ಕೊಪ್ಪಳ | ಎ.ಜಿ.ಕಾರಟಗಿ, ಅಲ್ಲಮಪ್ರಭು ಬೆಟದೂರಗೆ ʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼ
ಕೊಪ್ಪಳ: 2024ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಕೊಪ್ಪಳ ಜಿಲ್ಲೆಯ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ಲಬಿಸಿದೆ.
ಅಮರಗುಂಡಪ್ಪ ಕಾರಟಗಿ (ಎ.ಜಿ.ಕಾರಟಗಿ) ಅವರಿಗೆ ಮಾದ್ಯಮ ಕ್ಷೇತ್ರದಲ್ಲಿ ಪ್ರಶಸ್ತಿ ಲಬಿಸಿದ್ದು, ಜಿಲ್ಲೆಯ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟದೂರು ಅವರಿಗೆ ಸಾಹಿತ್ಯ ಕ್ಷೆತ್ರದ ಸೇವೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅಮರಗುಂಡಪ್ಪ ಕಾರಟಗಿ :
ಅಮರಗುಂಡಪ್ಪ ಕಾರಟಗಿ (ಎ.ಜಿ.ಕಾರಟಗಿ) ಅವರು 1 ಜುಲೈ 1941 ಜನಿಸಿದ ಅವರು 7ನೇ ತರಗತಿ ವಿದ್ಯಾಭ್ಯಾಸವನ್ನು ಮುಗಿಸಿದ್ದಾರೆ. 1971ರಲ್ಲಿ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನಲ್ಲಿ ಪತ್ರಿಕೆ ವಿತರಕರು ಮತ್ತು ವರದಿಗಾರರಾಗಿ ತಮ್ಮ ಕೆಲಸವನ್ನು ಆರಂಭಿಸಿದರು. ದಿನ ನಿತ್ಯ 20 ಕಿಮೀ. ಗಿಂತಲೂ ಹೆಚ್ಚು ದೂರ ಸೈಕಲ್ ಮೇಲೆಯೇ ಪ್ರಯಾಣಿಸಿ ಹಳ್ಳಿಗಳಿಗೆ ಪತ್ರಿಕೆ ವಿತರಸುವ ಮೂಲಕ ಗ್ರಾಮೀಣ ಪ್ರದೇಶದ ಜನರಲ್ಲಿ ‘ಪೇಪರ್ ಗುಂಡಪ್ಪ’ ಎಂಬ ಅನ್ವರ್ಥಕ ನಾಮದಿಂದ ಗುರುತಿಸಿಕೊಂಡಿರುವ ಅವರು ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಡಿ.ವಿ.ಜಿ. ಪ್ರಶಸ್ತಿಗೆ ಭಾಜನಾಗಿದ್ದಾರೆ.
ಅಲ್ಲಮಪ್ರಭು ಬೆಟದೂರು :
30 ಜೂನ್ 1951ರಲ್ಲಿ ಕೊಪ್ಪಳದಲ್ಲಿ ಜನಿಸಿದ ಅಲ್ಲಮಪ್ರಭು ಬೆಟದೂರು ಅವರು, ಗವಿ ಸಿದ್ದೇಶ್ವರ ಕಾಲೇಜಿನ ಪ್ರಾಧ್ಯಾಪಕರಾಗಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ, ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದಾರೆ. ಕುದುರೆಮೋತಿ, ನೀಲಗಿರಿ, ಗುಲಗಂಜಿ, ಅಲ್ಲಮನ ಕವಿತೆಗಳು ಕೆಡಹಬಲ್ಲರು ಅವರು, ಇದು ನನ್ನ ಭಾರತ ಇವರ ಪ್ರಕಟಿತ ಕೃತಿಗಳು.