ಕಲಬುರಗಿ | ದೂರದರ್ಶಕದ ಮೂಲಕ ವಿಶೇಷ ಆಕಾಶ ವೀಕ್ಷಿಸಿ : ಕೆ.ಎಂ.ಸುನಿಲ್

Update: 2024-11-22 12:43 GMT

ಸಾಂದರ್ಭಿಕ ಚಿತ್ರ | PC : Meta AI

ಕಲಬುರಗಿ : ಇಂದು ಸಂಜೆ 6.30 ರಿಂದ 9 ಗಂಟೆಯವರೆಗೆ ́ವಿಶೇಷ ಆಕಾಶ ವೀಕ್ಷಣೆʼ ಕಾರ್ಯಕ್ರಮವನ್ನು ನಗರದ RTO ಕಚೇರಿ ಹತ್ತಿರದ ಸರಕಾರಿ ಪದವಿ (ಸ್ವಾಯತ್ತ) ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಜಿಲ್ಲಾ ವಿಜ್ಞಾನ ಅಧಿಕಾರಿ ಕೆ.ಎಂ.ಸುನಿಲ್ ಅವರು ತಿಳಿಸಿದ್ದಾರೆ.

ದೂರದರ್ಶಕದ ಮೂಲಕ ಜನರು ಈ ತಿಂಗಳಲ್ಲಿ ಶನಿ ಗ್ರಹದ ಉಂಗುರಗಳನ್ನು, ಗುರು ಮತ್ತು ಶುಕ್ರ ಗ್ರಹಗಳನ್ನು ವೀಕ್ಷಿಸಬಹುದು. ರಾತ್ರಿಯ ಆಕಾಶದ ಮಾಹಿತಿ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಕೆಲವು ಆಕಾಶದ ಅದ್ಭುತಗಳನ್ನು ವೀಕ್ಷಿಸಲು ಇದು ಉತ್ತಮ ಅವಕಾಶವಾಗಿದೆ. ಆಸಕ್ತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರು ನಿಮ್ಮ ಕುಟುಂಬ ಸದಸ್ಯರೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಹೇಳಿದ್ದಾರೆ.

ಯಾವುದೇ ಹೆಚ್ಚಿನ ಮಾಹಿತಿಗಾಗಿ ದೂರವಾಣಿ 08472 – 270608 / 9788078048 ಮೂಲಕ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News