ವಿದ್ಯಾರ್ಥಿಗಳು ದೊಡ್ಡ ಗುರಿಗಳನ್ನು ಇಟ್ಟುಕೊಳ್ಳಿ : ಬಸವಕುಮಾರ ಪಾಟೀಲ

Update: 2025-01-09 17:11 GMT

ಕಲಬುರಗಿ: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ದೊಡ್ಡ ಗುರಿಗಳನ್ನು ಇಟ್ಟುಕೊಳ್ಳಿ, ಅವುಗಳನ್ನು ತಲುಪಲು ನಿತ್ಯವೂ ಶ್ರಮಿಸಿ ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಬೀದರನ ಅಧ್ಯಕ್ಷ ಬಸವಕುಮಾರ ಪಾಟೀಲ ಅವರು ಕರೆ ನೀಡಿದರು.

ನಗರದ ಮಿಲೇನಿಯಂ ಆಂಗ್ಲ ಹಾಗೂ ಕನ್ನಡ ಮಾಧ್ಯಮದ ಹತ್ತನೇ ಹಾಗೂ ಪಿಯುಸಿ ದ್ವಿತೀಯ ಮಕ್ಕಳನ್ನು ಉದ್ದೇಶಿಸಿ ಪ್ರೇರಣದಾಯಕ ಮಾತುಗಳನ್ನು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎನ್. ಪಾಟೀಲ, ಮುಖ್ಯ ಅತಿಥಿಗಳಾಗಿ ಅದೇ ಸಂಸ್ಥೆಯ ಕಾರ್ಯದರ್ಶಿ ಅರುಣ ಕುಮಾರ ಪಾಟೀಲ ಅವರು ಆಗಮಿಸಿದ್ದರು.

ಅತಿಥಿಗಳಾಗಿ ಚಿತ್ರನಟ ಅಶೋಕ ಕುಮಾರ ಕಾಳೆ, ಸಂಜಯ ಕುಮಾರ ಒಂಟಿ, ರಾಷ್ಟ್ರ ವಿಜ್ಞಾನ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಂಡಿತ ಬಾಳುವರೆ, ತೀರ್ಥಪ್ಪ, ಶಾಂತಪ್ಪ ದುಬಲಗುಂಡಿ ಆಳಂದ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ, ನಿವೃತ್ತ ಶಿಕ್ಷಕ ಚಂದ್ರಕಾಂತ ಬಿರಾದಾರ ಭಾಗವಹಿಸಿದ್ದರು.

ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಸ್ಥೆ ಭಾರತಿ ಸಿಂಪಿ, ಕಾಲೇಜು ಪ್ರಿನ್ಸಿಪಾಲರಾದ ಎಸ್. ಕೆ. ಕುಂಬಾರ, ಕನ್ನಡ ಮಾಧ್ಯಮದ ಮುಖ್ಯ ಗುರುಗಳಾದ ಶ್ರೀಶೈಲ ಗೊಡ್ಕ, ನಾಗು ಜಮಾದಾರ ಇನ್ನಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಭೆ ಸಂಚಾಲನೆ ಶ್ರೀಮತಿ ಶರಣಮ್ಮ ಗಣಪತಿ ಅವರು ನೆರವೇರಿಸಿದರು. ಸಸ್ಯೆಗೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ಶರಣಮ್ಮ ಗಣಪತಿ ನಿರೂಪಿಸಿದರು. ವಂದನಾರ್ಪಣೆಯನ್ನು ಶಾಲೆಯ ದೈಹಿಕ ಶಿಕ್ಷಕರು ನಡೆಸಿಕೊಟ್ಟರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News