ಹಾಸನ ಸಮಾವೇಶ ಕಾಂಗ್ರೆಸ್ ಪಕ್ಷದ ಚಿನ್ಹೆಯಡಿಯಲ್ಲೇ ನಡೆಯುತ್ತೆ:ಎಚ್ ಎಮ್ ರೇವಣ್ಣ
ಕೊಪ್ಪಳ: ಹಾಸನ ಸಮಾವೇಶ ಕಾಂಗ್ರೆಸ್ ಪಕ್ಷದ ಚಿನ್ಹೆಯಡಿಯಲ್ಲೆ ನಡಿಯುತ್ತೆ ,CWC ಸಭೆಯಲ್ಲಿ ಚರ್ಚೆ ಆಗಿದೆ ಸಚಿವ ಸಂಪುಟ ಮತ್ತು ಕೆಪಿಸಿಸಿ ಅದ್ಯಕ್ಷರ ಬದಲಾವಣೆ ಇಲ್ಲ ಎಂದು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್ ಎಮ್ ರೇವಣ್ಣ ಅವರು ಹೇಳಿದರು.
ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು CWC ಮೀಟಿಂಗ್ ನಲ್ಲಿ ಚರ್ಚೆ ಆಗಿದೆ,ಸಚಿವ ಸಂಪುಟ ಆಗಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಯಾವುದು ಇಲ್ಲ. ಅನಾಮಧೇಯ ಪತ್ರದ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ, ನಮ್ಮ ಪಕ್ಷದ ಚಿನ್ಹೆಯ ಅಡಿಯಲ್ಲೇ ಸಮಾವೇಶ ಮಾಡಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಪಕ್ಷದ ಚಿನ್ಹೆಯ ಅಡಿಯಲ್ಲೆ ಸಮಾವೇಶ ನಡೆಯತ್ತೆ,ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಿಸಲ್ಲ. ಈಗಾಗಲೆ ಟ್ಯಾಕ್ಸ್ ಪೇಯರ್ಸ್ ಹಾಗೂ ಎಂಪ್ಲಾಯ್ಸ್ ಗಳೊಗೆ ಬೇಡ ಅನ್ನೋ ಚರ್ಚೆ ನಡೀತಾ ಇದೆ ಅದರ ಬಗ್ಗೆ ನೋಡೋಣ, ಆದ್ರೆ ಯಾವುದೇ ಕಾರಣಕ್ಕೂ ನಿಲ್ಲಿಸೋದಿಲ್ಲ ಎಂದರು.
ಪಂಚ ಗ್ಯಾರಂಟಿ ಜಾರಿಗೆ ಬಂದ ಮೇಲೆ ಜನರಿಗೆ ನೇರವಾಗಿ ತಲುಪಿಸುವ ಕೆಲಸ ಮಾಡಿದ್ದೇವೆ. ಇಂತಹ ಕೆಲಸಗಳು ಕಾಂಗ್ರೆಸ್ ಪಕ್ಷಕ್ಕೆ ಹೊಸದೇನಲ್ಲ. ಇಂದಿರಾ ಗಾಂಧಿ , ದೇವರಾಜ ಅರಸು ಕಾಲದಿಂದಲೂ ಇಂತಹ ಕೆಲಸ ಮಾಡಿದ್ದೇವೆ. ಉಳುವವನಿಗೆ ಭೂಮಿ ನೀಡಿದ ಕೀರ್ತಿ ಕಾಂಗ್ರೆಸ್ ಗೆ ಸೇರಿದೆ. ಅನ್ನಭಾಗ್ಯ, ವಸತಿಯೋಜನೆಗಳಂತಹ ಜನಪರ ಕಾರ್ಯಕ್ರಮಗಳನ್ನ ನೀಡಿದ್ದೇವೆ ಎಂದರು.
