ಕೊಡಗು: ಕಾಂಗ್ರೆಸ್ ಹಿರಿಯ ಮುಖಂಡ ಮಿಟ್ಟು ಚಂಗಪ್ಪ ನಿಧನ

Update: 2025-04-25 09:37 IST
ಕೊಡಗು: ಕಾಂಗ್ರೆಸ್ ಹಿರಿಯ ಮುಖಂಡ ಮಿಟ್ಟು ಚಂಗಪ್ಪ ನಿಧನ
  • whatsapp icon

ಕೊಡಗು: ಕಾಂಗ್ರೆಸ್ ಹಿರಿಯ ಮುಖಂಡ ಮಿಟ್ಟು ಚಂಗಪ್ಪ (83) ಅಮ್ಮತ್ತಿಯಲ್ಲಿ ಗುರುವಾರ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಚಂಗಪ್ಪರ ಅಂತಿಮ ದರ್ಶನಕ್ಕೆ ಶುಕ್ರವಾರ ಮಧ್ಯಾಹ್ನದವರೆಗೆ ಇಲ್ಲಿನ ಗಾಂಧಿ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಬಳಿಕ ಮಡಿಕೇರಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ’ ಎಂದು ತಿಳಿದುಬಂದಿದೆ.

ಸುಮಾರು ಐದು ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದ ಅವರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಹಾಗೂ ಎಐಸಿಸಿ ಸದಸ್ಯರಾಗಿ ಕಾರ್ಯನಿರ್ವಹಿಸದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸೇರಿದಂತೆ ಪಕ್ಷದ ಬಹುತೇಕ ಹಿರಿಯ ಮುಖಂಡರಿಗೆ ಆತ್ಮೀಯರಾಗಿದ್ದರು.

ಪ್ರಜಾಪ್ರಭುತ್ವದ ಬಹಳ ದೊಡ್ಡ ಪ್ರತಿಪಾದಕರಾಗಿದ್ದ ಮಿಟ್ಟು ಚಂಗಪ್ಪ, ಪ್ರತಿ ಚುನಾವಣೆಯಲ್ಲೂ ಮೊದಲಿಗರಾಗಿ ಮತದಾನ ಮಾಡುವ ಮೂಲಕ ಗಮನಸೆಳೆಯುತ್ತಿದ್ದರು. 1962ರಲ್ಲಿ ಪ್ರಥಮ ಬಾರಿಗೆ ಮತಗಟ್ಟೆಯ ಮೊದಲ ಮತದಾರರಾಗಿ ಹಕ್ಕು ಚಲಾಯಿಸಲು ಪ್ರಾರಂಭಿಸಿದ್ದ ಮಿಟ್ಟು ಚಂಗಪ್ಪ ಅಲ್ಲಿಂದ ಪ್ರತೀ ಲೋಕಸಭೆ, ವಿಧಾನಸಭೆ ಹಾಗೂ ನಗರಸಭೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲೂ ಮೊದಲಿಗರಾಗಿ ಒಟ್ಟು 31 ಬಾರಿ ಮತದಾನ ಮಾಡಿದ್ದರು.

ಪ್ರವಾಸೋದ್ಯಮಿಯಾಗಿದ್ದ ಅವರು ಕೖಷಿಕ, ಕಾಫಿ ಉದ್ಯಮಿಯೂ ಆಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News