ಕಲಬುರಗಿ | ಸಾಂಸ್ಕೃತಿಕ ಸೌರಭ, ಕರ್ನಾಟಕ ಚೇತನ ಪ್ರಶಸ್ತಿ ಪ್ರದಾನ

Update: 2025-01-10 16:12 GMT

ಕಲಬುರಗಿ : ಸಂಗೀತ ಎಂಬುದು ಔಷಧದಂತೆ ಕೆಲಸ ಮಾಡುತ್ತದೆ. ಎಲ್ಲರೂ ಸಂಗೀತ ಕೇಳುವ ಮೂಲಕ ಜೀವನದಲ್ಲಿ ಶಾಂತಿ ಪಡೆಯಬಹುದಾಗಿದೆ ಎಂದು ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅಭಿಪ್ರಾಯಪಟ್ಟರು.

ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಶುಕ್ರವಾರ ಸಂಜೆ ಕರ್ನಾಟಕ ಕಲಾ ಸಾಹಿತ್ಯ ಸಂಸ್ಕೃತಿ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ʼಸಾಂಸ್ಕೃತಿಕ ಸೌರಭ ಹಾಗೂ ಕರ್ನಾಟಕ ಚೇತನ ಪ್ರಶಸ್ತಿ ಪ್ರದಾನʼ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಗೀತ ಎಂಬುದು ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ಜಾನಪದ, ತತ್ವ ಪದಕಾರರು ನಮ್ಮ ಇತಿಹಾಸ ಹಾಗೂ ನಡೆ ನುಡಿಗಳನ್ನು ಸಂಗೀತದ ಮೂಲಕ ವರ್ಣನೆ ಮಾಡಿದ್ದಾರೆ. ಸಂಗೀತ ಆಲಿಸುವುದರಿಂದ ಹಲವು ರೋಗಗಳು ನಿವಾರಣೆ ಆಗುತ್ತವೆ ಎಂದು ಸಂಶೋಧನೆಗಳು ಹೇಳಿವೆ ಎಂದರು.

ಅಫಲಪುರದ ಸಂಸ್ಥಾನ ಹಿರೇಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಮಾತನಾಡಿ, ಸಂಗೀತಕ್ಕೆ ಯಾವುದೇ ರೀತಿಯ ಕಟ್ಟಲೆಗಳಿಲ್ಲ. ಎಲ್ಲರಿಗೂ ಸಮಾನವಾಗಿ ಕಾಣುವ ಮೂಲಕ ಶ್ರೀಗುರು ಪುಟ್ಟರಾಜ ಗವಾಯಿಗಳು ಸಂಗೀತಧಾರೆ ಎರೆದಿದ್ದಾರೆ. ಅದರಲ್ಲೂ ವಿಶೇಷ ಚೇತನರ ಬಾಳಿಗೆ ಅವರು ಕಾಮಧೇನು ಆಗಿದ್ದಾರೆ ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ‘ಕರ್ನಾಟಕ ಚೇತನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪಾಲಿಕೆಯ ಮೇಯರ್ ಯಲ್ಲಪ್ಪ ನಾಯ್ಕೋಡಿ, ಕಸಾಪ ಜೇವರ್ಗಿ ಗೌರವಾಧ್ಯಕ್ಷ ಚನ್ನಮಲ್ಲಯ್ಯ ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಶಿವಶರಣಪ್ಪ ಕೋಬಾಳ, ಸದಾನಂದ ಪೆರ್ಲ, ಕಲ್ಯಾಣ ಕುಮಾರ ಸಂಗಾವಿ, ನೀಲಕಂಠ ಎಂ. ಜಮಾದಾರ, ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯ ಶಂಕರ ಹೂಗಾರ, ಪಂಚಪೀಠ ವಾರ್ತಾಧಿಕಾರಿ ಸಿದ್ರಾಮಪ್ಪ ಅಲಗೂಡಕರ್, ಕರ್ನಾಟಕ ಕಲಾ ಸಾಹಿತ್ಯ ಸಂಸ್ಕೃತಿ ಸೇವಾ ಸಂಸ್ಥೆ ಅಧ್ಯಕ್ಷ ಬಾಬುರಾವ ಕೋಬಾಳ, ಚೇತನ್ ಕೋಬಾಳ ಮತ್ತಿತರರು ಇದ್ದರು.

ಪತ್ರಕರ್ತ ಬ್ರಹ್ಮಾನಂದ ನಿಡಗುಂದಾ ಸೇರಿ ವಿವಿಧ ಕ್ಷೇತ್ರದ ಸಾಧಕರಾದ ಚಂದ್ರಶೇಖರ ಮಡಿವಾಳ, ಧರ್ಮರಾಜ ಹೇರೂರ, ಡಾ.ಎಸ್.ಎಸ್. ಪಾಟೀಲ್, ಓಂ ಪ್ರಕಾಶ ಬರಸಾನೂರಮಠ, ಶಿವರಾಜ ಬಸವರಾಜ ಮುರಡಿ, ರಾಜಶೇಖರ ಹಡಪದ, ವಿಜಯಕುಮಾರ ಸಾಲಿಮಠ, ವಿಶ್ವನಾಥ ಸಾಹು, ಜ್ಯೋತಿ ಹಂಚಾಟೆ ಸೇರಿ ಹಲವರಿಗೆ ಕರ್ನಾಟಕ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News