ಬೇಕಲ: ಗ್ರಾಹಕನ ಸೋಗಿನಲ್ಲಿ ಬಂದು ಅಂಗಡಿ ಮಾಲಕನ ಮೊಬೈಲ್ ಎಗರಿಸಿದ ಕಳ್ಳ

Update: 2023-11-02 04:39 GMT

ಕಾಸರಗೋಡು, ನ.2: ಅಂಗಡಿಯೊಂದಕ್ಕೆ ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿಯೋರ್ವ ಅಂಗಡಿಯ ಮೇಜಿನ ಮೇಲೆ ಇಟ್ಟಿದ್ದ ಮೊಬೈಲ್ ಫೋನ್ ನ್ನು ಎಗರಿಸಿ ಪರಾರಿಯಾದ ಘಟನೆ ಬೇಕಲ ಠಾಣಾ ವ್ಯಾಪ್ತಿಯ ಚಿತ್ತಾರಿಯಲ್ಲಿ ನಡೆದಿದೆ.

ಚಿತ್ತಾರಿ ಚೇಟುಕುಂಡು ಎಂಬಲ್ಲಿನ ಸೂಪರ್ ಮಾರ್ಕೆಟ್ ನಲ್ಲಿ ಈ ಕಳ್ಳತನ ನಡೆದಿದೆ. ಮೊಬೈಲ್ ಫೋನ್ ಕಳವು ಮಾಡಿ ಪರಾರಿಯಾಗುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅಕ್ಟೋಬರ್ 18ರಂದು ರಾತ್ರಿ 10:45ರ ಸುಮಾರಿಗೆ ಸೂಪರ್ ಮಾರ್ಕೆಟ್ ಗೆ ಸಾಮಗ್ರಿ ಖರೀದಿಸುವ ನೆಪದಲ್ಲಿ ಬಂದಿದ್ದ ವ್ಯಕ್ತಿಯೋರ್ವ ಈ ಕೃತ್ಯ ನಡೆಸಿದ್ದಾನೆ. ಆತ ಕೇಳಿದ ಸಾಮಗ್ರಿಯನ್ನು ಮಾಲಕ ಹುಡುಕುತ್ತಿದ್ದಂತೆ ಮೇಜಿನ ಮೇಲೆ ಇಟ್ಟಿದ್ದ ಮೊಬೈಲ್ ಫೋನ್ ಅನ್ನು ಎಗರಿಸಿ ಆತ ಪರಾರಿಯಾಗಿದ್ದಾನೆ. ಕಳವಾದ ಮೊಬೈಲ್ ಮೌಲ್ಯ ಸುಮಾರು 30 ಸಾವಿರ ರೂ. ಎಂದು ಹೇಳಲಾಗಿದೆ.

ಈ ಬಗ್ಗೆ ಸೂಪರ್ ಮಾರ್ಕೆಟ್ ಮಾಲಕ ಮುಹಮ್ಮದ್ ರಫೀಕ್ ಬೇಕಲ ಠಾಣೆಗೆ ದೂರು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News