ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆಗೆ ಖಂಡನೆ: ಜೇವರ್ಗಿ ಬಂದ್ ಗೆ ಉತ್ತಮ ಸ್ಪಂದನ
ಕಲಬುರಗಿ: ಸಂಸತ್ ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್ ಶಾ ನೀಡಿರುವ ಅವಮಾನಕಾರಿ ಹೇಳಿಕೆಯನ್ನು ಖಂಡಿಸಿ ದಲಿತ ಪರ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಜೇವರ್ಗಿ ಬಂದ್ ಗೆ ಉತ್ತಮ ಸ್ಪಂದನ ವ್ಯಕ್ತವಾಗಿತ್ತು.
ಅಂಬೇಡ್ಕರ್ ರನ್ನು ಅವಹೇಳನ ಮಾಡಿರುವ ಅಮಿತ್ ಶಾ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಇಲ್ಲದಿದ್ದರೆ ಅಮಿತ್ ಶಾರನ್ನು ಪ್ರಧಾನಿ ಸಂಪುಟದಿಂದ ಕಿತ್ತೊಗೆಯಬೇಕೆಂದು ಆಗ್ರಹಿಸಿ, ದಲಿತ ಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದವು.
ಪಟ್ಟಣದಲ್ಲಿ ವ್ಯಾಪಾರಸ್ಥರು, ವಹಿವಾಟುದಾರರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು. ವಾಹನಗಳ ಓಡಾಟ ವಿರಳವಾಗಿದ್ದರಿಂದ ರಸ್ತೆಗಳು ಬಿಕೋ ಎನ್ನುತ್ತಿದ್ದವು.
ದಲಿತ ಪರ ಸಂಘಟನೆಗಳ ಜೊತೆಗೆ ಇತರೆ ಸಂಘಟನೆಗಳು ಸಹ ಬೆಂಬಲ ವ್ಯಕ್ತಪಡಿಸಿದ್ದವು. ಪಟ್ಟಣದಲ್ಲಿ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳುವ ಮೂಲಕ ಗೃಹಸಚಿವರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪ್ರಮುಖ ರಸ್ತೆಯಲ್ಲಿ ಪ್ರತಿಭಟಿಸಿ, ಅಮಿತ್ ಶಾ ಅವರ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಚಂದ್ರಶೇಖರ್ ಹರನಾಳ, ಶಾಂತಪ್ಪ ಕೂಡಲಗಿ ಸುಭಾಷ್ ಚನ್ನೂರ್, ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ಅಲ್ಲಾಭಕ್ಷ ಬಾಗ್ ಬಾನ್ ಪುಂಡಲಿ ಗಾಯಕ್ವಾಡ್ ಸುರೇಶ್ ಮೆಂಗನ್ ಶರಣಬಸವ ಕಲ್ಲಾ, ಕಾಸಿಂ ಪಟೇಲ್ ಮುದುವಾಳ, ವಿಜಯ್ ಕುಮಾರ್ ಹಿರೇಮಠ, ಮದನ ಗುಡುರ, ರವಿಚಂದ್ರ ಗುತ್ತೇದಾರ, ಗಿರೀಶ್ ತುಂಬಗಿ, ನಿಂಗಣ್ಣ ರದ್ದೇವಾಡಗಿ, ದೇವೇಂದ್ರ ಗುತ್ತೇದಾರ, ಪರಮೇಶ ಬಿರಾಳ, ಧನರಾಜ ರಾಠೋಡ, ಮಲ್ಲಿಕಾರ್ಜುನ ದಿನ್ನಿ ಮುಈನುದ್ದೀನ್ ಇನಾಮದಾರ್, ಭೀಮಾಶಂಕರ್ ಬಿಲ್ಲಾಡ್, ಇಬ್ರಾಹೀಂ ಪಟೇಲ್, ಮಾನಪ್ಪ ಗೋಗಿ, ಬಿ.ಎಚ್.ಮಾಲಿ ಪಾಟೀಲ್, ಗುರುಲಿಂಗಯ್ಯ ಸ್ವಾಮಿ ಹಿರೇಮಠ, ಬೆಣ್ಣಪ್ಪ ಕೊಂಬಿನ್, ನಿಜಲಿಂಗ ದೊಡ್ಡಮನಿ, ಮಲ್ಲಮ್ಮ ಕೊಂಬಿನ್, ರಾಜಶೇಖರ್ ಶಿಲ್ಪಿ, ಮಹಾದೇವ ಕೋಳಕೂರ್, ರವಿ ಕುಳಗೇರಿ, ಸಿದ್ದು ಕೆರೂರ್, ಮಾಪಣ್ಣ ಕಟ್ಟಿ, ಶ್ರೀ ಹರಿ ಕರಕಳ್ಳಿ, ವಿಶ್ವರಾಧ್ಯ ಮಾಯೆ, ಭಾಗಣ್ಣ ರದ್ದೇವಾಡಗಿ, ಅಮೀನಪ್ಪ ಹೊಸ್ಮನಿ, ಪರಶುರಾಮ್ ಮುದುವಾಳ, ಸಿದ್ದು ಮುದುವಾಳ, ಭಾಗಣ್ಣ ಸಿದ್ನಾಳ, ದೇವೇಂದ್ರ ಮುದುವಾಳ, ರಾಯಪ್ಪ ಬಾರಿಗೀಡ, ಶ್ರೀಮಂತ ಧನಕರ್, ಯಶವಂತ್ ಬಡಿಗೇರ್, ಮಿಲಿನ್ ಸಾಗರ್, ಪರಶುರಾಮ್ ನಡುಗಟ್ಟಿ, ದೇವೇಂದ್ರ ಬಡಿಗೇರ, ವಿಶ್ವ ಆಲೂರು, ಅಮರ್ ಬೊಮ್ಮನಹಳ್ಳಿ, ಶ್ರೀಮಂತ್ ಕಿಲ್ಲೆದಾರ್, ಮೌನೇಶ್ ಹಂಗರಗಿ, ಆನಂದ್ ಕೊಂಬಿನ್ ಸೇರಿದಂತೆ ಇತರರು ಇದ್ದರು.