ಕೊಪ್ಪಳ | ದೇಶದಲ್ಲಿ ಅನೇಕ ಬಗೆಯ ಸಂಸ್ಕೃತಿಗಳು, ಧರ್ಮಗಳಿವೆ, ಎಲ್ಲರೂ ಕೂಡಿ ಸಾಗಬೇಕು : ಅಲ್ಲಮ ಪ್ರಭು ಬೆಟ್ಟದೂರು

Update: 2025-03-17 19:35 IST
ಕೊಪ್ಪಳ | ದೇಶದಲ್ಲಿ ಅನೇಕ ಬಗೆಯ ಸಂಸ್ಕೃತಿಗಳು, ಧರ್ಮಗಳಿವೆ, ಎಲ್ಲರೂ ಕೂಡಿ ಸಾಗಬೇಕು : ಅಲ್ಲಮ ಪ್ರಭು ಬೆಟ್ಟದೂರು
  • whatsapp icon

ಕೊಪ್ಪಳ : ಈ ದೇಶದಲ್ಲಿ ಅನೇಕ ಬಗೆಯ ಸಂಸ್ಕೃತಿಗಳು, ಅನೇಕ ಬಗೆಯ ಧರ್ಮಗಳಿವೆ, ಇವೆಲ್ಲವೂ ಕೂಡಿ ಸಾಗಬೇಕಿದೆ ಎಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯ ಮುಖಂಡ ಹಿರಿಯ ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು ಹೇಳಿದರು.

ಕೊಪ್ಪಳ ನಗರದ ಹಟಗಾರ ಪೇಟೆ ಓಣಿಯಲ್ಲಿರುವ ಹಝ್ರತ್ ಮಹೆಬೂಬ್ ಸುಭಾನಿ ಅರಬ್ಬಿ ತರಬೇತಿ ಕೇಂದ್ರದ ಆವರಣದಲ್ಲಿ ಹಟಗಾರ ಪೇಟೆ ಓಣಿಯ ಯುವಕರ ಕಮಿಟಿಯಿಂದ ಶುಕ್ರವಾರ ರಾತ್ರಿ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು.

ಹಟಗಾರ ಪೇಟೆ ಓಣಿಯವರು ನಮ್ಮ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಸದಸ್ಯರಿಗೆ ಇಫ್ತಾರ್ ಕೂಟಕ್ಕೆ ಆಮಂತ್ರಿಸಿ ಒಳ್ಳೆ ಊಟ ಮಾಡಿಸಿದ್ದಾರೆ, ಹಿಂದೂ, ಮುಸ್ಲಿಮ್, ಸಿಖ್‌, ಇಸಾಯಿ, ಪಾರ್ಸಿ, ಲಿಂಗಾಯತ, ಶೈವ, ಬೌದ್ದ ಯಾವುದೇ ಧರ್ಮ ಇರಲಿ ನಾವು ಎಲ್ಲರೂ ಕೂಡಾ ಕೂಡಿ ಬಾಳಬೇಕು, ಎಲ್ಲಾ ಧರ್ಮಗಳಲ್ಲಿ ದೇವನು ಒಬ್ಬನೇ ಎನ್ನುವಂತಹ ಸೂತ್ರವನ್ನು ಹೇಳುತ್ತವೆ. ನಾವು ದೇವರಿಗಾಗಿ, ಧರ್ಮಕ್ಕಾಗಿ, ಕಾದಾಟ ಮಾಡದೆ, ಪ್ರೀತಿ ವಿಶ್ವಾಸ ಗೌರವ ಸೌಹಾರ್ದದಿಂದ ನಾವೆಲ್ಲ ಭಾರತೀಯರು ಕೂಡಿ ಬಾಳಬೇಕು, ಭಾರತ ಒಂದು ದೊಡ್ಡ ದೇಶ,ಈ ದೇಶಕ್ಕೆ ಇರುವ ದೊಡ್ಡ ಸಂಸ್ಕೃತಿಯನ್ನು ಸಂರಕ್ಷಣೆ ಮಾಡಬೇಕಲ್ಲದೆ,ದಡ್ಡ ಸಂಸ್ಕೃತಿಯನ್ನು,ಕೋಮುವಾದಿ ಸಂಸ್ಕೃತಿಯನ್ನು ನಾವು ಯಾರೂ ಕೂಡ ಬೆಳೆಸಿಕೊಂಡು ಹೋಗಬಾರದು,ಸಕಲ ಧರ್ಮಗಳ ಬಾಂಧವರಲ್ಲಿ ಸೌಹಾರ್ದ ಭಾವನೆ ಉಂಟಾದರೆ ಆಗ ಭಾರತ ನಂಬರ್ ಒನ್ ಆಗಲು ಸಾಧ್ಯ ಎಂದು ಸಲಹೆ ನೀಡಿದರು.

