ತೀರಾ ಕಡಿಮೆ ನೀರು ಕುಡಿಯುವುದು, ಅಧಿಕ ನೀರು ಸೇವನೆ; ಯಾವುದು ಮಾರಕ?

Update: 2023-08-07 11:35 GMT

ಸಾಂದರ್ಭಿಕ ಚಿತ್ರ (Credit: freepik.com)

ಕುಟುಂಬ ಪ್ರವಾಸದಲ್ಲಿದ್ದ 35 ವರ್ಷದ, ಎರಡು ಮಕ್ಕಳ ತಾಯಿಯೊಬ್ಬರು ಹೆಚ್ಚು ನೀರು ಕುಡಿದು ಮೃತಪಟ್ಟ ಘಟನೆ ಇಂಡಿಯಾನಾದಿಂದ ವರದಿಯಾಗಿದೆ. ಆ್ಯಶ್ಲೆ ಸಮ್ಮರ್ಸ್ ಡೀಹೈಡ್ರೇಷನ್‍ನಿಂದಾಗಿ ತಲೆನೋವು ಹಾಗೂ ತಲೆ ಹಗುರವಾದ ಅನುಭವ ಆದ ಬಳಿಕ ಅವರು 1.89 ಲೀಟರ್ ನೀರು ಕುಡಿದರು. ಬಳಿಕ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರಿಗೆ ಪ್ರಜ್ಞೆ ಮರುಕಳಿಸಲೇ ಇಲ್ಲ. ಆಸ್ಪತ್ರೆಯ ವೈದ್ಯರ ತಂಡದ ಪ್ರಕಾರ, ಈ ಮಹಿಳೆಗೆ ವಾಟರ್ ಇನ್‍ಟಾಕ್ಸಿಕೇಶನ್ ಅಥವಾ ಅಧಿಕ ನೀರಿನಿಂದಾಗಿ ವಿಷಪ್ರಾಶನವಾಗಿದೆ. ತೀರಾ ಕಡಿಮೆ ಅವಧಿಯಲ್ಲಿ ಹೆಚ್ಚು ನೀರು ಕುಡಿಯುವುದರಿಂದ ಆಗುವ ಪರಿಸ್ಥಿತಿ ಇದಾಗಿದೆ. ಡೀಹೈಡ್ರೇಷನ್ ಅಥವಾ ವಾಟರ್ ಇನ್‍ಟಾಕ್ಸಿಕೇಶನ್ ಎರಡೂ ದೇಶದ ದ್ರವಾಂಶದ ಅಸಮತೋಲನದಿಂದ ಉಂಟಾಗುತ್ತದೆ. ಇವೆರಡೂ ಮಾರಕ.

"ಜೀವಕ್ಕೆ ನೀರು ಅತ್ಯಗತ್ಯ. ದೇಶದ ಕಾರ್ಯಗಳು ಸುಗಮವಾಗಿ ಸಾಗಲು ಮತ್ತು ಒಟ್ಟಾರೆ ಆರೋಗ್ಯ ಕಾಪಾಡಲು ಇದು ಪ್ರಮುಖ ಪಾತ್ರ ವಹಿಸುತ್ತದೆ. ಜೀವನದಲ್ಲಿ ಇತರ ಎಲ್ಲ ಅಂಶಗಳಂತೆ ಇದು ಕೂಡಾ ಸಾಧಾರಣವಾಗಿರಬೇಕಾದದ್ದು ಅಗತ್ಯ. ದ್ರವಾಂಶದ ಅಸಮತೋಲನದಿಂದ ಉಂಟಾಗುವ ಡೀಹೈಡ್ರೇಷನ್ ಹಾಗೂ ವಾಟರ್ ಇನ್‍ಟಾಕ್ಸಿಕೇಶನ್ ಎರಡೂ ಅಪಾಯಕಾರಿ. ಸುಕ್ಷೇಮ ಕಾಪಾಡಲು ಈ ಬಗ್ಗೆ ಅರಿವು ಇರಬೇಕಾದ್ದು ಮುಖ್ಯ" ಎನ್ನುತ್ತಾರೆ ಆಂತರಿಕ ಔಷಧ ತಜ್ಞ ಡಾ.ಅನುರಾಗ್ ಅಗರ್‍ವಾಲ್.

