ಕಾಸರಗೋಡು | ಜಾಮಿಯಾ ಸ-ಅದಿಯ ‘ಕ್ವೀನ್ಸ್ ಲ್ಯಾಂಡ್' ಹಾಸ್ಟೆಲ್ ಉದ್ಘಾಟನೆ

Update: 2024-11-16 16:12 GMT
Photo of program
  • whatsapp icon

ಕಾಸರಗೋಡು : ಸಮುದಾಯಕ್ಕೆ ಶಿಕ್ಷಣ ನೀಡುವುದು ಪವಿತ್ರ ಕಾರ್ಯ ಎಂದು ರಾಜ್ಯದ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಶನಿವಾರ ಕಾಸರಗೋಡು ಜಾಮಿಯಾ ಸ-ಅದಿಯಾ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ‘ಕ್ವೀನ್ಸ್ ಲ್ಯಾಂಡ್' ಹಾಸ್ಟೆಲ್ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಸಮುದಾಯದ ಮಕ್ಕಳಿಗೆ ಶಿಕ್ಷಣ ದೊರೆತಾಗ ಮಾತ್ರ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಜಾಮಿಯಾ ಸ-ಅದಿಯ ಸಂಸ್ಥೆ ಎಂಟು ಸಾವಿರ ಮಕ್ಕಳಿಗೆ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ವ್ಯವಸ್ಥೆ ಕಲ್ಪಿಸಿರುವುದು ಶ್ಲಾಘನೀಯ. ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಿ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಶಾಫಿ ಸಅದಿ ಇಲ್ಲಿನ ವಿದ್ಯಾರ್ಥಿ ಆಗಿರುವುದು ಸಂತಸದ ವಿಚಾರ. ಎ.ಪಿ.ಉಸ್ತಾದ್ ಅವರ ಮಾರ್ಗದರ್ಶನದಲ್ಲಿ ಈ ಸಂಸ್ಥೆ ಮತ್ತಷ್ಟು ಶಿಕ್ಷಣ ಸೇವೆ ಮಾಡಲಿ ಎಂದು ಅವರು ಹಾರೈಸಿದರು.

ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತ ಸಮುದಾಯದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ್ದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬಜೆಜ್ ನಲ್ಲಿ 540 ಕೋಟಿ ರೂ. ಶಿಕ್ಷಣಕ್ಕೆ ಮೀಸಲಿಟ್ಟಿದ್ದೇವೆ. ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್, ವಿದೇಶಿ ವ್ಯಾಸಂಗಕ್ಕೂ 20 ಲಕ್ಷ ರೂ. ವರೆಗೆ ನೆರವು ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೇರಳದ ಮಾಜಿ ಸಚಿವ ಸಿ.ಟಿ.ಅಹಮದ್, ಬಾದಷಾ ಸಖಾಫಿ, ಮೌಲಾನ ಶಾಫಿ ಸಅದಿ, ಉದ್ಯಮಿ ನೌಫಲ್, ಮುಖಂಡರಾದ ಅಬೂಬಕ್ಕರ್ ಹಾಜಿ, ಮುಹಮ್ಮದ್ ಅಲಿ ಸಖಾಫಿ, ಮಹಿನಾ ಹಾಜಿ, ಹುಸೇನ್ ಸಯಿದಿ, ಜಿ.ಎ.ಬಾವಾ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News