ಮಾನವ ಬಂದುತ್ವ ವೇದಿಕೆಯ ವಿಭಾಗೀಯ ಸಂಚಾಲಕ ಟಿ.ರತ್ನಾಕರ ಮಾತನಾಡಿ ನಮ್ಮ ಬಳಗದಿಂದ ಮುಸ್ಲಿಮ್ ಬಾಂಧವರು ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ನಾವು ಪಾಲ್ಗೊಂಡಿದ್ದೆವು, ಮುಸ್ಲಿಮರು ಭಗವಂತನನ್ನು  ಸ್ಮರಣೆ ಮಾಡುತ್ತಾರೆ. ಅವರ ಧರ್ಮದಲ್ಲಿ ನಿಮ್ಮ ವಿಮೋಚನೆಯಲ್ಲಿ ನಾವು ಕೂಡ ಸೌಹಾರ್ದ ಸಂದೇಶದೊಂದಿಗೆ ಭಾಗಿಯಾಗಿದ್ದೇವೆ ಎಂದು ಹೇಳಿದರು.

ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್, ಹಿರಿಯ ಕಾರ್ಮಿಕ ಮುಖಂಡ ಕೆ.ಬಿ.ಗೋನಾಳ, ಶರಣು ಗಡ್ಡಿ, ಶರಣು ಪಾಟೀಲ್, ಕಾಶಪ್ಪ ಚಲವಾದಿ, ಹಟಗಾರ ಪೇಟೆ ಓಣಿಯ ಯುವಕರ ಕಮಿಟಿಯ ಉಪಾಧ್ಯಕ್ಷ ಸಲೀಮ್ ಹ್ಯಾಟಿ, ಗೌಸ್ ನೀಲಿ, ಮುಹಮ್ಮದ್ ಕಾಝೀಮ್ ಸಂಗಟಿ, ಫಾರೂಖ್ ನೀಲಿ, ಮೌಲಾ ಹುಸೇನ್ ಗೊಂಡಬಾಳ, ಮರ್ದಾನ್ ಸಂಗಟಿ, ಇಮ್ರಾನ್ ಗಂಗಾವತಿ, ರಾಜಾ ಹುಸೇನ್ ಕಾತರಕಿ, ಖಲಂದರ್ ಗೊಂಡಬಾಳ, ಇಬ್ರಾಹೀಂ ತಂಬ್ರಳಿ, ರಿಯಾಝ್ ಸಂಗಟಿ, ಹಟಗಾರ ಪೇಟೆ ಮುಸ್ಲಿಮ್ ಪಂಚ್ ಕಮಿಟಿ ಉಪಾಧ್ಯಕ್ಷ ಖಾಸೀಮ್ ಸಾಬ್ ಲೇಬಗೇರಿ, ಕಾರ್ಯದರ್ಶಿ ಖಾಜಾ ಹುಸೇನ್ ನೀಲಿ, ಖಾಸೀಮ್ ಸಾಬ್ ನೀಲಿ ಮುಂತಾದ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News