ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಟ್ರಂಪ್: ಅಧಿಕೃತ ಘೋಷಣೆ
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ರಿಪಬ್ಲಿಕನ್ ಪಕ್ಷ ಅಧಿಕೃತವಾಗಿ ಅಧ್ಯಕ್ಷೀಯ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ನ್ಯಾಷನಲ್ ಕನ್ವೆನ್ಷನ್ ಡೆಲಿಗೇಟ್ಸ್ ನಲ್ಲಿ ಅವರು ಬಹುಮತ ಸಾಧಿಸಿದ ಬೆನ್ನಲ್ಲೇ ಪಕ್ಷ ಟ್ರಂಪ್ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದೆ. ಓಬಿಯೊ ಸೆನೆಟ್ ಸದಸ್ಯ ಜೆ.ಡಿ.ವೆನ್ಸ್ ಉಪಾಧ್ಯಕ್ಷ ಅಭ್ಯರ್ಥಿಯಾಗಿರುತ್ತಾರೆ.
2016ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಟ್ರಂಪ್ 2020ರ ಚುನಾವಣೆಯಲ್ಲಿ ಜೋ ಬೈಡನ್ ವಿರುದ್ಧ ಸೋಲು ಅನುಭವಿಸಿದ್ದರು. ಈ ಹಿರಿಯ ರಾಜಕಾರಣಿ ಇದೀಗ ನವೆಂಬರ್ ನಲ್ಲಿ ಬೈಡನ್ ವಿರುದ್ಧ ಸ್ಪರ್ಧಿಸಲಿದ್ದಾರೆ.
ಮಿಲ್ವಾಕಿಯಲ್ಲಿ ನಡೆದ ರಿಪಬ್ಲಿಕನ್ ನ್ಯಾಷನಲ್ ಕಮಿಟಿ ಡೆಲಿಗೇಟ್ಸ್ ಮತದಾನದ ಬಳಿಕ ಟ್ರಂಪ್ ಅವರ ಉಮೇದುವಾರಿಕೆಯನ್ನು ದೃಢಪಡಿಸಲಾಯಿತು. ಫ್ಲೋರಿಡಾದ ಮತಗಳೊಂದಿಗೆ ಟ್ರಂಪ್ ಅಗತ್ಯ ಮತ ಗಳಿಸಿದರು ಎಂದು ಅವರ ಪುತ್ರ ಎರಿಕ್ ಪ್ರಕಟಿಸಿದ್ದಾರೆ ಎಂದು ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಟ್ರಂಪ್ ಅವರಿಗೆ ಈ ರಾಜ್ಯದ ಬೆಂಬಲ ವ್ಯಕ್ತವಾಗುತ್ತಿದ್ದಂತೆ ಇಡೀ ಸಭೆಯಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟಿತು.