ಮುಖ್ಯಮಂತ್ರಿ ಕೊಟ್ಟ ಭರವಸೆ ಈಡೇರಿಸಲಿ : ತಾಹೇರ್ ಹುಸೇನ್

Update: 2024-12-21 11:59 GMT

ಕೊಪ್ಪಳ : ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರಿಗೆ ಶೇ.4 ಮಿಸಲಾತಿ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರು, ಆದರೆ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಇದು ಜಾರಿಗೆ ಬಂದಿಲ್ಲ, ಅವರು ಕೊಟ್ಟ ಭರವಸೆ ಈಡೇರಿಸಲಿ. ಚಿನ್ನಪ್ಪ ರೆಡ್ಡಿ ವರದಿ ನೀಡಬೇಕು. ಆದರೆ ಕಾಂಗ್ರೇಸ್ ಪಕ್ಷ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳದಿದ್ದರೆ ಹೋರಾಟ ಮಾಡಲಾಗುವುದು ಎಂದು ವೇಲ್ಫರ್ ಪಾರ್ಟಿ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ತಿಳಿಸಿದ್ದಾರೆ.

ಕೊಪ್ಪಳದಲ್ಲಿ ವಾರ್ತಾಭಾರತಿಯೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ರವರ ಹೆಸರು ಹೆಚ್ಚು ಹೆಚ್ಚು ಬಾರಿ ಹೇಳುವುದು ವ್ಯಸನವಾಗಿದೆ ಎಂದು ಸಂವಿಧಾನದ ಕರ್ತೃ ಬಾಬಾ ಸಾಹೇಬ್ ಅಂಬೇಡ್ಕರ್ ರನ್ನು ನಿಂದಿಸುವ ಮೂಲಕ ಗೃಹ ಮಂತ್ರಿ ಅಮಿತ್ ಶಾ ತನ್ನ ಫ್ಯಾಶಿಸ್ಟ್ ಮನಸ್ಥಿತಿಯನ್ನು ಬಹಿರಂಗ ಪಡಿಸಿದ್ದಾರೆಂದು ವೆಲ್ಫೇರ್ ಪಾರ್ಟಿ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೃಹ ಮಂತ್ರಿಗಳ ಈ ಹೇಳಿಕೆ ಅತ್ಯಂತ ಖಂಡನೀಯ, ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರು ಹೇಳುವುದು ಭಾರತೀಯರೆಲ್ಲರಿಗೆ ಹೆಮ್ಮೆಯ ವಿಚಾರವಾಗಿದೆ. ಅವರು ಈ ದೇಶಕ್ಕೆ ಒಂದು ಮಾದರಿ ಸಂವಿಧಾನ ರೂಪಿಸಿದವರು. ಹಿಂದುಳಿದ, ಅಲ್ಪಸಂಖ್ಯಾತರ ದ್ವನಿ ಆಗಿದ್ದವರು. ಅವರ ಬಗ್ಗೆ ಇಷ್ಟು ಕೀಳು ಭಾವನೆ ಇಟ್ಟುಕೊಳ್ಳುವುದು ಈ ದೇಶದ ಗ್ರಹ ಮಂತ್ರಿಗೆ ಶೋಭೆ ತರುವುದಿಲ್ಲ ಅವರು ತಮ್ಮ ಸಚಿವ ಸಾನಕ್ಕೆ ರಾಜೀನಾಮೆ ಕೊಡಬೇಕು ಎಂದರು.

ಬಾಬಾ ಸಾಹೇಬ್ ಹೆಸರನ್ನು ಕೇಳಲು ಕೋಮು ವ್ಯಸನಿಗಳಿಗೆ ಕರ್ಕಶವಾಗಬಹುದು. ಆದರೆ ಇಲ್ಲಿನ ದಲಿತರ ಹಿಂದುಳಿದವರ, ದುರ್ಬಲರ ಹಕ್ಕುಗಳಿಗೆ ಹೋರಾಡಿದ ಅಂಬೇಡ್ಕರ್ ರವರ ಸೇವೆ ಸ್ಮರಣೀಯ. ಆ ಹೆಸರು ನಾವು ಎಂದಿಗೂ ಸ್ಮರಿಸಿ ಹೇಳುತ್ತಿರುವುದು ನಿಮಗೆ ವ್ಯಸನದಂತೆ ಕಂಡರೆ ಅದು ನಿಮ್ಮ ಮಾನಸಿಕ ಸಮಸ್ಯೆಯಾಗಿದೆ. ಆ ಹೆಸರನ್ನು ಭಾರತೀಯರು ಎಂದೆಂದಿಗೂ ಹೇಳುತ್ತಿರುತ್ತಾರೆ.

ಬಡವರ ದಲಿತರ ದೀನ ದುರ್ಬಲರ ಹಕ್ಕುಗಳಿಗೆ ಹೋರಾಡಿದ ಮಹಾನ ವ್ಯಕ್ತಿಯನ್ನು ನಿಂದಿಸುವ ಮೂಲಕ ಇಡೀ ದೇಶದ ನಾಗರಿಕರ ಮನಸ್ಸಿಗೆ ಘಾಸಿಯುಂಟು ಮಾಡಿರುವ ಗ್ರಹ ಮಂತ್ರಿಗಳು ಕೂಡಲೇ ಕ್ಷಮೆಯಾಚನೆ ಮಾಡಬೇಕು ಮತ್ತು ತಮ್ಮ ಶಬ್ದಗಳನ್ನು ವಾಪಾಸ್ ಪಡೆಯಬೇಕು, ಇದನ್ನು ಒಕ್ಕೊರಲಿನಿಂದ ಎಲ್ಲರೂ ಖಂಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಇನ್ನೂಂದು ವಿಷಯ ರಾಜ್ಯದಲ್ಲಿ ಸಿ.ಟಿ.ರವಿಯವರ ಹೇಳಿಕೆ ಕೀಳುಮಟ್ಟದ್ದು, ಇದಕ್ಕೆ ರಾಜಕೀಯ ಬಣ್ಣಹಚ್ಚುವ ಪ್ರಯತ್ನ ಬಿಜೆಪಿ ಮತ್ತು ಕಾಂಗ್ರೇಸ್ ಎರಡು ಕಡೆಯಿಂದ ನಡೆಯುತ್ತಿದೆ, ನಾವು ಕೇಳುತ್ತಿರುವುದು ಯಾವುದೇ ಮಹಿಳೆಯ ವಿರುದ್ದ ಇತಹ ಬಾಷೆ ಬಳಸಬಾರದು, ಮಹಿಳಾ ಸಚಿವರಿಗೆ ಅವಮಾನವಾಗಿದೆ, ಮಾನಹಾನಿಯಾಗಿದೆ ಇದಕ್ಕೆ ಯಾವ ರೀತಿ ಶಿಕ್ಷಿಸಬೇಕು ಎಂದು ಚರ್ಚೆಯಾಗ ಬೇಕೇ ವಿನಹ ಇದು ರಾಜಕೀಯವಾಗಬಾರದು ಎಂದರು.

ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾಧ್ಯಕ್ಷ ಅದೀಲ್ ಪಟೇಲ್, ಮೊಹಮ್ಮದ್ ಅಲಿಮುದ್ದಿನ್, ಇಸಾಕ್ ಫಜೀಲ್ ಸೇರಿದಂತೆ ಮಂತಾದವರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News