ಕೊಪ್ಪಳ | ಮರಕುಂಬಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣ : ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ ಮೃತ್ಯು

Update: 2024-10-25 13:15 GMT

 ರಾಮಣ್ಣ ಭೋವಿ (30) 

ಕೊಪ್ಪಳ : ತಾಲೂಕಿನ ಮರಕುಂಬಿ ಗ್ರಾಮದಲ್ಲಿ 2014 ರಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ ಮತ್ತು ನಂತರ ಅವರ ಓಣಿಗೆ ಹೋಗಿ ಗುಡಿಸಲುಗಳಿಗೆ ಬೆಂಕಿ, ಹಚ್ಚಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯೊಬ್ಬರು ಇಂದು (ಶುಕ್ರವಾರ) ಬೆಳಿಗ್ಗೆ ಮೃತಪಟ್ಟಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ(ಅ.24) ನ್ಯಾಯಾಲಯಲಯವು 98 ಜನರಿಗರ ಜೀವಾವಧಿ ಮತ್ತು ಐದು ಸಾವಿರ ದಂಡ ವನ್ನು ವಿದಿಸಿತ್ತು, ಮತ್ತು ಇನ್ನೂ ಮೂವರು ಅಪರಾಧಿಗಳು ಕೂಡಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ್ದರಿಂದ ಈ 3 ಜನರಿಗೆ 5 ವರ್ಷ ಜೈಲು ಶಿಕ್ಷೆ, 2 ಸಾವಿರ ರೂ. ದಂಡ ವಿಧಿಸಿತ್ತು, ಇದೇ ಮೂವರಲ್ಲಿ ಒಬ್ಬ ರಾಮಣ್ಣ ಭೋವಿ (30) ಆಗಿದ್ದ.

ಅಸ್ವಸ್ಥಗೊಂಡಿದ್ದ ರಾಮಣ್ಣ ಅವರನ್ನು ಗುರುವಾರ ರಾತ್ರಿಯೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ನೇರವಾಗಿ ಸರಕಾರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ರಾಮಣ್ಣ ಅವರು ಇಂದು(ಅ.25) ಬೆಳಿಗ್ಗೆ ಮೃತಪಟ್ಟಿದ್ದಾರೆ.

ಪ್ರಕರಣವೇನು?

2014 ರಲ್ಲಿ ಗಂಗಾವತಿ ತಾಲೂಕಿನ ಮುರುಕುಂಬಿ ಗ್ರಾಮದಲ್ಲಿ ಕ್ಷೌರ ದಂಗಡಿ ಮತ್ತು ಹೋಟೆಲ್‌ಗಳಲ್ಲಿ ದಲಿತರಿಗೆ ಪ್ರವೇಶಿಸಲು ನಿರಾಕರಣೆಯ ಕುರಿತು ಜಗಳವಾಗಿತ್ತು. ಪೊಲೀಸ್ ಅಧಿಕಾರಿಗಳು ಮುರುಕುಂಬಿಗೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದರು. ಈ ಸಿಟ್ಟಿನಿಂದ ಸರ್ವಣೀಯರು ರಾತ್ರಿ ಸಮಯದಲ್ಲಿ ದಲಿತರ ಓಣಿಗೆ ನುಗ್ಗಿ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು.

ಈ ಘಟಣೆಗೆ ಸಂಬಂಧಿಸಿದಂತೆ ಗ್ರಾಮದ 117 ಜನರ ವಿರುದ್ಧ ಪ್ರಕರಣ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಕೆಲ ಆರೋಪಿಗಳು ಈಗಾಗಲೇ ಮೃತಪಟ್ಟಿದ್ದಾರೆ. ಇದರಲ್ಲಿ 101 ಜನರ ವಿರುದ್ಧ ಆರೋಪ ಸಾಬಿತಾಗಿದ್ದು, ಅದರಲ್ಲಿ ವಿಚಾರಣೆಗೆ ಹಾಜರಾಗಿದ್ದ 100 ಜನರನ್ನು ಬಂಧಿಸಿದ್ದರು. ಇನ್ನೊಬ್ಬ ವಿಚಾರಣೆಗೆ ಹಾಜರಾಗಿರಲ್ಲಿಲ್ಲ. ಆದ್ದರಿಂದ ಆತನ ಬಂಧನ ಆಗಿಲ್ಲರಲಿಲ್ಲ, ಆದರೆ ಆತನನ್ನು ಬಳಿಕ ಪೊಲೀಸರು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News