ಡಿ.3ರಂದು ಶಾಲೆ, ಮದ್ರಸ, ಕಾಲೇಜುಗಳಿಗೆ ರಜೆ: ಕಾಸರಗೋಡು ಜಿಲ್ಲಾಧಿಕಾರಿ
Update: 2024-12-02 12:45 GMT
ಕಾಸರಗೋಡು: ಭಾರೀ ಮಳೆಯ ಮುನ್ಸೂಚನೆ ಹಾಗೂ ಕೇಂದ್ರ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ ಹಿನ್ನೆಲೆಯಲ್ಲಿ ಡಿ.3ರಂದು ಕಾಸರಗೋಡು ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ. ಇಂಪಾಶೇಖರ್ ಆದೇಶ ನೀಡಿದ್ದಾರೆ.
ಪ್ರೊಫೆಷನಲ್ ಕಾಲೇಜು, ಟ್ಯೂಷನ್ ಕೇಂದ್ರ, ಅಂಗನವಾಡಿ, ಮದ್ರಸಗಳಿಗೆ ರಜೆ ಅನ್ವಯವಾಗಲಿದೆ. ಆದರೆ ಮೋಡಲ್ ರೆಸಿಡೆನ್ಶಿಯಲ್ ಶಾಲೆಗಳಿಗೆ ರಜೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನದಿಂದ ಭಾರೀ ಮಳೆ ಸುರಿಯುತ್ತಿದೆ. ಮುಂದಿನ ಎರಡು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.