ಎ. 25 ರಂದು ವಕ್ಫ್ ತಿದ್ದುಪಡಿ ವಿರುದ್ಧ ಮಂಜೇಶ್ವರದಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ

ಮಂಜೇಶ್ವರ : ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಎಲ್ಲಾ ಮುಸ್ಲಿಂ ಸಂಘಟನೆಗಳು ಒಂದಾಗಿ ರಾಷ್ಟ್ರಾದ್ಯಂತ ಭಾರೀ ಆಕ್ರೋಶಕ್ಕೆ ಗುರಿಯಾಗಿರುವ ವಕ್ಫ್ ತಿದ್ದುಪಡಿಯನ್ನು ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿ ವಕ್ಫ್ ರಕ್ಷಣಾ ಸಮಿತಿ ನೇತೃತ್ವದಲ್ಲಿ ಕುಂಜತ್ತೂರಿನಿಂದ ಹೊಸಂಗಡಿ ತನಕ ಬೃಹತ್ ಪ್ರತಿಭಟನಾ ರಾಲಿ ನಡೆಸಲಿದ್ದಾರೆ.
ಈ ಪ್ರತಿಭಟನಾ ರಾಲಿಯಲ್ಲಿ ಮುಸ್ಲಿಂ ಸಂಘಟನೆಗಳ ಎಲ್ಲಾ ಧಾರ್ಮಿಕ ನೇತಾರರು, ಉಲಮಾ ಶಿರೋಮಣಿಗಳು ಹಾಗೂ ಜಾತ್ಯತೀರನ್ನು ಒಟ್ಟು ಗೂಡಿಸಿ ಭಾರೀ ಪ್ರತಿಭಟನಾ ರಾಲಿಯನ್ನು ಹಮ್ಮಿಕೊಳ್ಳಲಿರುವುದಾಗಿ ವಕ್ಫ್ ರಕ್ಷಣಾ ಸಮಿತಿ ಪ್ರಧಾನ ಸಂಚಾಲಕ ಎಸ್ ಎಂ ಬಶೀರ್ ಉದ್ಯಾವರದ ಸಮಿತಿ ಕಚೇರಿಯಲ್ಲಿ ಕರೆದ ಸುದ್ದಿ ಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.
ವಕ್ಫ್ ಸಂಕ್ಷಣಾ ಸಮಿತಿಯ ಸಭೆಯಲ್ಲಿ ಮುಸ್ಲಿಂ ಸಮುದಾಯದ ವಿವಿಧ ಸಂಘಟನೆಗಳ ನೇತಾರರು, ಮಹಲ್ ಕಮಿಟಿ ಪದಾಧಿಕಾರಿಗಳು, ಸಾಮಾಜಿಕ, ರಾಜಕೀಯ ಕಾರ್ಯಕರ್ತರು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಳ್ಳಲಿರುವುದಾಗಿ ತಿಳಿಸಿದ ಅವರು
ಕೇಂದ್ರದಲ್ಲಿ ಅಧಿಕಾರಕ್ಕೇರಿದ ಫ್ಯಾಸಿಸ್ಟ್ ಸರ್ಕಾರ ಅಲ್ಪಸಂಖ್ಯಾತರ ಮೇಲೆ ಸವಾರಿಯನ್ನು ಮುಂದುವರಿಸುತ್ತಲೇ ಇದೆ. ಮುಸ್ಲಿಂ ಸಮುದಾಯದ ಧಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳುವ ದುರುದ್ದೇಶಪೂರಿತ ಉದ್ದೇಶದಿಂದ ಜಾರಿಗೆ ತರುತ್ತಿರುವ ವಕ್ಫ್ ತಿದ್ದುಪಡಿ ಕಾನೂನು ಭಾರತೀಯ ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಎಪ್ರಿಲ್ 25 ರಂದು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಪ್ರತಿಭಟನಾ ರಾಲಿಯಲ್ಲಿ ಎಲ್ಲಾ ಜಾತ್ಯಾತೀತರು ಪಾಲ್ಗೊಳ್ಳುವಂತೆ ಸಂರಕ್ಷಣಾ ಸಮಿತಿ ಪತ್ರಿಕಾ ಗೋಷ್ಟಿ ನಡೆಸಿ ವಿನಂತಿಸಿಕೊಂಡಿದೆ.
ಪತ್ರಿಕಾ ಗೋಷ್ಟಿಯಲ್ಲಿ ಎಸ್ ವೈಸ್ ಜಿಲ್ಲಾ ಎಕ್ಸಿಕ್ಯೂಟಿವ್ ಸಿದ್ದೀಖ್ ಕೋಳಿಯೂರು, ಎಸ್ ಕೆ ಎಸ್ ಎಸ್ ಎಫ್ ಕಾರ್ಯದರ್ಶಿ ರವೂಫ್ ಫೈಝಿ, ಸಮಿತಿ ಸಲಹೆಗಾರ ಸೈಯದ್ ಮೋಯಿನ್ ತಂಘಲ್, ಹಸೈನಾರ್, ಅಶ್ರಫ್ ಬಡಾಜೆ, ಜಬ್ಬಾರ್ ಬಹರೈನ್, ಅಶ್ರಫ್ ಕುಂಜತ್ತೂರು, ಜಾಸಿಂ ಕಡಂಬಾರ್, ಹನೀಫ್ ಕುಚ್ಚಿಕ್ಕಾಡ್, ಝಕರಿಯ್ಯ ಶಾಲಿಮಾರ್, ಮುಸ್ತಫ ಉದ್ಯಾವರ, ಮುಸ್ತಫ ಕುಂಜತ್ತೂರು, ಝಕರಿಯ್ಯ ಮಂಜೇಶ್ವರ, ಆಲಿ ಕುಟ್ಟಿ, ಶೆರೀಫ್ ಪಾವೂರು, ಝಕರಿಯ್ಯ, ಹನೀಫ್ ಪಡಿಞಾರ್ ಮೊದಲಾದವರು ಪಾಲ್ಗೊಂಡರು