ಪ್ರಣಾಳಿಕೆಯಲ್ಲಿ ಹೇಳಿದಂತೆ 168 ಭರವಸೆಗಳಲ್ಲಿ 150 ಬೇಡಿಕೆ ಈಡೇರಿಸಿದ್ದೆವೆ, ನಾವು ಕೊಟ್ಟಿದ್ದನ್ನ ಕಿತ್ಕೊಳೊದ್ರಲ್ಲಿ ಬಿಜೆಪಿಯವರು ಮುಂದೆ ಇದ್ದಾರೆ. ನಾವು ಕೊಟ್ಟ 7 ಕೆಜಿಯಲ್ಲಿ 5 ಕೆಜಿ ಕೊಟ್ಟಿದ್ದರು.ಚುನಾವಣೆಯ ಮೊದಲು ಬೆಲೆಯೇರಿಕೆಯಾಗಿತ್ತು. ಇದರ ಬಗ್ಗೆ ಸಮಗ್ರವಾಗಿ ಚಿಂತನೆ ನಡೆಸಿ, ನಮ್ಮ ನಾಯಕ ಜೊತೆ ಚರ್ಚೆ ಮಾಡಿ ಗ್ಯಾರಂಟಿ ಕಾರ್ಡಗಳನ್ನ ಹಂಚಿದ್ದರಿಂದ 136 ಸೀಟ್ ಗೆದ್ದು ಸರ್ಕಾರ ರಚನೆ ಮಾಡಿದ್ದೇವೆ. ನಮ್ಮ ಸರ್ಕಾರ ನುಡಿದಂತೆ ಎಲ್ಲಾ ಗ್ಯಾರಂಟಿಗಳನ್ನ ಜಾರಿ ಮಾಡಿದೆ ಎಂದರು.
ಇವತ್ತ 366.55 ಕೋಟಿ ಮಹಿಳೆಯರು ಶಕ್ತಿ ಯೋಜನೆ ಅಡಿಯಲ್ಲಿ ಪ್ರಯಾಣ ಮಾಡಿದ್ದಾರೆ. ಗೃಹಲಕ್ಷ್ಮಿ ಯೋಜನೆ 1.22 ಕೋಟಿ ಜನರಿಗೆ ಸೇರಿದೆ, ಗೃಹ ಜ್ಯೋತಿ ಯೋಜನೆ 1.61 ಕೋಟಿ ಜನರಿಗೆ ತಲುಪಿದೆ, ಒಟ್ಟು 11.031 ಕೋಟಿ ರಾಜ್ಯದಲ್ಲಿ ಖರ್ಚಾಗಿದೆ ಎಂದರು.
ನಮ್ಮ ಯೋಜನೆಗಳು ಯಾವುದೆ ಮಧ್ಯವರ್ತಿಗಳಿಲ್ಲದೆ ಜನರಿಗೆ ತಲುಪುತ್ತಿವೆ, ಮೋದಿಯವರು 3 ಕೋಟಿ ಉದ್ಯೋಗ ಕೊಡ್ತಿವಿ ಅಂತ ಹೇಳಿದ್ರು ಅವರು ಉದ್ಯೋಗ ಕೊಟ್ಟಿಲ್ಲ ಹೀಗಾಗಿ ನಾವು ಯುವ ನಿಧಿಯನ್ನು ಕೊಡ್ತಾ ಇದ್ದೇವೆ ಎಂದರು.
ಈ ಯೋಜನೆಗಳು ಜಾರಿಗೆ ಬರಲ್ಲ. ರಾಜ್ಯ ದಿವಾಳಿ ಆಗುತ್ತೆ ಅಂತ ಮೋದಿಯವರು ಸೇರಿ ವಿಪಕ್ಷಗಳು ಹೇಳಿದ್ದರು.ಚಳಿಗಾಲ ಅಧಿವೇಶನದಲ್ಲಿ ಎಲ್ಲದಕ್ಕೂ ಉತ್ತರ ಕೊಡಲಾಗುತ್ತೆ. 52 ಸಾವಿರ ಕೋಟಿ ಹಣವನ್ನ ಇಟ್ಟಿರೋದ್ರಿಂದ್ರ ಹೆಚ್ಚು ಕಡಿಮೆ ಆಗಿರಬಹುದು. ಇಲ್ಲ ಅಂತ ಹೇಳಲ್ಲ,ಈಗಾಗಲೆ ಹೇಳಿದ್ದೆವೆ ಯಾವುದೆ ತೊಂದರೆ ಆಗಲ್ಲ, ಈ ಹಣವೂ ಕೂಡ ಅಭಿವೃದ್ಧಿಗೆ ಬಳಕೆಯಾಗುತ್ತಿದೆ ಎಂದು ಹೇಳಿದರು.