ಕಾಸರಗೋಡು: ಮಾದಕ ವಸ್ತು ಸಹಿತ ಆರೋಪಿ ಸೆರೆ
Update: 2025-04-03 18:36 IST

ಕಾಸರಗೋಡು: ಭಾರೀ ಮೌಲ್ಯದ ಮಾದಕ ವಸ್ತು ಸಹಿತ ಓರ್ವನನ್ನು ಅಬಕಾರಿದಳದ ಸಿಬ್ಬಂದಿ ಬಂಧಿಸಿದ್ದಾರೆ.
ಉಪ್ಪಳ ಮಣ್ಣಂ ಗುಳಿಯ ಕಲಂದರ್ ಶಾಫಿ (30) ಬಂಧಿತ ಆರೋಪಿ. ಈತನ ಮನೆ ಮತ್ತು ಕಾರಿನಿಂದ 450 ಗ್ರಾಂ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಈತನ ಜೊತೆಗಿದ್ದ ಇನ್ನೋರ್ವ ಆರೋಪಿ ಯಾಸಿರ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಹನ ತಪಾಸಣೆ ವೇಳೆ 130 ಗ್ರಾಂ ಮಾದಕ ವಸ್ತು ಪತ್ತೆಯಾಗಿತ್ತು. ಬಳಿಕ ಈತನ ಮನೆಗೆ ದಾಳಿ ನಡೆಸಿದ ಸಿಬ್ಬಂದಿಗಳು 320 ಗ್ರಾಂ ಮಾದಕ ವಸ್ತುವನ್ನು ವಶಪಡಿಸಿಕೊಂಡರು. ಕೆಲ ದಿನಗಳ ಹಿಂದೆ ಕಲಂದರ್ ಶಾಫಿ ಯನ್ನು 100 ಗ್ರಾಂ ಗಾಂಜಾ ಸಹಿತ ಬಂಧಿಸಲಾಗಿತ್ತು. ಬಳಿಕ ಜಾಮೀನು ನಲ್ಲಿ ಬಿಡುಗಡೆ ಗೊಂಡಿದ್ದನು.