ಕೊಪ್ಪಳ: ಗಣಪತಿ ಹಬ್ಬ ಆಚರಣೆ ಹಿನ್ನೆಲೆ; ಹೈ ಅಲರ್ಟ್ ಆದ ಪೊಲೀಸರು

Update: 2024-09-07 04:37 GMT

ಕೊಪ್ಪಳ: ಇಂದಿನಿಂದ ಜಿಲ್ಲೆಯಾದ್ಯಂತ ಗಣಪತಿ ಹಬ್ಬ ಆಚರಿಸಲಾಗುತ್ತಿರು ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.

ಜಿಲ್ಲೆಯಲ್ಲಿ ಯಾವುದೇ ಆಹಿತಕರ ಘಟನೆ ಡೆಯದಂತೆ ಮುಂಜಾಗೃತಾ ಕ್ರಮವಾಗಿ ಮೂರು ರೌಡಿ ಶೀಟರ್ ಗಳನ್ನು ಗಡಿಪಾರು ಮಾಡಲಾಗಿದ್ದು, ಶಾಂತಿ ಕದಡದಂತೆ ಸುಮಾರು 951 ರೌಡಿ ಶೀಟರ್, ಕಮ್ಯೂನಲ್ ಗೂಂಡಾಗಳಿಗೆ ಎಚ್ಚರಿಕೆ ನೀಡಲಾಗಿದೆ.

ಜಿಲ್ಲೆಯಾದ್ಯಂತ 3236 ಸಿಸಿ ಕ್ಯಾಮರಾ ಮೂಲಕ ತೀವ್ರ ನಿಗಾ ವಹಿಸಲಾಗುತಿದ್ದು, ಗಸ್ತು ತಿರಗಲು ಹೆಚ್ಚುವರಿಯಾಗಿ 20 ವಾಹನಗಳ ಬಳಕೆ ಮಾಡಲಾಗುತ್ತಿದೆ.

ಗಣಪತಿ ವಿಸರ್ಜನಾ ದಿನದಂದು ಡ್ರೋನ್ ಕ್ಯಾಮೆರಾ ಮೂಲಕ ನಿಗಾ ವಹಿಸಲಾಗುವುದು. ಈಗಾಗಲೇ ಗಣಪತಿ ವಿಸರ್ಜನಾ ದಿನದಂದು ಮದ್ಯಮಾರಾಟ ನಿಷೇಧ ಮಾಡುವಂತೆ ಜಿಲ್ಲಾಧಿಕಾರಿ ನಳಿನ್ ಅತುಲ್ ಆದೇಶ ಮಾಡಿದ್ದಾರೆ.

 ಬಂದೋಬಸ್ತ್‌ಗಾಗಿ 8 ಕೆಎಸ್‌ಆರ್‌ಪಿ ತುಕಡಿಗಳು, 8 ಎಡಿಆರ್ ತಕಡಿಗಳು, 500 ಹೋಮ್ ಗಾರ್ಡ್‌ಗಳನ್ನು ಸೇರಿದಂತೆ 410 ಪೊಲೀಸ್ ಸಿಬ್ಬಂದಿ, 75ಎಎಸ್‌ಐ, 32 ಪಿಎಸ್‌ಐ, 16ಪಿಐ, 4ಡಿವೈಎಸ್ಪಿ ಗಳನ್ನು ನಿಯೋಜನೆ ಮಾಡಲಾಗಿದೆ.

ಜಿಲ್ಲೆಯಲ್ಲಿ 428 ಶಾಂತಿ ಸಭೆ ನಡೆಸಲಾಗಿದ್ದು, ಶಾಂತಿ ಕಾಪಾಡುವಂತೆ ಗಣಪತಿ ಮಂಡಳಿ ಮುಖಂಡರಿಗೆ ಸೂಚನೆ ನೀಡಲಾಗಿದೆ. ವಿಶೇಷವಾಗಿ ಗಂಗಾವತಿ, ಕನಕಗಿರಿ, ಕಾರಟಗಿಯಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಅಲ್ಪ ಪ್ರಮಾಣದ ಶಬ್ದದ  ಧ್ವನಿವರ್ಧಕಗಳ ಬಳಕೆಗೆ ಸೂಚನೆ ನೀಡಲಾಗಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕರಿ ರಾಮ್ ಎಲ್. ಅರಸಿದ್ದಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News