ಸಿರಿಬಾಗಿಲು ಪ್ರತಿಷ್ಠಾನ | ಸಾಂಸ್ಕೃತಿಕ ಭವನದ ಪ್ರಥಮ ವಾರ್ಷಿಕೋತ್ಸವ ಸಮಾಪ್ತಿ

Update: 2024-12-29 08:38 GMT

ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾಮದ ಸಾಂಸ್ಕೃತಿಕ ಭವನದ ಪ್ರಥಮ ವಾರ್ಷಿಕೋತ್ಸವವು ಡಿ 26, ಗುರುವಾರ ವಿವಿಧ ಕಾರ್ಕ್ರಮಗಳೊಓಂದಿಗೆ ಸಮಾಪ್ತಿಯಾಯಿತು.

ಹಾವೇರಿ‌ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಇದರ ಗೌರವಾಧ್ಯಕ್ಷ ಶೇಖರ ಗೌಡ ಪಾಟೀಲ ಚಿಕ್ಕಕಬ್ಬಾರ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.  ಶ್ರೀ ಶಂಕರಾಚಾರ್ಯ ಸಂಸ್ಥಾನಂ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವವಚನ ನೀಡಿದರು. ಕೊಕ್ಕಡ ವೆಂಕಟರಮಣ ಭಟ್ ಇವರಿಗೆ ಸಿರಿಬಾಗಿಲು ವೆಂಕಪ್ಪಯ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಮಧುರ ಉಪಾಧ್ಯ ಬೆಂಗಳೂರು ಇವರಿಗೆ ಸಿರಿಬಾಗಿಲು ಪ್ರತಿಷ್ಠಾನದ ಮಹಾಪೋಷಕ ಗೌರವ ನೀಡಲಾಯಿತು.

ಹೊರ ರಾಜ್ಯದ ಕನ್ನಡಿಗರಾಗಿ ಗುಜರಾತ್ ವಾಪಿಯಲ್ಲಿರುವ ಶಂಕರನಾರಾಯಣ ಕಾರಂತ ಪಣಂಬೂರು ಇವರನ್ನು ಗೌರವಿಸಲಾಯಿತು.ಸಿರಿಬಾಗಿಲು ಪ್ರತಿಷ್ಠಾನದ ಯಕ್ಷಗಾನ ನಾಟ್ಯ ತರಗತಿಯ ಶಿಕ್ಷಕ ಲಕ್ಷ್ಮಣ ಕುಮಾರ್ ಮರಕಡ ಅವರನ್ನು ಪ್ರತಿಷ್ಠಾನ ವತಿಯಿಂದ ಹಾಗೂ ವಿದ್ಯಾರ್ಥಿಗಳ ಪೋಷಕರು ಸೇರಿ ಗೌರವಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಮಯ್ಯ ದಂಪತಿಗಳನ್ನು ನಾಟ್ಯ ತರಗತಿಗಳ ವಿದ್ಯಾರ್ಥಿಗಳ ಪೋಷಕರು, ವಿದ್ಯಾರ್ಥಿಗಳು ಸೇರಿ ಗೌರವಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ಕೊಕ್ಕಡ ವೆಂಕಟರಮಣ ಭಟ್, ಡಾ. ಪ್ರಭುಸ್ವಾಮಿ ಹಾಲೆವಾಡಿಮಠ ,ಡಾ.ಎಸ್.ಹನುಮಂತಪ್ಪ ಹಾವೇರಿ ,ಶ್ರೀಧರ ಶೆಟ್ಟಿ ಮುಟ್ಟಂ, ಗೋಪಾಲ ಶೆಟ್ಟಿ ಅರಿಬೈಲು, ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟತ್ತೋಡಿ, ಗೋಪಿಕಾ ಸತೀಶ ಮಯ್ಯ,  ನರಸಿಂಹಮೂರ್ತಿ ಟಿ., ಡಾ. ಗಂಗಯ್ಯ ಕುಲಕರಣಿ, ಧರ್ಮಸ್ಥಳ ಯೋಜನಾಧಿಕಾರಿ ಮುಕೇಶ್ ಮುಂತಾದವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವಾರ್ಷಿಕೋತ್ಸವ ಪ್ರಯುಕ್ತ ಊರಿನ ತಂಡಗಳ ಭಜನಾ ಕಾರ್ಯಕ್ರಮ, ಪ್ರತಿಷ್ಠಾನದ ಮುಂದಿನ ಪೀಳಿಗೆಗೆ ಹಸ್ತಾಂತರ ಯೋಜನೆಯಡಿ ಮಕ್ಕಳ ತಂಡದ ತಾಳಮದ್ದಲೆ ಕಾರ್ಯಕ್ರಮ, ಪ್ರತಿಷ್ಠಾನದಲ್ಲಿ ಯಕ್ಷಗಾನ ನಾಟ್ಯ ಕಲಿತ ವಿದ್ಯಾರ್ಥಿಗಳ ರಂಗ ಪ್ರವೇಶ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಪ್ರತಿಷ್ಠಾನದ ತಂಡದಿಂದ ಗರುಡ ಗರ್ವಭಂಗ ಯಕ್ಷಗಾನ ಪ್ರದರ್ಶನ ನಡೆಯಿತು.

ಕೃಷ್ಣ ಕಾರಂತ ಬನ್ನೂರು, ಎಸ್. ಎನ್. ರಾಮ ಶೆಟ್ಟಿ, ಸೀನ ಶೆಟ್ಟಿ ಕಜೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಅತಿಥಿಗಳನ್ನು ಸ್ವಾಗತಿಸಿದರು. ಚಂದ್ರಕಲಾ ನೀರಾಳ ಇವರು ಕಾರ್ಯಕ್ರಮ ನಿರೂಪಿಸಿದರು,  ವಿದ್ಯಾಶ್ರೀ ನೀರಾಳ ಇವರು ಧನ್ಯವಾದ ಸಲ್ಲಿಸಿದರು. ಸಿರಿಬಾಗಿಲು ಗ್ರಾಮಸ್ಥರು ಪ್ರತಿಷ್ಠಾನದ ವಿದ್ಯಾರ್ಥಿಗಳ ಪೋಷಕರು ಊರ, ಪರವೂರ ಗಣ್ಯಾತಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



Delete Edit


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News