ಉಪ್ಪಳ : ಸೇತುವೆಯಿಂದ ನದಿಗೆ ಹಾರಿದ್ದ ವ್ಯಕ್ತಿಯ ಮೃತದೇಹ ಪತ್ತೆ
Update: 2024-12-30 08:19 GMT
ಕಾಸರಗೋಡು: ಸೇತುವೆಯಿಂದ ನದಿಗೆ ಹಾರಿ ನಾಪತ್ತೆಯಾಗಿದ್ದ ಮೀಪುಗಿರಿ ನಿವಾಸಿಯ ಮೃತದೇಹ ಉಪ್ಪಳ ಮೂಸೋಡಿ ಕಡಲ ಕಿನಾರೆಯಲ್ಲಿ ರವಿವಾರ ರಾತ್ರಿ ಪತ್ತೆಯಾಗಿದೆ.
ಮೀಪುಗುರಿ ಶೆಟ್ಟಿ ಗದ್ದೆಯ ನ ಎಂ.ಗಿರೀಶ್(49) ಮೃತ ವ್ಯಕ್ತಿ. ಶುಕ್ರವಾರದಂದು ಚಂದ್ರಗಿರಿ ಸೇತುವೆಯ ಬಳಿ ಗಿರೀಶ್ ಅವರು ಬೈಕ್, ಚಪ್ಪಲಿ, ಪರ್ಸ್ ಬಿಟ್ಟು ನದಿಗೆ ಹಾರಿದ್ದರು.
ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರು ಸೇರಿ ಹುಡುಕಾಡಿದರೂ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಈ ಮಧ್ಯೆ ಉಪ್ಪಳ ಕಡಲ ಕಿನಾರೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