ಆಳಂದದಲ್ಲಿ ಸಿಪಿಐ(ಎಂ) ತಾಲೂಕು ಸಮ್ಮೇಳನ

Update: 2024-11-18 08:52 GMT

ಕಲಬುರಗಿ: ಬಡವರ, ದಲಿತರ, ಮಹಿಳೆಯರ ರಕ್ಷಣೆ ಮಾಡುವಲ್ಲಿ ಮತ್ತು ಯುವಜನರಿಗೆ ಉದ್ಯೋಗ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸಿಪಿಐ(ಎಂ) ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ನೀಲಾ ಹೇಳಿದರು.

ಆಳಂದ ತಾಲ್ಲೂಕಿನ ಚಿಂಚನಸೂರದಲ್ಲಿ ಎಂಟನೇ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ, ಅವರು ಮಾತನಾಡುತ್ತಿದ್ದರು.

ಕೇಂದ್ರ ಸರಕಾರ ದೇಶದಲ್ಲಿ ಕೋಮುವಾದವನ್ನು ಸೃಷ್ಟಿಸುತ್ತಿದೆ, ಅದರ ಕುರಿತು ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿ ಸಿಪಿಐ (ಎಮ್) ನ ರಾಜ್ಯ ಸಮಿತಿ ಸದಸ್ಯೆ ಕಾಂ. ಗೌರಮ್ಮ ಮಾತನಾಡಿ, ಸದ್ಯದ ಸರಕಾರಗಳಿಂದಾಗಿ ಜನಸಾಮಾನ್ಯರ ಮೇಲೆ ಅನ್ಯಾಯ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶೋಕ್ ಗಂಜಿ ಅವರು ವಹಿಸಿದರು.

ಈ ಸಂದರ್ಭದಲ್ಲಿ ಕಾಮ್ರೆಡ್ ಶ್ರೀಮಂತ ಬಿರಾದರ್, ಜಿಲ್ಲಾ ಸಹಕಾರ್ಯದರ್ಶಿ ಸುಧಾಮ ಧನ್ನಿ, ಬಾಬು ಇರಾನ್ ಶೆಟ್ಟಿ, ಪ್ರಕಾಶ್ ಜಾನೆ, ವಿರೂಪಾಕ್ಷಪ್ಪ ತಡಕಲ್, ಪಾಂಡುರಂಗ ಮಾವಿನಕಾರ, ಸಾಹಿತಿ ಪ್ರಭು ಖಾನಾಪುರೆ, ಪ್ರಮೋದ್ ಪಂಚಾಳ ಸೇರಿದಂತೆ ಗ್ರಾಮದ ಅನೇಕರು ಹಾಜರಿದ್ದರು.

ಈ ಸಂದರ್ಭದಲ್ಲಿ ಲವಿತ್ರ ವಸ್ತ್ರದ ಮತ್ತು ಮೇಘಾ ಅವರು ಕ್ರಾಂತಿಗೀತೆ ಹಾಡಿದರು. ಸಲ್ಮಾನ್ ಖಾನ್ ಸ್ವಾಗತಿಸಿದರು, ಪಾಂಡುರಂಗ ಮಾವಿನಕರ್ ವಂದಿಸಿದರು.




 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News