ಕ್ಲಾಸ್ ರೂಮಿನಲ್ಲಿ ಕಲಿಯುವ ವಿದ್ಯಾರ್ಥಿಗಳಿಂದ ಮಾತ್ರ ದೇಶ ಬಲಿಷ್ಟಗೊಳಿಸಲು ಸಾಧ್ಯ: ಸ್ಪೀಕರ್ ಯುಟಿ ಖಾದರ್
ಕಾಸರಗೋಡು: ಮಕ್ಕಳು ತಂದೆ ತಾಯಿಗಳಿಗೆ ಮಾತ್ರವಲ್ಲದೆ ದೇಶಕ್ಕೂ ಸಮಾಜಕ್ಕೂ ಉತ್ತಮರಾಗಬೇಕು ಎಂಬ ನಿಟ್ಟಿನಲ್ಲಿಯೇ ಸಅದಿಯ್ಯಾ ಸ್ಥಾಪಿಸಲಾಗಿದೆ. ಇದುವೇ ನಿಜವಾದ ದೇಶಪ್ರೇಮ. ಇಂತಹಾ ಪ್ರವರ್ತನೆಗಳಿಂದ ಮಾತ್ರ ದೇಶ ಜಗತ್ತಿನಲ್ಲಿ ಮುಂಚೂಣಿಗೆ ಬರಲು ಸಾಧ್ಯ ಎಂದು ಸ್ಪೀಕರ್ ಯು ಟಿ ಖಾದರ್ ಹೇಳಿದರು.
ಜಾಮಿಅ ಸಅದಿಯ ಅರಬಿಯ್ಯ ಇದರ ಮೂರು ದಿನಗಳ ಕಾಲ ನಡೆಯುವ ವಾರ್ಷಿಕೋತ್ಸವ ಹಾಗೂ ಪದವಿ ಪ್ರದಾನ ಸಮ್ಮೇಳನ ಉದ್ಟಾಟಿಸಿ ಅವರು ಮಾತನಾಡಿದರು.
ವಿದ್ಯಾಭ್ಯಾಸ ರಂಗದಲ್ಲಿ ವಿಶಿಷ್ಟ ಸೇವೆಗೈದ ಸಅದಿಯ್ಯ ಸೈನ್ಸ್ ಕಾಲೇಜ್ ಅಧ್ಯಕ್ಷರಾದ ಎನ್.ಎ ಅಬೂಬಕರ್ ಅವರಿಗೆ ಸಅದಿಯ್ಯ ಸ್ಥಾಪನೆಗಳ ಅಧ್ಯಕ್ಷರಾದ ಸಯ್ಯಿದ್ ಆಟಕೋಯ ತಂಙಳ್ ಕುಂಬೋಲ್ ನೂರುಲ್ ಉಲಮಾ ಅವಾರ್ಡ್ ಸಮರ್ಪಿಸಿದರು.
ಸಂಸದರಾದ ಉನ್ನಿತಾನ್ ಎಕ್ಸ್ ಪೊ ಉದ್ಘಾಟಿಸಿ ಶುಭಾಶಂಸೆ ಕೋರಿದರು. ಡಿವೈಎಸ್ಪಿ ಬೇಕಲ್ ಮನೋಜ್ ಬಿ.ಬಿ ಬುಕ್ ಫೇರ್ ಉದ್ಟಾಟಿಸಿದರು.
ಎಂ.ಎಲ್ ಎ ಸಿ ಎಚ್ ಕುಞಂಬು ಕನ್ನಡ ವಿದ್ಯಾರ್ಥಿಗಳು ಹೊರತಂದ ಸುವನಿರ್ ಪ್ರಕಾಶನ ನೆರವೇರಿಸಿದರು. ಎನ್ ಎ ನೆಲ್ಲಿಕುನ್ನು ಎಂ.ಎಲ್ ಎ ತನ್ನ ಭಾಷಣ ದಲ್ಲಿ ಸಅದಿಯ್ಯಾದ ವಿದ್ಯಾಬ್ಯಾಸ ರಂಗದಲ್ಲಿನ ಸೇವೆ ಪ್ರಶಂಸನೀಯ ಎಂದು ಶ್ಲಾಘಿಸಿದರು.
