ಕಾಸರಗೋಡು: ಪ್ರತ್ಯೇಕ ಪ್ರಕರಣ; ಮೂವರು ಯುವಕರು ಆತ್ಮಹತ್ಯೆ

Update: 2024-07-24 17:38 IST
ಕಾಸರಗೋಡು: ಪ್ರತ್ಯೇಕ ಪ್ರಕರಣ; ಮೂವರು ಯುವಕರು ಆತ್ಮಹತ್ಯೆ
  • whatsapp icon

ಕಾಸರಗೋಡು: ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಮೂವರು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮಂಜೇಶ್ವರ ಹೊಸಬೆಟ್ಟು ಸಸಿಹಿತ್ಲುವಿನ ಗೌತಮ್ ರಾಜ್ (23) , ಕುಂಜತ್ತೂರು ಮರಿಯಾಶ್ರಮ ಚರ್ಚ್ ಕಾಂಪೌಡ್ ನ ಬ್ರಾಯನ್ ಪಿಂಟೊ (20) ಮತ್ತು ಮೊರತ್ತಣೆ ಕಜೆಕೋಡಿಯ ಬಿ.ರಾಜೇಶ್ (39) ಮೃತ ಪಟ್ಟವರು.

ಉಡುಪಿಯಲ್ಲಿ ವಿಡಿಯೋ ಅನಿಮೇಟರ್ ಆಗಿ ದುಡಿಯುತ್ತಿದ್ದ ಗೌತಮ್ ರಾಜ್ ಚಿಕ್ಕಮ್ಮನ ಮನೆಯಲ್ಲಿ ತಾಯಿ ಜೊತೆ ಮಂಜೇಶ್ವರ ಹೊಸ ಬೆಟ್ಟು ನಲ್ಲಿರುವ ಮನೆಯಲ್ಲಿ ವಾಸವಾಗಿದ್ದರು. ಎರಡು ತಿಂಗಳಿನಿಂದ ಉಡುಪಿಗೆ ಕೆಲಸಕ್ಕೆ ತೆರಳುತ್ತಿದ್ದ ಗೌತಮ್ ರಾಜ್ ಮಂಗಳವಾರ ಮನೆಯಲಿದ್ದು ಮಧ್ಯಾಹ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮಂಜೇಶ್ವರ ಮೊರತ್ತಣೆಯ ರಾಜೇಶ್ ( (40) ಮನೆ ಸಮೀಪದ ಮರ ವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಅವರು ಕಾಂಕ್ರೀಟ್ ಕಾರ್ಮಿಕರಾಗಿದ್ದರು. ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಅಸೌಖ್ಯದಲ್ಲಿದ್ದ ರಾಜೇಶ್ ಬಳಿಕ ಚೇತರಿಸಿಕೊಂಡಿದ್ದರು.

ಕುಂಜತ್ತೂರಿನ ಬ್ರಾಯನ್ ಪಿಂಟೊ ಸೋಮವಾರ ರಾತ್ರಿ ಮನೆಯಿಂದ ಸ್ಕೂಟರ್ ನಲ್ಲಿ ತೆರಳಿದ್ದು, ಬಳಿಕ ಮರಳಿ ಬಂದಿರ ಲಿಲ್ಲ ಮಂಗಳವಾರ ಬ್ರಾಯನ್ ನ ತರವಾಡು ಮನೆ ಬಳಿ ಸ್ಕೂಟರ್ ಪತ್ತೆಯಾಗಿದ್ದು, ಸಂಶಯ ಗೊಂಡು ಮನೆ ಯೊಳಗೆ ಗಮನಿಸಿದಾಗ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಮಂಗಳೂರಿನ ಖಾಸಗಿ ಸಂಸ್ಥೆ ಯೊಂದರಲ್ಲಿ ಉದ್ಯೋಗದಲ್ಲಿದ್ದರು.

ಮಂಜೇಶ್ವರ ಠಾಣಾ ಪೊಲೀಸರು ಮೂರೂ ಪ್ರಕರಣಗಳ ಬಗ್ಗೆ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News