ಪಡನ್ನಕ್ಕಾಡ್ | ಕಾರಿಗೆ ಸರಕಾರಿ ಬಸ್ ಢಿಕ್ಕಿ: ಇಬ್ಬರು ಮಕ್ಕಳು ಮೃತ್ಯು; ಐವರಿಗೆ ಗಂಭೀರ ಗಾಯ

Update: 2024-12-29 10:31 GMT

ಕಾಸರಗೋಡು: ಕೆಎಸ್ಸಾರ್ಟಿಸಿ ಬಸ್ ಕಾರು ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಪಡನ್ನಕ್ಕಾಡ್ ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ನೀಲೇಶ್ವರ ಕಣಿಚ್ಚರದ ರಹ್ಮಾನ್(5) ಮತ್ತು ಲಹೆಕ್ ಝೈನಬಾ (12) ಮೃತಪಟ್ಟವರು.

ಝುಹರಾ (40), ಶೆರಿನ್(15), ಕಾರು ಚಾಲಕ ಫಾಯಿಝ್, ಬಸ್ ಪ್ರಯಾಣಿಕರಾದ ಸೂರ್ಯ, ಅನಿಲ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಝುಹರಾ ಮತ್ತು ಶೆರಿನ್ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಕಣ್ಣೂರು ಕಡೆಗೆ ತೆರಳುತ್ತಿದ್ದ ಕಾರು ಮತ್ತು ಎದುರಿನಿಂದ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮಧ್ಯೆ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿ ಕಾರಿನಲ್ಲಿದ್ದವರನ್ನು ಹೊರತೆಗೆದರೂ ಅಷ್ಟರಲ್ಲಿ ಮಕ್ಕಳಿಬ್ಬರು ಕೊನೆಯುಸಿರೆಳೆದಿದ್ದರು.

ಗಾಯಗೊಂಡವರನ್ನು ಕಾಞಾಂಗಾಡ್ ನಲ್ಲಿರುವ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News