ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವಿಜಯ್ ಭರತ್ ರೆಡ್ಡಿ ಅಧಿಕಾರ ಸ್ವೀಕಾರ
Update: 2025-04-20 20:13 IST

ಕಾಸರಗೋಡು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವಿಜಯ್ ಭರತ್ ರೆಡ್ಡಿ ರವಿವಾರ ಅಧಿಕಾರ ಸ್ವೀಕರಿಸಿದರು.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ರೆಡ್ಡಿ ರವರನ್ನು ಎಎ ಸ್ಪಿ ಪಿ . ಬಾಲಕೃಷ್ಣನ್ ನಾಯರ್ ಬರಮಾಡಿಕೊಂಡರು. ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿಯಾಗಿದ್ಧ ಡಿ.ಶಿಲ್ಪಾ ರವರಿಗೆ ಸಿಬಿಐ ಗೆ ನೇಮಕಾತಿ ಲಭಿಸಿದ ಹಿನ್ನಲೆಯಲ್ಲಿ ತಿರುವನಂತಪುರ ಸಿ ಟಿ ಉಪ ಪೊಲೀಸ್ ಆಯುಕ್ತ ರಾಗಿದ್ಧ ರೆಡ್ಡಿ ರವರನ್ನು ಕಾಸರಗೋಡು ಎಸ್ಪಿ ಯಾಗಿ ನೇಮಿಸಲಾಗಿತ್ತು.
ಡಿ ವೈ ಎಸ್ಪಿ ಸಿ.ಕೆ ಸುನಿಲ್ ಕುಮಾರ್, ವಿ.ವಿ ಮನೋಜ್, ಬಾಬು ಪೆರಿಂಗೋತ್ , ಸ್ಪೆಷಲ್ ಬ್ರಾಂಚ್ ಡಿ ವೈ ಎಸ್ಪಿ ಎಂ. ಸುನಿಲ್ ಕುಮಾರ್ ಉಪಸ್ಥಿತರಿದ್ದರು.