ಕೊಪ್ಪಳ | ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಖಂಡಿಸಿ ಹೆದ್ದಾರಿ ತಡೆದು ಪ್ರತಿಭಟನೆ‌

Update: 2024-12-12 09:10 GMT

ಕೊಪ್ಪಳ : ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟಗಾರರ ಮೇಲೆ ಪೊಲೀಸರು ಲಾಠಿಚಾರ್ಜ ಮಾಡಿದ್ದನ್ನು ಖಂಡಿಸಿ ಇಂದು ವೀರಶೈವ- ಲಿಂಗಾಯತ ಪಂಚಮಸಾಲಿ ಸಮಾಜದವರು ಹೆದ್ದಾರಿ ತಡೆದು ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೀರಶೈವ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಅವರು ಬೆಳಗಾವಿಯಲ್ಲಿ ಸಮಾಜ ಬಾಂಧವರು ಶಾಂತಿಯುತ ಹೋರಾಟ ಮಾಡುತ್ತಿರುವಾಗ ರಾಜ್ಯ ಸರಕಾರ ಪೋಲೀಸರ ಮೂಲಕ ಲಾಟಿ ಚಾರ್ಜ ಮಾಡಿಸಿದ್ದು ಅಮಾಯಕ ಬಡ ಕುಟುಂಬದ ಸಮುದಾಯದವರಿಗೆ ಗಂಭೀರ ಗಾಯಗಾಳಾಗಿದ್ದು ಇಂತಹ ಘಟನೆಗಳನ್ನು ರಾಜ್ಯ ಪಂಚಮಸಾಲಿ ಸಂಘ ತೀವ್ರವಾಗಿ ಖಂಡಿಸುತ್ತದೆ ಮತ್ತು ಅಂದು ನಡೆದ ಕಲ್ಲು ತುರಾಟ ನಮ್ಮ ಸಮುದಾಯದವರಿಂದ ನಡೆದಿರುವುದಿಲ್ಲ ಅದು ಕಾಂಗ್ರೆಸ್ ಮತ್ತು ಬಿಜೆಪಿಯವರ ಕುತಂತ್ರದಿಂದ ನಡೆದಿರುವಂತಹ ಘಟನೆ ಇದನ್ನು ತನಿಖೆ ಮಾಡಿ ನ್ಯಾಯ ದೊರಕಿಸಿಕೊಡಬೇಕು ಮತ್ತು ಪೊಲೀಸರು ನಮ್ಮ ಸಮುದಾಯದವರನ್ನು ಬಂಧಿಸಿರುವುದನ್ನು ಖಂಡಿಸುತ್ತಾ ಅಂತವರ ಮೇಲೆ ಯಾವುದೇ ಕೇಸ್ ದಾಖಲಿಸದೆ ಅವರನ್ನು ಬೀಡುಗಡೆ ಮಾಡಬೇಕು ಇದಕ್ಕೆ ಲಾಟಿಚಾರ್ಜ್ ಮಾಡಿದ ಪೊಲೀಸರನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕದ ಎಲ್ಲಾ ಲಿಂಗಾಯತರು ಒಟ್ಟುಗೂಡಿ ಕೇಂದ್ರದ ಓ.ಬಿ.ಸಿಗಾಗಿ ಹಾಗೂ ಪಂಚಮಸಾಲಿ ಸಮುದಾಯದವರು 2ಎ ಗಾಗಿ ಉಗ್ರ ಹೋರಾಟ ಮಾಡಲಾಗುವುದು ಎಂದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News