ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿ ಪ್ರಕಟ

ಸತ್ಯವತಿ - ಇಸ್ಮಾಯೀಲ್
ಮಂಗಳೂರು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಕೊಡಮಾಡುವ ವಾರ್ಷಿಕ ದತ್ತಿನಿಧಿ ಪ್ರಶಸ್ತಿ ಪ್ರಕಟಗೊಂಡಿದ್ದು, 'ವಾರ್ತಾಭಾರತಿ' ಕನ್ನಡ ದಿನಪತ್ರಿಕೆಯ ಮಂಗಳೂರು ಬ್ಯುರೋದ ಹಿರಿಯ ವರದಿಗಾರ್ತಿ ಸತ್ಯವತಿ ಮತ್ತು ಕೊಡಗು ವಿಶೇಷ ವರದಿಗಾರ ಕಂಡಕೆರೆ ಇಸ್ಮಾಯೀಲ್ ಸೇರಿದಂತೆ ಒಟ್ಟು 21 ಮಂದಿ ವಾರ್ಷಿಕ ದತಿನಿಧಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮೇ 3ರಂದು ಕಾಸರಗೋಡು ಜಿಲ್ಲೆಯ ಸೀತಾಂಗೋಳಿ ಎಲೈನ್ಸ್ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಪ್ರಶಸ್ತಿಗೆ ಆಯ್ಕೆಯಾದವರ ವಿವರ

ಸತ್ಯವತಿ -ನ್ಯಾಯವಾದಿ ಮುಹಮ್ಮದ್ ಇಬ್ರಾಹೀಂ ಪಾರೆ ಸ್ಮರಣಾರ್ಥ ಪ್ರಶಸ್ತಿ, ಕಂಡಕೆರೆ ಇಸ್ಮಾಯೀಲ್ ಕೊಡಗು- ಮೊಗರೋಡಿ ಗೋಪಾಲಕೃಷ್ಣ ಮೇಲಾಂಟ ದತ್ತಿ ಪ್ರಶಸ್ತಿ, ಶ್ರೀನಿವಾಸ ಜೋಕಟ್ಟೆ ಮುಂಬೈ-ಬ್ರಹ್ಮಕ್ಯ ಎಡನೀರು ಶ್ರೀಕೇಶವಾನಂದ ಭಾರತೀ ಸ್ವಾಮೀಜಿ ನೆನಪಿಗಾಗಿ ನೀಡುವ ದತ್ತಿನಿಧಿ ಪ್ರಶಸ್ತಿ, ಗಣೇಶ್ ಕಾಸರಗೋಡು - ಪತ್ರಕರ್ತ ರವಿಬೆಳೆಗೆರೆ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ, ಶ್ರೀನಿವಾಸ ನಾಯಕ್ ಇಂದಾಜೆ -ಅವ್ವ ಟ್ರಸ್ಟ್ ಹುಬ್ಬಳ್ಳಿ ದತ್ತಿನಿಧಿ, ಮಲ್ಲಿಕಾರ್ಜುನ ರೆಡ್ಡಿ ಗೋಂದಿ ಬೆಳಗಾವಿ- ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ ದತ್ತಿನಿಧಿ, ಎನ್. ರವಿಕುಮಾರ್ - ಹವ್ವಾ ಹಸನ್ ಫೌಂಡೇಶನ್ ಕುದ್ಕೋಳಿ ದತ್ತಿನಿಧಿ, ನಾಗರಾಜ ವೈ ಕೊಪ್ಪಳ -ಅನಿವಾಸಿ ಉದ್ಯಮಿ ಕಲಾಪೋಷಕ ಶ್ರೀ ಜೋಸೆಫ್ ಮಥಾಯಸ್ ದುಬೈ ದತ್ತಿನಿಧಿ, ಈಶ್ವರ ಅಲೆವೂರು ಮುಂಬೈ- ಕೆ.ವಿ.ಆರ್.ಟ್ಯಾಗೋರ್ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ, ಮುಹಮ್ಮದ್ ಅನ್ಸಾರ್ ಇನೋಳಿ - ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಭೀಮಣ್ಣ ಖಂಡ್ರೆ ದತ್ತಿನಿಧಿ ಪ್ರಶಸ್ತಿ, ಸಿ.ಜೆ.