ಕಲಬುರಗಿಗೆ ಅನುದಾನ ಘೋಷಣೆಗಾಗಿ ಶಾಸಕಿ ಕನೀಜ್ ಫಾತಿಮಾ ಅವರಿಂದ ಸಿಎಂಗೆ ಮನವಿ
ಕಲಬುರಗಿ: ಕಲಬುರಗಿಯ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳಿಗೆ ಮುಂಬರುವ ಬಜೆಟ್ ನಲ್ಲಿ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನಿಜ್ ಫಾತಿಮಾ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಗಳೂರಿನಲ್ಲಿ ಇಂದು ಮನವಿ ಮಾಡಿದರು.
ಕಲಬುರಗಿ ನಗರದಲ್ಲಿ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ದೇಶ, ವಿದೇಶದಿಂದ ಅಗಮಿಸುವ ಪ್ರವಾಸಿಗರಿಗೆ ಆಕರ್ಷಿಸಲು ಮುಂಬರುವ ಫೆಬ್ರವರಿ-2025ರ ಆಯವ್ಯಯನಲ್ಲಿ ಪಮುಖ ಸ್ಥಳಗಳ ಅಭಿವೃದ್ಧಿಗಾಗಿ ರೂ. 25 ಕೋಟಿಗಳ ಅನುದಾನ ಮೀಸಲಿಡಬೇಕು,
ವಕ್ಫ್ ಆಸ್ತಿಗಳು ಸಂರಕ್ಷಣೆ, ಅಭಿವೃದಿಗಾಗಿ ಹಾಗೂ ಅವುಗಳ ಜೀರ್ಣೋದಾರಕ್ಕಾಗಿ 20 ಕೋಟಿ, ಕಲಬುರಗಿ ನಗರದ ಹಜ್ ಭವನ ನಿರ್ಮಾಣಕ್ಕಾಗಿ 40 ಕೋಟಿ, ವಕ್ಫ್ ಅಡಿಯಲ್ಲಿ ನೊಂದಾಯಿತ ಸಂಸ್ಥೆಗಳಲ್ಲಿ ಇಮಾಮ್ ಇವರಿಗೆ ಪ್ರತಿ ತಿಂಗಳು ರೂ. 4,000 ಮತ್ತು ಮೌಜನ್ ಇವರಿಗೆ ಪ್ರತಿ ತಿಂಗಳು ರೂ. 3100/- ರಂತೆ ಸಂಭಾವನೆಯನ್ನು ಇಮಾಮ್ ರಿಗೆ ಪ್ರತಿ ತಿಂಗಳು 12000/- ಹಾಗೂ ಮೌಜನ್ ರಿಗೆ ಪುತಿ ತಿಂಗಳು 10000/- ರಂತೆ ಹೆಚ್ಚಿಸಬೇಕೆಂದು ಕೋರಿದ್ದಾರೆ.
ಅಲ್ಲದೆ, ರೈತರ ಹಿತದೃಷ್ಟಿಯಿಂದಾಗಿ ಕಲಬುರಗಿ ಗಂಜ್ ಪ್ರದೇಶದಲ್ಲಿರುವ ಎ.ಪಿ.ಎಂ.ಸಿ ಯನ್ನು ಮಹಾನಗರದ ವ್ಯಾಪ್ತಿಯ ಹೊರಗೆ 200-00 ಎಕರೆ ಜಮೀನು ಭೂಸ್ವಾಧೀನ ಪಡಿಸಿಕೊಂಡು ಎ.ಪಿ.ಎಂ.ಸಿ ಯನ್ನು ನಿರ್ಮಾಣ ಮಾಡಿಕೊಡಲು ಅನುದಾನ ಮಂಜೂರಿಸಿ, ಬಜೆಟ್ ನಲ್ಲಿ ಘೋಷಿಸಬೇಕೆಂದು ಒತ್ತಡ ಹೇರಿದರು.