ಕಲಬುರಗಿ | ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳ ಆಯ್ಕೆ
ಕಲಬುರಗಿ : ಶಹಾಬಾದ್ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷರು ಹಾಗೂ ವಿಭಾಗೀಯ ಉಸ್ತುವಾರಿ ಮಲ್ಲಿಕಾರ್ಜುನ ಎಸ್.ಸಾರವಾಡ ಹಾಗೂ ತಾಲೂಕು ಅಧ್ಯಕ್ಷರಾದ ಶೇಖರ ಪಾಟೀಲ್ ಅವರ ನೇತೃತ್ವದಲ್ಲಿ ತಾಲೂಕು ಪದಾಧಿಕಾರಿಗಳ ಹಾಗೂ ವಿವಿಧ ಗ್ರಾಮ ಘಟಕಗಳ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಶಹಾಬಾದ್ ತಾಲೂಕು ಉಪಾಧ್ಯಕ್ಷರಾಗಿ ಸುನೀಲ ಪೂಜಾರಿ, ಕಾರ್ಯಾಧ್ಯಕ್ಷರಾಗಿ ವಿಕಾಸ ಕರ್ಣಿಕ್, ಸಂಘಟನಾ ಕಾರ್ಯದರ್ಶಿಯಾಗಿ ಅನಿಲ್ ದೊಡ್ಮನಿ, ಕಾರ್ಯದರ್ಶಿಯಾಗಿ ಸಾಜನ್ ವಟರ್, ಪ್ರಧಾನ ಕಾರ್ಯದರ್ಶಿಯಾಗಿ ಪುನೀತ್ ಹಳ್ಳಿ, ಸಂಚಾಲಕರಾಗಿ ಸುನೀಲ ದೊಡ್ಮನಿ, ವಕ್ತಾರನ್ನಾಗಿ ಸುಮಿತ್ ಕೋರೆ, ಸಹಕಾರದರ್ಶಿಯಾಗಿ ಗೋವಿಂದ ದೊರೆ, ಸಲಹೆಗಾರರಾಗಿ ಸಂಜಯ್ ರಾಥೋಡ ಅವರನ್ನು ಆಯ್ಕೆ ಮಾಡಲಾಗಿದೆ.
ಹೊನಗುಂಟಾ ಗ್ರಾಮ ಘಟಕದ ಅಧ್ಯಕ್ಷರಾಗಿ ಯಲ್ಲಾಲಿಂಗ ಕಾರೋಳ್ಳಿ, ಉಪಾಧ್ಯಕ್ಷರಾಗಿ ಸಾಗರ ಮೇತ್ರೆ, ಕಡೆಹಳ್ಳಿ ಗ್ರಾಮ ಘಟಕದ ಅಧ್ಯಕ್ಷರಾಗಿ ಮೌನೇಶ್ ಹಳ್ಳಿ, ಉಪಾಧ್ಯಕ್ಷರಾಗಿ ಈರಣ್ಣ ಹಳ್ಳಿ, ತರನಳ್ಳಿ ಗ್ರಾಮ ಘಟಕದ ಅಧ್ಯಕ್ಷರಾಗಿ ವಿಶಾಲ ಗೌಡ, ಉಪಾಧ್ಯಕ್ಷರಾಗಿ ಮಲ್ಲು ರದ್ಧೋಡ, ತೋನಸನಹಳ್ಳಿ(ಎಸ್) ಗ್ರಾಮ ಘಟಕ ಅಧ್ಯಕ್ಷರಾಗಿ ಜೈ ಭೀಮ್ ಹುಗ್ಗಿ ಹಾಗೂ ಉಪಾಧ್ಯಕ್ಷರಾಗಿ ಶರಣು ಹುಗ್ಗಿ ರವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.