ಬಿಜೆಪಿ ಸೋಲಿಸಿ ದೇಶ ರಕ್ಷಿಸಿ: ಸಿಪಿಐಎಂ ರಾಜಕೀಯ ಸಮಾವೇಶದಲ್ಲಿ ಕರೆ

Update: 2024-04-30 16:46 GMT

ಕಲಬುರಗಿ/ಕಮಲಾಪುರ: "ಈ ದೇಶಕ್ಕೆ ಬೇಕಾಗಿದ್ದು ಐಕ್ಯತೆ ಸಮಾನತೆ. ಬಿಜೆಪಿಯವರು ದೇಶವನ್ನು ಕೋಮುವಾದಿಕರಣ ಮಾಡಲು ಹೊರಟಿದ್ದಾರೆ. ದೇಶದಲ್ಲಿ ಹಿಂದೂ ಮುಸ್ಲಿಂ ಎಂದು ಜಗಳ ಹಚ್ಚುವ ಇಂತಹ ಪಕ್ಷವು ನಮಗೆ ಬೇಡ ಎಂದು ಬಿಜೆಪಿ ಸೋಲಿಸಿ ದೇಶ ರಕ್ಷಿಸಿ ಎಂದು ಕೆ. ನೀಲಾ ಕರೆ ನೀಡಿದರು.

ಕಮಲಾಪುರ ತಾಲೂಕಿನ ಮಾಹಾಗಾಂವ ಕ್ರಾಸ್ ನಲ್ಲಿ ನಡೆದ ಸಿಪಿಐಎಂ ಪಕ್ಷದ ರಾಜಕೀಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಕೆ. ನೀಲಾ ಅವರು, ಐದು ವರ್ಷಗಳಿಗೊಮ್ಮೆ ನಮ್ಮ ಹಣೆಬರಹ ನಾವೇ ಬರೆದುಕೊಳ್ಳುವ ಅವಕಾಶ ಬರುವುದು. ರಾಜಕೀಯ ಪ್ರಜ್ಞೆ ಹೆಚ್ಚಿಸಿಕೊಳ್ಳುವ ಅಗತ್ಯ ಇದೆ. ಈ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡಿ ಬಿಜೆಪಿ ಸೋಲಿಸಿ. ಬಿಜೆಪಿಗೆ ಮತ ಹಾಕಿದರೆ ಈ ದೇಶದಲ್ಲಿ ಮತ್ತೆ ಮನುಸ್ಮೃತಿ ಬರುತ್ತದೆ. ನಮ್ಮ ಪಕ್ಷ ದುಡಿಮೆಗಾರರ ಪಕ್ಷವಾಗಿದೆ. ಅಪಾಯಕಾರಿ ಫ್ಯಾಸಿಸ್ಟ್ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲಾಗಿದೆ. ಆದರೆ ಕಾಂಗ್ರೆಸ್ ಜನವಿರೋಧಿ ಆರ್ಥಿಕ ನೀತಿ ಕೈ ಬಿಡಬೇಕು. ಕೊನೆಯಲ್ಲಿ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟಿರುವಂತಹ ಸಂವಿಧಾನ ರಕ್ಷಿಸೋಣ ಎಂದರು.

ಕಾ. ಯು ಬಸವರಾಜ್ ಮಾತನಾಡಿ, "ಈ ಚುನಾವಣೆಯಲ್ಲಿ ನಾವು ಈ ಚುನಾವಣೆ ಏಕೆ ನಡೆಯುತ್ತದೆ ಮತ್ತು ಇದರಿಂದ ನಮಗೆ ಏನು ಪ್ರಯೋಜನ ಆಗುತ್ತದೆ ಎಂಬುದು ಅರಿಯಬೇಕಿದೆ. ಇದು ಅತ್ಯಂತ ಮಹತ್ವದ ಚುನಾವಣೆಯಾಗಿದೆ. ನಮ್ಮ ಮನರೇಗಾ ಕೂಲಿಕಾರರಿಗೆ ಎರಡು ನೂರು ದಿನ ಕೆಲಸ ಮತ್ತು ರೂ. 600 ಕೂಲಿ ಹಣ ಹೆಚ್ಚಿಗೆ ಮಾಡಬೇಕು.ನಮ್ಮ ಸಿಪಿಐಎಂ ಪಕ್ಷವು ಎಡ ಪ್ರಜಾಸತ್ತಾತ್ಮಕ ರಂಗದಿಂದ ಆಡಳಿತ ನಡೆಸುತ್ತಿದ್ದು, ಕೇರಳದಲ್ಲಿ ಬಡತನ ನೀಗಿಸಲು ಕೂಲಿಕಾರರ ಕೆಲಸದ ಪ್ರಮಾಣ ಕಡಿಮೆ ಮತ್ತು ಕೂಲಿ ಪ್ರಮಾಣ ಜಾಸ್ತಿ ಮಾಡಿದೆ ಎಂದು ತಿಳಿಸಿದರು.

ಮುಂದಿನ ಚುನಾವಣೆಯಲ್ಲಿ ನಮ್ಮ ಬದುಕನ್ನು ಬದಲಾಯಿಸುವ ಪಕ್ಷ ಯಾವುದು ಎಂಬುದು ನೀವು ತಿಳಿದು ಚುನಾವಣೆ ಎದುರಿಸಬೇಕು. ನಮ್ಮ ಮತವನ್ನು ಮಾರಿಕೊಳ್ಳಬಾರದು. ಕಲಬುರಗಿಯಲ್ಲಿ ಎರಡು ಪಕ್ಷಗಳು ಸ್ಪರ್ಧೆಗೆ ನಿಂತಿದ್ದಾವೆ. ಬಡವರ ಕೂಲಿ ಕಾರ್ಮಿಕರ ರೈತರ ಪರವಾಗಿ ನಿಂತ ನಮ್ಮ ಸಿಪಿಐಎಂ ಪಕ್ಷವು ಒಂದು ಬಿಜೆಪಿ ಸೋಲಿಸಲು ತೀರ್ಮಾನ ಮಾಡಿದೆ. ನಾವು ವರ್ಷವೊಂದಕ್ಕೆ ಸರ್ಕಾರಕ್ಕೆ ಎಷ್ಟು ತೆರಿಗೆ ಕಟ್ಟುತ್ತೇವೆ ಗೊತ್ತಾ ? ಕೇಂದ್ರ ಸರಕಾರವು ನೂರು ರೂಪಾಯಿ ಖರ್ಚು ಮಾಡಿದರೆ ಅದರಲ್ಲಿ 30 ರೂಪಾಯಿ ನಾವು ತೆರಿಗೆ ಕಟ್ಟುತ್ತೇವೆ. 365 ದಿವಸದಲ್ಲಿ ನಾವು ಒಂದುವರೆ ಲಕ್ಷದ ವರೆಗೂ ತೆರಿಗೆ ಕಟ್ಟುತ್ತೇವೆ. ಈ ಒಂದೊಂದು ಕುಟುಂಬದಿಂದ 45 ಸಾವಿರ ಟ್ಯಾಕ್ಸನ್ನು ತೆಗೆದುಕೊಳ್ಳಲಾಗುತ್ತದೆ ಕೇಂದ್ರ ಸರ್ಕಾರ. 115 ಲಕ್ಷ ಕೋಟಿ ಸಾಲ ನಮ್ಮ ತಲೆಯ ಮೇಲೆ ಹೊರಿಸಿದ್ದಾರೆ ಎಂದು ದೂರಿದರು.

ದೇಶದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಪಕ್ಷ ಸಿಪಿಎಂ ಪಕ್ಷ ರೈತರ ಸಾಲ ಮನ್ನಾ ಮಾಡಿ ಎಂದು ಈ ಬಿಜೆಪಿ ಸರ್ಕಾರ ರೈತರ ಸಾಲ,ಮಹಿಳೆಯರ ಸ್ವಸಹಾಯ ಗುಂಪುಗಳ ಸಾಲ, ಕಾರ್ಮಿಕರ ಸಾಲ ಮನ್ನಾ ಮಾಡಿಲ್ಲ ಆದರೆ ದೊಡ್ಡ ದೊಡ್ಡ ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಮ್ರೇಡ್ ಶರಣಬಸಪ್ಪ ಮಾಮಶೆಟ್ಟಿ ಮಾತನಾಡುತ್ತ ಇವತ್ತು ಕೇಂದ್ರ ಸರ್ಕಾರ ರೈತ ವಿರೋಧಿ,ದುಡಿಯುವರ ವಿರೋಧಿ ಮಹಿಳೆಯರ ವಿರೋಧಿ ಈ ಬಿಜೆಪಿಯನ್ನು ನಾವು ಈ ಎಲೆಕ್ಷನ್‍ನಲ್ಲಿ ಸೋಲಿಸಬೇಕು ಎಂದು ಕರೆ ನೀಡಿದರು.

ರೈತರನ್ನು ಕೊಂದ ಕೇಂದ್ರ ಸರ್ಕಾರ ಇವತ್ತು ನಮ್ಮ ದೇಶದ ಹಣಕಾಸು ಸಚಿವೆ ಆದ ಸೀತಾರಾಮರ ಅವರ ಗಂಡ ಒಂದು ಪುಸ್ತಕದಲ್ಲಿ ಹೇಳುತ್ತಾರೆ ಇನ್ನೊಮ್ಮೆ ಬಾರಿ ಬಿಜೆಪಿ ಸರ್ಕಾರ ಬಂದರೆ ಮುಂದಿನ ಚುನಾವಣೆನೇ ಇರುವುದಿಲ್ಲ. ತೊಗರಿ ನಾಡಿನಲ್ಲಿ ತೊಗರಿ ಬೆಳೆಯುವ ರೈತರಿಗೆ ಮೋಸ ಮಾಡಿದೆ ಕೇಂದ್ರ ಸರ್ಕಾರ. ಕೋಮುವಾದಿ ಮನುವಾದಿ ಈ ಬಿಜೆಪಿ ಸರ್ಕಾರವು ಈ ಚುನಾವಣೆಯಲ್ಲಿ ಸೋಲಿಸಬೇಕೆಂದು ಸಿಪಿಎಂ ಪಕ್ಷವು ಜನತೆಯಲ್ಲಿ ವಿನಂತಿಸುತ್ತದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News