ಕಾಸರಗೋಡು: ತಂದೆಯ ಕೊಲೆ ಆರೋಪಿ ಆತ್ಮಹತ್ಯೆ
Update: 2025-01-07 07:19 GMT
ಕಾಸರಗೋಡು: ತಂದೆಯನ್ನು ಕೊಲೆಗೈದ ಪ್ರಕರಣದ ಆರೋಪಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಪಳ್ಳಿಕೆರೆಯ ಪ್ರಮೋದ್(35) ಮೃತಪಟ್ಟ ವ್ಯಕ್ತಿ. ಉದುಮದ ನಾಲಂ ವಾದುಕಲ್ ನಲ್ಲಿರುವ ಪತ್ನಿಯ ಮನೆಯ ಬಾವಿಯ ಅಡ್ಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೇಲ್ಪರಂಬ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿದರು.
2024 ಎಪ್ರಿಲ್ 1ರಂದು ಪ್ರಮೋದ್ ನ ತಂದೆ ಅಪ್ಪ ಕುಂಙರನ್ನು ಪಿಕ್ಕಾಸ್ ಹಾಗೂ ತೆಂಗಿನಕಾಯಿ ಸುಲಿಯುವ ಪಾರೆಕೋಲುನಿಂದ ಹೊಡೆದು ಕೊಲೆಗೈಯ್ಯಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ಪ್ರಮೋದ್ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದನು.