ಕಲಬುರಗಿ | ವಿಕಲಚೇತನರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

Update: 2024-11-20 09:39 GMT

ಕಲಬುರಗಿ : ನಗರದಲ್ಲಿರುವ ವಿಕಲಚೇತನರಿಗೆ ಶೇ.5ರಷ್ಟು ಅನುದಾನದಲ್ಲಿ ತ್ರಿಚಕ್ರ ವಾಹನ ಹಾಗೂ ಸರಕಾರದಿಂದ ಲಭಿಸುವ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸಿ ಮಂಗಳವಾರ ಶಹಾಬಾದ ನಗರಸಭೆಯ ಮುಂಭಾಗದಲ್ಲಿ ಶಹಾಬಾದ ತಾಲೂಕು ವಿಕಲಚೇತನ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಪ್ರತಿಭಟನೆಗೆ ಬೆಂಬಲ ನೀಡಿ ಮಾತನಾಡಿದ ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ, ವಿಕಲಚೇತನರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಕೊಡಬೇಕಾದುದು ನಗರಸಭೆಯ ಅಧಿಕಾರಿಗಳ ಮೊದಲ ಕರ್ತವ್ಯ. ಆದರೆ 2022-23ರಲ್ಲಿ ಅರ್ಜಿ ಹಾಕಿದವರಿಗೆ ತ್ರಿಚಕ್ರ ವಹನ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಮಾನ್ಯ ವ್ಯಕ್ತಿಗಳು ತಮ್ಮ ಕೆಲಸಕ್ಕೆ ಬಂದಾಗ ಅವರನ್ನು ಸತಾಯಿಸುವುದು ಕಂಡಿದ್ದೆವೆ. ಆದರೆ ವಿಕಲಚೇತನರಿಗೂ ಸತಾಯಿಸುವ ದುರ್ಬದ್ಧಿ ಯಾರಿಗೂ ಇರಕೂಡದು. ಅವರಿಗೆ ಮೊದಲ ಆದ್ಯತೆ ನೀಡಬೇಕಾದುದು ನಾಗರಿಕ ಸಮಾಜದ ಮೂಲ ಕರ್ತವ್ಯ. ಆದ್ದರಿಂದ ಕೂಡಲೇ ಅವರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

ಧರಣಿ ಸತ್ಯಾಗ್ರಹದಲ್ಲಿ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾದ ಮಲ್ಲೇಶಿ ಭಜಂತ್ರಿ, ಹೋರಾಟಗಾರ ಮಲ್ಕಣ್ಣ ಮುದ್ದಾ, ಚಂದ್ರಕಾಂತ ಪಾಟೀಲ, ಅನಿಲ ಮಠಪತಿ, ಮಲ್ಲಿಕಾರ್ಜುನ ಹಳ್ಳಿ, ಮಿಲಿಂದ ಕುಮಾರ, ಸುಭಾಸ ಕಾಂಬಳೆ, ಅಮ್ಜದ ಶರೀಫ, ಶಂಕರ, ಲಕ್ಷ್ಮಣ, ಜ್ಯೋತಿ, ಗಂಗೂಬಾಯಿ, ಲಕ್ಷ್ಮೀ, ಗೋವರ್ಧನ ರಾಠೋಡ, ನಾಗಪ್ಪ ರಾಯಚೂರಕರ, ಮಲ್ಲಿಕಾರ್ಜುನ ಕಟ್ಟಿಮನಿ, ಬಸವರಾಜ ಮಯೂರ, ರಾಘವೇಂದ್ರ ಎಂಜಿ, ಜಗನ್ನಾಥ ಎಸ್.ಎಚ್, ನರಸಿಂಹಲು, ಗೋವಾ ಬಾಬು, ಕರವೇ ವಿಶ್ವರಾಜ ಫೀರೋಜಬಾದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News