ಮಂಜೇಶ್ವರ ಎಂಎಲ್ಎ ಎಕೆ ಅಶ್ರಫ್ ಮಾತನಾಡಿ ಸಅದಿಯ್ಯ ಕಾಸರಗೋಡು ಜಿಲ್ಲೆಗೊಂದು ಅಭಿಮಾನ ಸ್ಥಂಭ ಎಂದು ಹೊಗಳಿದರು. ಸಆದಿಯ್ಯ ಲಾ ಕಾಲೇಜ್ ಆರಂಭಿಸುತ್ತಿರುವುದರಿಂದ ಕಾಸರಗೋಡು ಜಿಲ್ಲೆಗೆ ಮಹತ್ವದ ಕೊಡುಗೆ ನೀಡಿ ದಂತಾಗುತ್ತದೆ ಎಂದು ಕೇರಳ ಮೈನಾರಿಟಿ ವಿಭಾಗದ ಸದಸ್ಯ ಸೈಫುದ್ವೀನ್ ಹಾಜಿ ತನ್ನ ಪ್ರಸಂಗದಲ್ಲಿ ಪ್ರಸಂಸಿಸಿದರು.
ಕೊಲ್ಲಂಬಾಡಿ ಅಬ್ದುಲ್ ಖಾದಿರ್ ಮದನಿ ಕೊಲ್ಲಂಬಾಡಿ ಸ್ವಾಗತ ಕೋರಿದರು. ಸಯ್ಯದ್ ಕುಂಞಿ ತಂಙಳ್ ಮುಟ್ಟಂ ಪ್ರಾರ್ಥನೆ ನಡೆಸಿದರು.. ಕೆ.ಪಿ ಅಬೂಬಕ್ಕರ್ ಮೌಲವಿ ಪಟ್ಟುವಂ ಸಭಾದ್ಯಕ್ಷತೆ ವಹಿಸಿದ್ದರು.
ಒಂಬತ್ತು ವಿದ್ಯಾರ್ಥಿಗಳಿಂದ ಮರ್ಹೂಂ ಕಲ್ಲಟ್ರ ಅಬ್ದುಲ್ ಖಾದಿರ್ ಹಾಜಿರವರ ವಸತಿಯಲ್ಲಿ ಆರಂಭಿಸಿದ ಅಂದಿನ ದರ್ಸ್ ಮರ್ಹೂಂ ಮೌಲಾನಾ ನೂರುಲ್ ಉಲಮಾ ರ ನೇತೃತ್ವದಲ್ಲಿ ಇಂದು ಸುಮಾರು 45 ರಷ್ಟು ಕೆ.ಜಿಯಿಂದ ಪಿ ಜಿ ವರೆಗಿನ ವಿವಿಧ ವಿದ್ಯಾಭ್ಯಾಸ ಸಂಸ್ಥೆಗಳನ್ನೊಳಗೊಂಡ ವಿಶಾಲ ಕ್ಯಾಂಪಸ್ ಆಗಿ ರೂಪಾಂತರಗೊಂಡಿದೆ. ಇಲ್ಲಿ ಪದವೀದರರಾಗಿ ತೆರಳುವವರು ದೇಶದ ವಿವಿಧ ಕಡೆಗಳಲ್ಲಿ ವಿದ್ಯಾಭ್ಯಾಸ ಸ್ಥಾಪನೆಗಳನ್ನು ಆರಂಭಿಸಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸು ವಲ್ಲಿ ನಿರತರಾಗಿದ್ದಾರೆ. 55 ನೇ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ಹಾಪಿಳ್ ಗಳು ಉರ್ದು ಮೌಲಾನಾ ಗಳು ಸೇರಿದಂತೆ 520 ವಿದ್ಯಾಥಿ೯ಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಮುದರ್ರಿಸರಾಗಿದ್ದ ಸಯೀದ್ ಮುಸ್ಲಿಯಾರ್ ರ ಸ್ಮರಣಾರ್ಥ ಸಅದಿಯ್ಯ ಎಂದು ನಾಮಕರಣಗೊಂಡಿದೆ.
ಪೂರ್ವಭಾವಿಯಾಗಿ ಸ್ನೇಹ ಸಂಗಮ ಹಾಗೂ ವಿದೇಶಗಳಲ್ಲಿ ವೃತ್ತಿಯಲ್ಲಿ ನಿರತರಾಗಿ ದೇಶದ ಆರ್ಥಿಕತೆ ಗೆ ಮಹತ್ವದ ಕೊಡುಗೆ ನೀಡುತ್ತಿರುವವರಿಗಾಗಿ ಎನ್ ಆರ್ ಐ ಪಾಂ ಕೋನ್ ಪ್ರವಾಸಿ ಮೀಟ್ ಸಅದಿಯ್ಯ ಸೆಕ್ರಟರಿ ಝೈನುಲ್ ಆಬಿದೀನ್ ಕಣ್ಣವಂ ತಂಙಳ್ ನೇತೃತ್ವದಲ್ಲಿ ನಡೆಯಿತು.