ಕಲಬುರಗಿ | ಕಿರಾಣಿ ಅಂಗಡಿ ಕಳ್ಳತನ ; ಇಬ್ಬರು ಆರೋಪಿಗಳ ಬಂಧನ

Update: 2024-11-22 16:09 GMT

ಕಲಬುರಗಿ : ನಗರದ ಆರ್.ಜಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ಎಸ್.ಕೆ ಮಿಲ್ ಹತ್ತಿರ ಕಿರಾಣಿ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಪ್ಲಂಬರ್ ಕೆಲಸ ಮಾಡುತ್ತಿದ್ದ 19 ವರ್ಷದ ಮುಹಮ್ಮದ್ ಹನೀಫ್ ಮತ್ತು ಕೂಲಿ ಕೆಲಸ ಮಾಡುತ್ತಿದ್ದ 48 ವರ್ಷದ ಕಾಳಗಿ ತಾಲೂಕಿನ ಮಕರಂಬಾ ಗ್ರಾಮದ ಮಹಿಬೂಬ ಷಾ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಕಳೆದ ಜುಲೈ 1ರಂದು ಎಮ್.ಎಸ್.ಕೆ ಮಿಲ್ ವ್ಯಾಪ್ತಿಯ ಅಕ್ಸಾ ಮಜೀದ್ ಹತ್ತಿರ ಆರಿಫ್ ಕಾಲೋನಿಯ ಮುಹಮ್ಮದ್ ತಜಮುಲ್ ಅಲಿ ಉಸ್ತಾದ ಎನ್ನುವವರ ಕಿರಾಣಿ ಅಂಗಡಿ ಕಳ್ಳತನ ನಡೆದಿತ್ತು. ಈ ಕುರಿತು ಆರ್.ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಶೋಧ ಕಾರ್ಯ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಲ್ಲದೆ, ಅವರಿಂದ ಒಂದು ಲಕ್ಷ ರೂ. ಮೌಲ್ಯದ 1 ಮೋಟರ್ ಸೈಕಲ್, 7 ಲಕ್ಷ ರೂ. ಮೌಲ್ಯದ ಬಳಿ ಬಣ್ಣದ 1 ಸ್ವೀಫ್ಟ್ ಡಿಜೈರ್ ಕಾರು, 5,000 ರೂ. ಮೌಲ್ಯದ 1 ಸ್ಯಾಮ್ಸಂಗ್ ಮೊಬೈಲ್, 19,000 ರೂ. ಹಾಗೂ 20,000 ರೂ. ಮೌಲ್ಯದ 2 ಮೋಟಾರಲಾ ಮೊಬೈಲ್, 3000 ರೂ. ನಗದು ಹಣ ಸೇರಿ ಒಟ್ಟು 8,47,000 ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣದ ಪತ್ತೆಗಾಗಿ ಉಪ-ಪೊಲೀಸ್ ಆಯುಕ್ತರಾದ ಕನಿಕಾ ಸಿಕ್ರಿವಾಲ್, ಪ್ರವೀಣ ಎಚ್.ನಾಯಕ್, ದಕ್ಷಿಣ ಉಪ-ವಿಭಾಗ ಸಹಾಯಕ ಪೊಲೀಸ್ ಆಯುಕ್ತ ಭೂತೇಗೌಡ ಅವರ ಮಾರ್ಗದರ್ಶನದಲ್ಲಿ, ಆರ್.ಜಿ ನಗರ ಪೊಲೀಸ್ ಠಾಣೆಯ ಪಿ.ಐ ಕುಬೇರ ಎಸ್.ರಾಯಮಾನೆ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಲ್ಲನಗೌಡ, ಸಿಕ್ರೇಶ್ವರ, ಉಮೇಶ, ಮುಜಾಹಿದ, ಕರಣಕುಮಾರ, ಆರೇಶ, ಆತ್ಮಕುಮಾರ ಅವರನ್ನೊಳಗೊಂಡ ತಂಡವು ಮಾಹಿತಿ ಕಲೆ ಹಾಕಿ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಅವರು ಶ್ಲಾಘಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News