ನಮ್ಮ ಪರಮಾಣು ನೀತಿ ಬದಲಾಗಿಲ್ಲ: ರಶ್ಯ
Update: 2023-11-08 15:14 GMT
ಮಾಸ್ಕೊ: ಪಾಶ್ಚಿಮಾತ್ಯ ದೇಶಗಳು ರಶ್ಯದ ಕುರಿತು ತಮ್ಮ ಆಕ್ರಮಣಕಾರಿ ಧೋರಣೆಯನ್ನು ಪ್ರದರ್ಶಿಸಿದೆ. ಆದರೆ ಪರಮಾಣು ಶಸ್ತ್ರಾಸ್ತ್ರಗಳ ಕುರಿತಂತೆ ರಶ್ಯಕ್ಕೆ ತನ್ನದೇ ಆದ ನೀತಿಯಿದೆ ಮತ್ತು ಅದು ಬದಲಾಗಿಲ್ಲ ಎಂದು ರಶ್ಯ ಹೇಳಿದೆ.
ಅಮೆರಿಕ ಮತ್ತದರ ಮಿತ್ರರಾಷ್ಟ್ರಗಳ ವಿನಾಶಕಾರಿ ನೀತಿಗಳು ಪರಮಾಣು, ರಾಸಾಯನಿಕ ಅಥವಾ ಜೈವಿಕ ಶಸ್ತ್ರಾಸ್ತ್ರಗಳನ್ನು ಬಳಸುವ ಅಪಾಯವನ್ನು ಹೆಚ್ಚಿಸಿದೆ ಎಂದು ರಶ್ಯ ಭದ್ರತಾ ಮಂಡಳಿ ಕಾರ್ಯದರ್ಶಿ ನಿಕೊಲಾಯ್ ಪಟ್ರುಷೆವ್ ಹೇಳಿದ್ದಾರೆ. ಈ ಹೇಳಿಕೆಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ `ಪಟ್ರುಷೆವ್ ಅವರು ಭದ್ರತಾ ಮಂಡಳಿಯ ಕಾರ್ಯದರ್ಶಿ, ಅವರು ಸರಕಾರದ ಭಾಗವಾಗಿದ್ದಾರೆ ಮತ್ತು ಅವರ ಹೇಳಿಕೆ ಸರಕಾರದ ಧ್ವನಿಯಾಗಿದೆ. ರಶ್ಯ ಗಣರಾಜ್ಯದ ವಿಷಯಕ್ಕೆ ಬಂದರೆ ನಮ್ಮ ಹೇಳಿಕೆ ಸ್ಪಷ್ಟವಾಗಿರುತ್ತದೆ ಮತ್ತು ಅದನ್ನು ಬದಲಾಯಿಸುವುದಿಲ್ಲ' ಎಂದಿದ್ದಾರೆ.