ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಇವಿಎಂ ಗೆಲುವು : ಸಚಿವ ಶಿವರಾಜ ತಂಗಡಗಿ
Update: 2025-02-08 22:01 IST

ಶಿವರಾಜ ತಂಗಡಗಿ
ಕನಕಗಿರಿ : ದೆಹಲಿ ವಿಧಾನಸಭಾ ಚುನಾವಣೆಯ ಬಿಜೆಪಿ ಫಲಿತಾಂಶವು ಇವಿಎಂ ಮೆಷೀನ್ ಗೆಲುವು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಕರ್ತ ಜೊತೆ ಮಾತನಾಡಿದ ಅವರು, ದೆಹಲಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿರುವುದನ್ನು ಸ್ವೀಕರಿಸುತ್ತೇವೆ, ಆದರೆ ಬಿಜೆಪಿಯು ಇವಿಎಂ ಮೆಷೀನ್ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ ಎಂದು ಸ್ಪಷ್ಟವಾಗಿ ಹೇಳುತ್ತೇನೆ ಎಂದರು.
ಇವಿಎಂ ಮೆಷೀನ್ ಮೇಲೆ ತಮಗೆ ಮೊದಲಿಂದಲೂ ಅನುಮಾನ ಇದೆ, ಚುನಾವಣೆಯಲ್ಲಿ ಬಿಜೆಪಿಯವರು ತಮಗೆ ಬೇಕಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೆಲವರನ್ನು ಸೋಲಿಸುವ ಕೆಲಸವನ್ನು ಮೆಷೀನ್ ಮೂಲಕ ಮಾಡುತ್ತಾರೆ ಎಂದು ದೂರಿದರು.