ಕಲಬುರಗಿ | ಸಂವಿಧಾನ ದಿನಾಚರಣೆ ಹಿನ್ನೆಲೆ ; ಚಿತ್ರಕಲಾ, ಟೈಕೋಥಾನ್ ಸ್ಪರ್ಧೆ ಆಯೋಜನೆ: ಪಾಲಿಕೆ ಆಯುಕ್ತ

Update: 2024-11-22 12:30 GMT

ಕಲಬುರಗಿ : ಸಂವಿಧಾನ ದಿನಾಚರಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ವತಿಯಿಂದ ಇದೇ ನ.25ರಂದು ಸಂವಿಧಾನ ವಿಷಯದ ಆಧಾರದ ಮೇಲೆ ಚಿತ್ರಕಲಾ ಮತ್ತು ಟೈಕೋಥಾನ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ತಿಳಿಸಿದ್ದಾರೆ.

ಸ್ಪರ್ಧೆಯು ಎರಡು ವಿಭಾಗಳಲ್ಲಿ ನಡೆಯಲಿದೆ. 17 ವರ್ಷದೊಳಗಿನ ಮತ್ತು 17ವರ್ಷ ಮೇಲ್ಪಟ್ಟು ಅಭ್ಯರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆ ಇರಲಿದ್ದು, ಶಾಲಾ-ಕಾಲೇಜು ಮಕ್ಕಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಟೈಕೋಥಾನ್‌ (Toycothon) ಸ್ಪರ್ಧೆಗೆ ಸಾಮಾನ್ಯವಾಗಿ ಮನೆಗಳಲ್ಲಿ ದೊರೆಯುವ ನಿರುಪಯುಕ್ತ ವಸ್ತುಗಳಿಂದ ತಯಾರಿಸಲ್ಪಡುವ ಕಲಾಕೃತಿಗಳನ್ನು ತಯಾರಿಸಿ, ನ.25ರ ಮಧ್ಯಾಹ್ನ 12ಗಂಟೆ ಒಳಗಾಗಿ ಪಾಲಿಕೆಯ ಇಂದಿರಾ ಸ್ಮಾರಕ ಭವನಕ್ಕೆ ತಂದು ನೀಡುವುದು. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರತ್ಯೇಕ ವಿಭಾಗದಲ್ಲಿ ಮೊದಲನೆಯ ಬಹುಮಾನ 15,000 ರೂ., ದ್ವಿತೀಯ ಬಹುಮಾನ 10,000 ರೂ. ಹಾಗೂ ತೃತೀಯ ಬಹುಮಾನ 5,000 ರೂ. ಗಳನ್ನು ನಗದು ನೀಡಲಾಗುತ್ತದೆ.

ಚಿತ್ರಕಲಾ ಸ್ಪರ್ಧೆಯು ನ.25ರಂದು ಬೆಳಗ್ಗೆ 10ಗಂಟೆಗೆ ನಗರದ ಇಂದಿರಾ ಸ್ಮಾರಕ ಭವನದ ಆವರಣದಲ್ಲಿ ಏರ್ಪಡಿಸಲಾಗಿರುತ್ತದೆ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರತ್ಯೇಕ ವಿಭಾಗದಲ್ಲಿ ಮೊದಲನೆಯ ಬಹುಮಾನ 10,000 ರೂ., ದ್ವಿತೀಯ ಬಹುಮಾನ 5,000 ರೂ. ಹಾಗೂ ತೃತೀಯ ಬಹುಮಾನ 3,000 ರೂ.ಗಳನ್ನು ನಗದು ನೀಡಲಾಗುತ್ತದೆ. ಈ ಸ್ಪರ್ಧೆಗೆ ತಗಲುವ ಸಾಮಗ್ರಿಗಳನ್ನು ಅಭ್ಯರ್ಥಿಗಳು ಸ್ವತಃ ತೆಗೆದುಕೊಂಡು ಬರಬೇಕು.

ಇನ್ನು, ಎರಡು ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಾಳುಗಳಿಗೆ ಭಾಗವಹಿಸಿದ ಪ್ರಮಾಣ ಪತ್ರ ನೀಡಲಾಗುವುದು ಎಂದು ಭುವನೇಶ ಪಾಟೀಲ ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News