ಪಾಕಿಸ್ತಾನ | ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಆಹ್ವಾನಿಸಿದ ಪಿಟಿಐ
Update: 2024-10-05 16:28 GMT
ಇಸ್ಲಾಮಾಬಾದ್ : ಇಸ್ಲಾಮಾಬಾದ್ ಮತ್ತು ಲಾಹೋರ್‍ನಲ್ಲಿ ನಡೆಸುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ರನ್ನು ಆಹ್ವಾನಿಸುವುದಾಗಿ ಇಮ್ರಾನ್‍ಖಾನ್ ಅವರ ಪಿಟಿಐ ಪಕ್ಷದ ಮುಖಂಡರು ಶನಿವಾರ ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮತ್ತು ನಮ್ಮ ಜನರೊಂದಿಗೆ ಮಾತನಾಡಲು ಭಾರತದ ವಿದೇಶಾಂಗ ಸಚಿವರನ್ನು ಆಹ್ವಾನಿಸಲಾಗುವುದು. ಪಾಕಿಸ್ತಾನವು ಪ್ರಬಲ ಪ್ರಜಾಪ್ರಭುತ್ವವಾಗಿದ್ದು ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ' ಎಂದು ಪಿಟಿಐ ಪಕ್ಷದ ಮುಖಂಡ ಮುಹಮ್ಮದ್ ಆಲಿ ಸೈಫ್ ಹೇಳಿದ್ದಾರೆ.
ಈ ಹೇಳಿಕೆಯನ್ನು ಆಡಳಿತಾರೂಢ ಮೈತ್ರಿ ಸರಕಾರ ಖಂಡಿಸಿದೆ. ಭಾರತದ ವಿದೇಶಾಂಗ ಸಚಿವರಿಗೆ ಸೈಫ್ ಅವರ ಆಹ್ವಾನವು ಅತ್ಯಂತ ಬೇಜವಾಬ್ದಾರಿಯ ನಡೆಯಾಗಿದ್ದು ಪಾಕಿಸ್ತಾನದ ಕುರಿತ ದ್ವೇಷಕ್ಕೆ ಸಮವಾಗಿದೆ ಎಂದು ಮಾಹಿತಿ ಸಚಿವ ಅತಾವುಲ್ಲ ತರಾರ್ ಟೀಕಿಸಿದ್ದಾರೆ.