ನಾನು ಅಧ್ಯಕ್ಷನಾಗಿದ್ದರೆ ಇಸ್ರೇಲ್ ಮೇಲೆ ಇರಾನ್ ದಾಳಿ ಮಾಡುತ್ತಿರಲಿಲ್ಲ: ಟ್ರಂಪ್

Update: 2024-04-14 16:34 GMT

 ಡೊನಾಲ್ಡ್ ಟ್ರಂಪ್ | Photo : PTI

ವಾಷಿಂಗ್ಟನ್: ಇಸ್ರೇಲ್ ಮೇಲೆ ಇರಾನ್ ನಡೆಸಿದ ದಾಳಿಯನ್ನು ಟೀಕಿಸಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಒಂದು ವೇಳೆ ತಾನು ಅಧ್ಯಕ್ಷನಾಗಿದ್ದರೆ ಈ ದಾಳಿ ನಡೆಯುತ್ತಿರಲಿಲ್ಲ ಎಂದಿದ್ದಾರೆ.

`ಇಸ್ರೇಲ್ ಆಕ್ರಮಣಕ್ಕೆ ಒಳಗಾಗಿದೆ. ಇದಕ್ಕೆ ಎಂದಿಗೂ ಆಸ್ಪದ ನೀಡಬಾರದಿತ್ತು. ನಾನು ಅಧ್ಯಕ್ಷನಾಗಿದ್ದರೆ ಇದು ಎಂದಿಗೂ ನಡೆಯುತ್ತಿರಲಿಲ್ಲ' ಎಂದು ಟ್ರಂಪ್ ಹೇಳಿದ್ದಾರೆ.

ದಾಳಿಯ ಬಳಿಕ ಅಧ್ಯಕ್ಷ ಜೋ ಬೈಡನ್ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ದಾಳಿಯನ್ನು ಖಂಡಿಸುವ ಬದಲು, ಧ್ವನಿಮುದ್ರಿತ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಇದು ಧ್ವನಿಮುದ್ರಿತ ಹೇಳಿಕೆಯ ಸಮಯವಲ್ಲ ಎಂದು ಟ್ರಂಪ್ ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News