ಕಾಸರಗೋಡು: ಜಾಮಿಯಾ ಸಅದಿಯಾ ಅರೇಬಿಯಾದ 55ನೇ ವಾರ್ಷಿಕ ಸಮ್ಮೇಳನ

Update: 2024-11-20 18:29 GMT

ದೇಳಿ(ಕಾಸರಗೋಡು) : ಶಿಕ್ಷಣ ಕ್ಷೇತ್ರದಲ್ಲಿ ಅರ್ಧ ಶತಮಾನವನ್ನು ಪೂರೈಸಿದ ಜಾಮಿಯಾ ಸಅದಿಯಾ ಅರೇಬಿಯಾದ 55ನೇ ವಾರ್ಷಿಕ ಸಮ್ಮೇಳನ ದೇಳಿಯ ಸದಾಬಾದ್‌ನಲ್ಲಿ ಧ್ವಜಾರೋಹನಗೊಳಿಸಲಾಯಿತು.

ಸ್ವಾಗತ ಸಮಿತಿಯ ಅಧ್ಯಕ್ಷ ಸೈಯದ್ ಹಸನುಲ್ ಅಹ್ದಲ್ ತಂಙಳ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಧ್ವಜವನ್ನು ಹಾರಿಸುವ ಮೊದಲು ಸಾಗಿ ಬಂದ 55 ವರ್ಷಗಳ ಸಂಕೇತವಾಗಿ ಎಸ್ ವೈ ಎಸ್, ಎಸ್ಎಸ್ಎಫ್ ಮತ್ತು ಎಂಎಸ್ಎಸ್ಎ , ಸಅದಿಯಾ ಶರಿಯತ್ ಕಾರ್ಯಕರ್ತರು ತಲಾ 55 ಸಮಸ್ತದ ಧ್ವಜವನ್ನು ಹಿಡಿದು ಧ್ವಜ ಯಾನ ನಡೆಸಿದರು.

ಸಮಸ್ತದ ಪ್ರಸ್ತುತ ಧ್ವಜವನ್ನು ಅನುಮೋದಿಸಲು ಹಿಂದೆ ಸಮಸ್ತ ಸಮ್ಮೇಳನ ನಡೆದ ಮಲಿಕ್ ದಿನಾರ್ ನಿಂದಾಗಿದೆ 165 ಸದಸ್ಯರ ಕ್ರಿಯಾ ಸಂಘ ಸಮಸ್ತದ ತ್ರಿವರ್ಣ ಧ್ವಜವನ್ನು ತೆಗೆದುಕೊಂಡು ಸಅದಾಬಾದ್ ಕಡೆಗೆ ಮೆರವಣಿಗೆ ನಡೆದರು. ಎಸ್ವೈಎಸ್ ಜಿಲ್ಲಾಧ್ಯಕ್ಷ ಕಾಟ್ಟಿಪ್ಪರ ಅಬ್ದುಲ್ ಖಾದಿರ್ ಸಖಾಫಿ ನೇತೃತ್ವದಲ್ಲಿ ನಡೆದ ಮೆರವಣಿಗೆಯನ್ನು ಸಅದಿಯ್ಯ ಕೋಶಾಧಿಕಾರಿ ಕಲ್ಲತ್ರ ಮಾಹಿನ್ ಹಾಜಿ ಧ್ವಜ ಹಸ್ತಾಂತರಿಸುವ ಮೂಲಕ  ಚಾಲನೆ ನೀಡಿದರು.

ಮಾಲಿಕ್ ದಿನಾರ್ ಝಿಯಾರತ್ ನೇತೃತ್ವವನ್ನು ಸಯ್ಯದ್ ಪಿ.ಎಸ್.ಅಟಕೋಯ ತಂಙಳ್ ಬಾಹಸನ್ ಪಂಚಿಕಲ್ ವಹಿಸಿದ್ದರು. ಸಅದಾಬಾದ್ ತಲುಪಿದ ಧ್ವಜ ಮೆರವಣಿಗೆಯನ್ನು ಕಾರ್ಯದರ್ಶಿ ಸೈಯದ್ ಝೈನುಲ್ ಅಬಿದಿನ್ ಕಣ್ಣವಂ ತಂಙಳ್ ಅವರ ನೇತೃತ್ವದಲ್ಲಿ ಸಾಂಸ್ಥಿಕ ನಾಯಕರು ಮತ್ತು ರಾಜ್ಯ ನಾಯಕರು ಸ್ವಾಗತಿಸಿದರು.

ನೂರುಲ್ ಉಲಮಾ ಮಕ್ಬರಾ ಝಿಯಾರತ್ ನೇತೃತ್ವವನ್ನು ಸಯ್ಯದ್ ಕೆ.ಎಸ್.ಅಟಕೋಯ ತಂಙಳ್ ಕುಂಬೋಲ್ ವಹಿಸಿದ್ದರು. ಎ.ಪಿ.ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕ್ಕೋಟ್, ಸಯ್ಯದ್ ಇಸ್ಮಾಯಿಲ್ ಹಾದಿ ತಂಙಳ್ ಪಾಣೂರು, ಸಯ್ಯದ್ ಇಬ್ರಾಹಿಂ ಪೂಕ್ಕುಂಜಿ ತಂಙಳ್ ಕಲ್ಲಗಟ್ಟ, ಸಯ್ಯದ್ ಅಟಕೋಯ ತಂಙಳ್ ಅಡೂರು, ಸಯ್ಯದ್ ಅಲವಿ ತಂಙಳ್ ಚೆತ್ಕುಳಿ, ಕೆ.ಪಿ.ಹುಸೇನ್ ಸಅದಿ ಕೆ.ಸಿ.ರೋಡ್, ಬಿ.ಎಸ್.ಅಬ್ದುಲ್ಲಕುಂಇ್ ಫೈಝಿ, ಕೆ.ಕೆ.ಹುಸೇನ್ ಬಾಖವಿ, ಉಬೈದುಲ್ಲಾಹಿ ಸಅದಿ ನದ್ವಿ, ಅಬ್ದುಲ್ ರಹ್ಮಾನ್ ಹಾಜಿ ಬಹ್ರೇನ್, ಶಾಫಿ ಹಾಜಿ ಕೀಝೂರು, ಸಯ್ಯದ್ ಜಾಫರ್ ಸಾದಿಕ್ ತಂಙಳ್ ಮಾಣಿಕ್ಕೋತ್, ಸಯ್ಯದ್ ಅಝರ್ ತಂಙಳ್, ಸಯ್ಯದ್ ಹಿಬ್ಬತುಲ್ಲಾ ಅಹ್ಸನಿ ಅಲ್ ಮಶೂರ್, ಅಬ್ದುಲ್ ವಹಾಬ್ ತೃಕ್ಕರಿಪುರ, ಅಬ್ದುಲ್ ಕರೀಂ ಸಅದಿ ಏನಿಯಾಡಿ, ಮುಹಮ್ಮದ್ ರಫೀಕ್ ಸಅದಿ ದೇಲಂಪಾಡಿ, ಅಬ್ದುಲ್ಲಾ ಹಾಜಿ ಫ್ರೀ ಕುವೈತ್, ಕೊವ್ವಾಲ್ ಅಮು ಹಾಜಿ, ಶಾಫಿ ಹಾಜಿ ಕಟ್ಟಕ್ಕಲ್, ಅಬ್ಬಾಸ್ ಹಾಜಿ ಕುಂಜಾರ್, ಬಶೀರ್ ಪುಲಿಕೂರು, ಅಬ್ದುಲ್ ಕರೀಂ ದರ್ಬಾರ್ ಕಟ್ಟಾ, ಅಹ್ಮದಲಿ ಬೆಂಡಿಚಾಲ್, ಇಸ್ಮಾಯಿಲ್ ಸಅದಿ ಪಾರಪಳ್ಳಿ, ಅಬ್ದುಸ್ಸಲಾಂ ಬಿ.ಎ. ಅಲಿ ಮೊಗ್ರಾಲ್, ಸಿ.ಪಿ.ಅಬ್ದುಲ್ಲಾ ಹಾಜಿ ಚೆರುಂಬ, ಪಿ.ಎಸ್.ಮುಹಮ್ಮದ್ ಹಾಜಿ ಪೂಚಕ್ಕಾಡ್, ಇತಿಹಾದ್ ಮುಹಮ್ಮದ್ ಹಾಜಿ, ಹಸೈನಾರ್ ಸಖಾಫಿ ಕುನಿಯಾ, ಡಾ. ನ್ಯಾಷನಲ್ ಅಬ್ದುಲ್ಲಾ, ಹನೀಫ್ ಅನೀಸ್, ಶರೀಫ್ ಸಅದಿ ಮಾವಿಲಾಡಂ, ಉಸ್ಮಾನ್ ಸಅದಿ, ಅಶ್ರಫ್ ಕರಿಪೊಡ್ಡಿ, ಅಲಿ ಪೂಚಕ್ಕಾಡ್, ನಾಸಿರ್ ಬಂತಡ್, ಶಿಹಾಬ್ ಪರಪ್ಪ, ಫೈಸಲ್ ಎಥಿರಾಥೋಡ್, ಸಿಎಂಎ ಚೇರೂರು, ಅಬ್ದುಲ್ ರಹಮಾನ್ ಎರೋಳ್ ಮತ್ತಿತರರು ಉಪಸ್ಥಿತರಿದ್ದರು.

ಗುರುವಾರ ಬೆಳಿಗ್ಗೆ 10ಕ್ಕೆ ಎ.ಪಿ.ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕ್ಕೋತ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಪ್ರವಾಸಿ ಸಮ್ಮೇಳನವನ್ನು ಸಯ್ಯದ್ ಕೆ.ಎಸ್.ಅಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸಲಿದ್ದಾರೆ. ಕೂಟಂಪರ ಅಬ್ದುಲ್ ರಹಮಾನ್ ದಾರಿಮಿ, ಕೆಕೆಎಂ ಸಅದಿ ಮತ್ತು ಅಹ್ಮದ್ ಶಿರಿನ್ ತರಗತಿ ನಡೆಸಲಿದ್ದು, ಗೃಹಿಣಿಯರಿಗಾಗಿ ಅಫಿಫಾ ಅಮೀನ್ ತರಗತಿಯನ್ನು ಮುನ್ನಡೆಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.




 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News