ವಾಟರ್ ಇನ್‍ಟಾಕ್ಸಿಕೇಶನ್ ಅನ್ನು ಓವರ್‍ಹೈಡ್ರೇಷನ್ ಅಥವಾ ಜಲ ವಿಷಪ್ರಾಶನ ಎಂದು ಕರೆಯುತ್ತಾರೆ. ಅಧಿಕ ನೀರು ಸೇವಿಸುವುದರಿಂದ ಇದು ಸಂಭವಿಸುತ್ತದೆ. ಇದು ರಕ್ತ ಪ್ರವಾಹಕ್ಕೆ ಅಗತ್ಯವಾದ ಎಲೆಕ್ಟ್ರೊಲೇಟ್‍ಗಳು ದುರ್ಬಲವಾಗಲು ಕಾರಣವಾಗುತ್ತದೆ ಹಾಗೂ ಹಲವು ಗಂಭೀರ ಪರಿಣಾಮಗಳು ಎದುರಾಗುತ್ತವೆ. ತಲೆನೋವು, ವಾಕರಿಕೆ, ಗೊಂದಲದಂಥ ಸೌಮ್ಯ ಲಕ್ಷಣಗಳು ಕಂಡುಬರುತ್ತವೆ. ಇದು ಅಧಿಕವಾದರೆ ವಾಂತಿ, ಪಾಶ್ರ್ವವಾಯು, ಕೋಮಾದಂಥ ತೀವ್ರ ಸ್ಥಿತಿಗೂ ಕಾರಣವಾಗಬಹುದು.

ಅಂತೆಯೇ ಡೀಹೈಡ್ರೇಷನ್ ಎಂದರೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಸಾಮಾನ್ಯ ದೈಹಿಕ ಕಾರ್ಯಗಳಿಗೆ ತೊಂದರೆ ಉಂಟಾಗುವುದು. ಒಣಗಿದ ಬಾಯಿ, ಮಂಪರು, ಸುಸ್ತು ಇತ್ಯಾದಿಗಳು ಇದರ ಲಕ್ಷಣ. ಇದರ ತೀವ್ರಸ್ವರೂಪವೆಂದರೆ ಅಂಗಾಂಗ ವೈಫಲ್ಯ.

ಈ ಎರಡೂ ಸ್ಥಿತಿಗಳು ಅಪಾಯಕಾರಿ. ಈ ಅಸಮತೋಲನವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ತೀವ್ರ ಡೀಹೈಡ್ರೇಷನ್ ಎಲೆಕ್ಟ್ರೋಲೈಟ್ ಅಸಮತೋಲನ, ಕಿಡ್ನಿ ವೈಫಲ್ಯ, ಜೀವಾಪಾಯದ ಸಂಕೀರ್ಣತೆಗಳಿಗೆ ಕಾರಣವಾಗಬಹುದು. ಜಲವಿಶಪ್ರಾಶನ ತೀರಾ ಅಪರೂಪವಾದರೂ, ಎಲೆಕ್ಟ್ರೋಲೈಟ್ ಅಸಮತೋಲನದಿಂದಾಗಿ ಪ್ರಾಣಾಪಾಯ ಅಧಿಕ. ಅಸಮತೋಲನ ಅತ್ಯಧಿಕವಾದಾಗ ಅಂಗಾಂಗ ವೈಫಲ್ಯ ಹಾಗೂ ಮೆದುಳಿನ ಊತ ಕಾಣಿಸಿಕೊಳ್ಳಬಹುದು. ಅಥ್ಲೀಟ್‍ಗಳಿಗೆ ಈ ಅಪಾಯ ಸಾಧ್ಯತೆ ಅಧಿಕ.

ಕೃಪೆ: hindustantimes.com

Writer - ವಾರ್ತಾಭಾರತಿ

contributor

Editor - Mushina

A staff reporter

Web Editor at VarthaBharati

Byline - ವಾರ್ತಾಭಾರತಿ

contributor

Similar News