ಪುನೀತ್ ಮೈಸೂರು- ಆರ್ಥಿಕ ತಜ್ಞ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ ದತ್ತಿನಿಧಿ, ವೇಣು ವಿನೋದ್ ಮಂಗಳೂರು- ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಸೋಮಣ್ಣ ಬೇವಿನಮರದ ದತ್ತಿನಿಧಿ, ಮೌಲಾನ ಸಾಬ್ ಬೀದರ್-ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ದತ್ತಿನಿಧಿ, ಸ್ಟೀವನ್ ರೇಗೊ ಮಂಗಳೂರು-ಉದ್ಯಮಿ ಮಹಾಬಲೇಶ್ವರ ಭಟ್ ಎಡಕ್ಕಾನ ದತ್ತಿನಿಧಿ, ಕೆ.ಜಿ.ನಾಗಲಕ್ಷ್ಮೀ ಬಾಯಿ ಬೆಂಗಳೂರು -ಉದ್ಯಮಿ ಶಿವಶಂಕರ ನೆಕ್ರಾಜೆ ದತ್ತಿನಿಧಿ, ಇಕ್ಬಾಲ್ ಕುತ್ತಾರ್-ಉದ್ಯಮಿ ಸಮಾಜ ಸೇವಕ ಜೇಮ್ಸ್ ಮೆಂಡೊನ್ಸಾ ದತ್ತಿನಿಧಿ, ರಾಮ ಅಜೆಕ್ಕಾರ್-ಉದ್ಯಮಿ ಸಮಾಜ ಸೇವಕ ಅಶ್ರಫ್ ಶಾ ಮಂತೂರು ದತ್ತಿನಿಧಿ, ಗಣೇಶ್ ಕಾಸರಗೋಡು-ಕೆಯುಡಬ್ಲ್ಯುಜೆ ರಾಜ್ಯ ಸಮಿತಿ ದತ್ತಿನಿಧಿ, ಭಾಸ್ಕರ ಕೆ ಕಾಸರಗೋಡು-ಕೆಯುಡಬ್ಲ್ಯುಜೆ ರಾಜ್ಯ ಸಮಿತಿ ದತ್ತಿನಿಧಿ, ಅಜಿತ್ ಸ್ವರ್ಗ -ಕೆಯುಡಬ್ಲ್ಯುಜೆ ದತ್ತಿನಿಧಿ, ಮತ್ತಿಕೆರೆ ಜಯರಾಮ ಮಂಡ್ಯ- ಕೆ.ಕೆ. ಶೆಟ್ಟಿ ಕುತ್ತಿಕಾರ್ ದತ್ತಿನಿಧಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದತ್ತಿನಿಧಿ ಪ್ರಶಸ್ತಿಯು ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹೊಂದಿರುತ್ತದೆ.
ಎರಡು ದಶಕಗಳಿಂದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವು ಕನ್ನಡ ಭಾಷೆ, ಸಂಸ್ಕೃತಿ, ಕಲೆಗಳ ಉಳಿವಿಗಾಗಿ ಇತರ ಕನ್ನಡಪರ ಸಂಘ ಸಂಸ್ಥೆಗಳೊಂದಿಗೆ ಸೇರಿ ಶ್ರಮಿಸುತ್ತಿದೆ. ಕನ್ನಡ ಮತ್ತು ಮಲೆಯಾಳ ಪತ್ರಕರ್ತರ ಸ್ನೇಹಸೇತುವಾಗಿ ಈ ಸಂಘವು ಕಾರ್ಯಾಚರಿಸುತ್ತಿದೆ.
ಮೇ 3 ರಂದು ಕಾಸರಗೋಡಿನ ಸೀತಾಂಗೋಳಿ ಎಲೈನ್ಸ್ ಸಭಾಂಗಣದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಕೆ. ಕೆ ಶೆಟ್ಟಿ ಕುತ್ತಿಕಾರ್ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ, ಕರ್ನಾಟಕ ಸರಕಾರದ ಕೃಷಿ ಸಚಿವ ಚೆಲುವರಾಯ ಸ್ವಾಮಿ, ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕರ್ನಾಟಕ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಪ್ರಶಸ್ತಿ ಪ್ರದಾನ ಮಾಡಲಿರುವರು ಎಂದು ಕಾಸರಗೋಡು ಜಿಲ್ಲಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿ ನಾಯ್ಕಾಪು ಪ್ರಕಟನೆಯಲ್ಲಿ ತಿಳಿಸಿದ್ದಾರೆ.