ಈ ಅಹಾರಗಳನ್ನು ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಬೇಡಿ...
ದಿಢೀರ್ ಆಹಾರ ತಯಾರಿಸಲು ಅನುಕೂಲ ಮಾಡಿಕೊಡುವ ಪ್ರೆಶರ್ ಕುಕ್ಕರ್ ನಮ್ಮ ಜೀವನವನ್ನು ಸರಳಗೊಳಿಸಿದೆ. ಆದರೆ ಕೆಲ ಆಹಾರ ಪದಾರ್ಥಗಳನ್ನು ಕುಕ್ಕರ್ ನಲ್ಲಿ ಬೇಯಿಸುವುದು ಉತ್ತಮವಲ್ಲ. ಸೈಗನ್ಸ್ ಲಕ್ಷ್ಮಿ ಹಾಸ್ಪಿಟಲ್‍ನ ಸಲಹಾ ವೈದ್ಯ ಡಾ.ಸಂಜಯ್ ಸಿಂಗ್ ಅವರ ಪ್ರಕಾರ, ಪ್ರೆಶರ್ ಕುಕ್ಕರ್‍ಗಳು ವೈವಿಧ್ಯಮಯ ಹಾಗೂ ದಕ್ಷ ಅಡುಗೆ ಪರಿಕರಗಳಾಗಿದ್ದರೂ, ಕೆಲ ಬಗೆಯ ಆಹಾರ ಈ ಅಡುಗೆ ವಿಧಾನಕ್ಕೆ ಸೂಕ್ತವಲ್ಲ.
"ಈ ಇತಿಮಿತಿಯನ್ನು ಅರ್ಥಮಾಡಿಕೊಂಡು ರುಚಿ, ಬಣ್ಣ, ಪೌಷ್ಟಿಕ ಮೌಲ್ಯಗಳಂಥ ಅಂಶವನ್ನು ಉಳಿಸಿಕೊಳ್ಳಲು ಭಿನ್ನ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಬಹುದು ಹಾಗೂ ಆರೋಗ್ಯ ಸುರಕ್ಷತೆ ಮತ್ತು ಆನಂದದಾಯಕ ಅಡುಗೆ ಅನುಭವ ಹೇಗೆ ಪಡೆಯಬಹುದು ಎಂದು ಚಿಂತಿಸುವುದೂ ಅಗತ್ಯ" ಎನ್ನುವುದು ಅವರ ಅಭಿಮತ.
ಆದ್ದರಿಂದ ಯಾವ ಆಹಾರವನ್ನು ಕುಕ್ಕರ್ ನಲ್ಲಿ ಬೇಯಿಸಬಾರದು ಮತ್ತು ಏಕೆ ಎಂದು ತಿಳಿದುಕೊಳ್ಳೋಣ..
ಎಣ್ಣೆಯಲ್ಲಿ ಹುರಿಯುವ ಆಹಾರ ಪದಾರ್ಥ ಮೊದಲನೆಯದು. ಎಣ್ಣೆಯಲ್ಲಿ ಹುರಿಯುವ ಪದಾರ್ಥಗಳಿಗೆ ಇದು ಸೂಕ್ತವಲ್ಲ. ಏಕೆಂದರೆ ಅಧಿಕ ಒತ್ತಡ ಮತ್ತು ಬಿಸಿ ಎಣ್ಣೆಯ ಅಪಾಯ ಸಾಧ್ಯತೆ ಇರುತ್ತದೆ. ಹುರಿಯುವ ಪದಾರ್ಥಗಳಿಗೆ ಶಾಖವನ್ನು ನಿಯಂತ್ರಿಸವ ಅಗತ್ಯ ಇರುತ್ತದೆ. ಪ್ರೆಶರ್ ಕುಕ್ಕರ್‍ಗಳು ಈ ಉದ್ದೇಶಕ್ಕಲ್ಲ. ಇದು ಅಧಿಕ ಬಿಸಿಯಾಗುವಿಕೆ, ಎಣ್ಣೆ ಸಿಡಿಯಲು ಕಾರಣವಾಗಿ ಸುಟ್ಟಗಾಯ ಅಥವಾ ಬೆಂಕಿ ಅನಾಹುತಕ್ಕೂ ಕಾರಣವಾಗಬಹುದು ಎನ್ನುವುದು ಅವರ ಎಚ್ಚರಿಕೆ.
