ಪುಟಿನ್‌ ಅನಾರೋಗ್ಯ ವದಂತಿಗಳ ಕುರಿತು ಕೊನೆಗೂ ಮೌನ ಮುರಿದ ರಶ್ಯ

Update: 2023-10-24 13:25 GMT

ವ್ಲಾದಿಮಿರ್‌ ಪುಟಿನ್‌ - Photo : PTI

ಮಾಸ್ಕೋ: ರಶ್ಯ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರ ಅನಾರೋಗ್ಯ ಕುರಿತ ವರದಿಗಳನ್ನು ಹಾಗೂ ಅಧ್ಯಕ್ಷರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಬಾಡಿ ಡಬಲ್‌ಗಳನ್ನು ಬಳಸುತ್ತಾರೆಂಬ ವದಂತಿಗಳನ್ನು ರಶ್ಯ ನಿರಾಕರಿಸಿದೆ.

“ಅವರು ಚೆನ್ನಾಗಿದ್ದಾರೆ. ಇದು ಇನ್ನೊಂದು ಸುಳ್ಳು ಸುದ್ದಿ,” ಎಂದು ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ಹೇಳಿದ್ದಾರೆ. ರಶ್ಯ ಅವರಿಗೆ ಗಂಭೀರ ಆರೋಗ್ಯ ಸಮಸ್ಯೆಯಿದೆ, ಹೃದಯಾಘಾತವಾಗಿದೆ ಎಂದು ರಷ್ಯಾದ ಟೆಲಿಗ್ರಾಮ್‌ ಚಾನಲ್‌ ಒಂದು ವರದಿ ಮಾಡಿದ ಆಧಾರದಲ್ಲಿಯೇ ಹಲವು ಮಾಧ್ಯಮಗಳು ವರದಿ ಮಾಡಿರುವ ಹಿನ್ನೆಲೆಯಲ್ಲಿ ಪೆಸ್ಕೋವ್‌ ಅವರ ಸ್ಪಷ್ಟೀಕರಣ ಬಂದಿದೆ.

ಅಕ್ಟೋಬರ್‌ 7ರಂದು ತಮ್ಮ 71ನೇ ವಯಸ್ಸಿಗೆ ಕಾಲಿಟ್ಟ ಪುಟಿನ್‌ ಕಳೆದ ವಾರ ಚೀನಾಗೆ ಭೇಟಿ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News