ಕಾಸರಗೋಡು: ಸೂರ್ಯಾಘಾತದಿಂದ ವೃದ್ಧ ಮೃತ್ಯು
Update: 2025-03-08 18:41 IST
ಕಾಸರಗೋಡು: ಸೂರ್ಯಾಘಾತದಿಂದ ವೃದ್ಧರೋರ್ವರು ಮೃತಪಟ್ಟ ಘಟನೆ ಚಿಮೇನಿ ಸಮೀಪದ ತಿಮಿರಿ ಎಂಬಲ್ಲಿ ನಡೆದಿದೆ.
ತಿಮಿರಿಯ ಕುಂಞಿ ಕಣ್ಣನ್ (92) ಮೃತಪಟ್ಟವರು. ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಮನೆಯಿಂದ ಹೊರ ತೆರಳಿದ್ದ ಕುಂಞಿ ಕಣ್ಣನ್ ವಾಪಸ್ ಬಾರದ ಹಿನ್ನಲೆಯಲ್ಲಿ ಅವರ ಪತ್ನಿ ಹುಡುಕಿದಾಗ ದಾರಿಯಲ್ಲಿ ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಅವರು ಮೃತಪಟ್ಟಿದ್ದರು. ದೇಹದಲ್ಲಿ ಸುಟ್ಟ ಗಾಯಗಳು ಕಂಡುಬಂದಿವೆ. ಸೂರ್ಯಘಾತ ಸಾವಿಗೆ ಕಾರಣ ಎಂದು ವೈದ್ಯರು ದೃಢೀಕರಿಸಿದ್ದಾರೆ ಎಂದು ತಿಳಿದುಬಂದಿದೆ.
ದಿನೇ ದಿನೇ ತಾಪಮಾನ ಹೆಚ್ಚಳಗೊಳ್ಳುತ್ತಿದ್ದು, ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.