ಅಂತೆಯೇ ಬೇಗನೇ ಬೇಯುವ ತರಕಾರಿಗಳಾದ ಬಟಾಣಿ, ಶತಾವರಿ, ಚೀನಿಕಾಯಿಯಂಥ ತರಕಾರಿಗಳು ಬೇಗನೇ ಬೇಯುತ್ತವೆ. ಇವುಗಳನ್ನು ಕುಕ್ಕರ್‍ನಲ್ಲಿ ಬೇಯಿಸುವುದರಿಂದ ಹೆಚ್ಚು ಬೇಯುತ್ತದೆ ಹಾಗೂ ಅದರ ಬಣ್ಣ ಹಾಗೂ ಪೌಷ್ಟಿಕಾಂಶಗಳು ನಾಶವಾಗುತ್ತವೆ. ಇವುಗಳನ್ನು ಸಾಮಾನ್ಯವಾಗಿ ಫ್ರೈ ಮಾಡುವುದರಿಂದ ಇವುಗಳು ಪೌಷ್ಟಿಕಾಂಶ ಉಳಿಸಿಕೊಳ್ಳುವ ಜತೆಗೆ ಸಹಜ ಘಮವನ್ನೂ ಹೊಂದಿರುತ್ತವೆ.
ಇದು ಹಸಿರು ಸೊಪ್ಪುಗಳಿಗೂ ಅನ್ವಯಿಸುತ್ತದೆ ಎನ್ನುತ್ತಾರೆ ಡಾ.ಶ್ರದ್ಧಾ. ಪೌಷ್ಟಿಕಾಂಶವನ್ನು ಉಳಿಸಿಕೊಳ್ಳಲು ಹಸಿರು ಸೊಪ್ಪುಗಳನ್ನು ಹಬೆಯಲ್ಲಿ ಬೇಯಿಸುವುದು, ಅಥವಾ ಹುರಿಯವುದು ಉತ್ತಮ. ಅಂತೆಯೇ ಹೈನು ಉತ್ಪನ್ನಗಳಾದ ಹಾಲು ಅಥವಾ ಕೆನೆಯನ್ನು ಅಧಿಕ ಒತ್ತಡ ಮತ್ತು ಶಾಖಕ್ಕೆ ಗುರಿಪಡಿಸಿದಾಗ, ಅದು ಬೇರ್ಪಡುವ ಅಥವಾ ಮೊಸರಾಗುವ ಸಾಧ್ಯತೆ ಇರುತ್ತದೆ. ಇದು ಅನಪೇಕ್ಷಿತ ಸಂರಚನೆ ಮತ್ತು ವಾಸನೆಗೆ ಕಾರಣವಾಗಬಹುದು. ಆದ್ದರಿಂದ ಆಹಾರಗಳನ್ನು ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿದ ಬಳಿಕ ಹೈನು ಉತ್ಪನ್ನ ಸೇರಿಸುವುದು ಸೂಕ್ತ.
ಅಂತೆಯೇ ಚಿಪ್ಪುಸಹಿತ ಮೊಟ್ಟೆಯನ್ನು ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸುವುದು ಅಪಾಯಕಾರಿ ಎಂದು ಡಾ.ಶ್ರದ್ಧಾ ಅಭಿಪ್ರಾಯಪಡುತ್ತಾರೆ. ಕುಕ್ಕರ್ ಒಳಗಿನ ಹಬೆಯ ಕಾರಣದಿಂದ ಮೊಟ್ಟೆ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಇದು ಸುಟ್ಟಗಾಯಗಳಿಗೂ ಕಾರಣವಾಗಬಹುದು. ಆದ್ದರಿಂದ ಮೊಟ್ಟೆಯನ್ನು ಕುಕ್ಕರ್ ಗಳಲ್ಲಿ ಬೇಯಿಸಬೇಡಿ.
ಕೃಪೆ: indianexpress.com