿರ್ಗಮಿಸಿದೆ. ಡ್ರೋನ್ಗಳನ್ನು ಬಳಸಿ ಇದೇ ಪ್ರಥಮ ಬಾರಿಗೆ ರಶ್ಯದ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ನ ಗುಪ್ತಚರ ಏಜೆನ್ಸಿ ಹೇಳಿದ್ದು ರಶ್ಯದ ಹೆಲಿಕಾಪ್ಟರ್ ಕೆಳಗೆ ಬೀಳುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News