ಕೊಪ್ಪಳ: ಬಾಲಕನಿಗೆ ಆಟೋ ನೀಡಿದ್ದ ಮಾಲಕನಿಗೆ 1.41 ಕೋಟಿ ರೂ. ದಂಡ ವಿಧಿಸಿದ ನ್ಯಾಯಾಲಯ

Update: 2025-04-23 10:31 IST
ಕೊಪ್ಪಳ: ಬಾಲಕನಿಗೆ ಆಟೋ ನೀಡಿದ್ದ ಮಾಲಕನಿಗೆ 1.41 ಕೋಟಿ ರೂ. ದಂಡ ವಿಧಿಸಿದ ನ್ಯಾಯಾಲಯ
  • whatsapp icon

ಕೊಪ್ಪಳ /ಗಂಗಾವತಿ: ಬಾಲಕನಿಗೆ ಆಟೊ ನೀಡಿ ಒಬ್ಬರ ಸಾವಿಗೆ ಕಾರಣನಾದ ಪ್ರಕರಣದಲ್ಲಿ ಆಟೊ ಮಾಲೀಕನಿಗೆ ನ್ಯಾಯಾಲಯ 1.41 ಕೋಟಿ ದಂಡ ವಿಧಿಸಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮಂಗಳವಾರ ವಿಚಾರಣೆ ನಡೆಸಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಮೇಶ ಎಸ್‌.ಗಾಣಿಗೇರ ಅವರು ಈ ದಂಡದ ಮೊತ್ತವನ್ನು ಮೃತನ ಕುಟುಂಬಕ್ಕೆ ನೀಡುವಂತೆ ಆದೇಶಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

2021ರ ಮಾರ್ಚ್ 10ರಂದು ಯಲಬುರ್ಗಾದಲ್ಲಿ ಅಪಘಾತ ನಡೆದಿತ್ತು. ಈ ಅಪಘಾತದಲ್ಲಿ ಯಲಬುರ್ಗಾದ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಗಂಗಾವತಿ ನಿವಾಸಿಯಾದ ರಾಜಶೇಖರ ಪಾಟೀಲ್ ಅವರು ಮೃತಪಟ್ಟಿದ್ದರು.

ಈ ಘಟನೆಗೆ ಆಟೊ ಚಲಾಯಿಸುತ್ತಿದ್ದ 17 ವರ್ಷದ ಬಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ರಮೇಶ ಎಸ್‌.ಗಾಣಿಗೇರ ಅವರಿದ್ದ ಪೀಠವು ಬಾಲಕನಿಗೆ ಆಟೊ ಚಲಾಯಿಸಲು ಕೊಟ್ಟಿದ್ದ ಮಾಲೀಕನಿಗೆ ಈ ದೊಡ್ಡ ಮೊತ್ತದ ದಂಡ ವಿಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News