ಜನೋಪಯೋಗಿ ತಂತ್ರಜ್ಞಾನ ರೇಡಿಯೊಗ್ರಫಿ

Update: 2024-11-08 05:51 GMT

ಇಂದು ನವೆಂಬರ್ 8 ವಿಶ್ವ ರೇಡಿಯೊಗ್ರಫಿ ದಿನಾಚರಣೆ. ಆದಿವ್ಯಾಧಿಗಳು ಮಾನವರ ಜೀವನದುದ್ದಕ್ಕೂ ಜಗತ್ತಿನ ಜನತೆಯನ್ನು ಕಾಡುತ್ತಲೇ ಇರುತ್ತವೆ. ವೈದ್ಯರ ಸಲಹೆ, ಚಿಕಿತ್ಸೆಯಿಂದ ರೋಗ ಬವಣೆಗಳು ಪರಿಹರಿಸಲ್ಪಡುತ್ತಿದ್ದರೂ ಕೆಲವೊಮ್ಮೆ ಮಾನವ ಶರೀರದ ಒಳಗಿನ ಸ್ಥಿತಿಯನ್ನು ತಿಳಿಯಲು ತಂತ್ರಜ್ಞಾನಗಳು ಅವಶ್ಯಕ. ರೋಗ ಮೂಲವನ್ನು ಹುಡುಕುವ ಸಲುವಾಗಿ 1895ರ ನವೆಂಬರ್ 8ರಂದು ಜರ್ಮನಿಯ ಮೆಕ್ಯಾನಿಕಲ್ ಇಂಜಿನಿಯರ್ ಹಾಗೂ ಭೌತಶಾಸ್ತ್ರ ಪರಿಣಿತ ವಿಜ್ಞಾನಿ ವಿಲ್ಹೆಲ್ಮ್ ಕಾನ್ರಾಡ್ ರಾಂಟ್ಜೆನ್ ಅವರು ವಿಕಿರಣ ತಂತ್ರಜ್ಞಾನ ಆವಿಷ್ಕರಿಸಿ ಯಶಸ್ವಿಯಾದರು.

ರಾಂಟ್ಜೆನ್ ಅವರ ಸಂಶೋಧನೆಯಿಂದ ಪ್ರಪಂಚದುದ್ದಕ್ಕೂ ರೋಗಿಗಳ ಶರೀರದ ಒಳಗಿನ ಸಮಸ್ಯೆಯನ್ನು ವಿಕಿರಣ ಅಥವಾ ರೇಡಿಯೊಗ್ರಫಿಯ ಮೂಲಕ ತಿಳಿಯಲು ಆ ಕಾಲದಲ್ಲಿ ತಂತ್ರಜ್ಞಾನ ಬಳಕೆಯಾಯಿತು.

ಸುಮಾರು 130 ವರ್ಷಗಳ ಹಿಂದೆ ಜರ್ಮನಿಯ ವರ್ಜ್ ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ವಿಲ್ಹೆಲ್ಮ್ ಕಾನ್ರಾಡ್ ರಾಂಟ್ಜೆನ್ ಅವರು ಮಾಡಿದ ಸಾಧನೆಯಿಂದ ವೈದ್ಯರುಗಳ ಚಿಕಿತ್ಸಾ ವಿಧಾನಕ್ಕೆ ಹೆಚ್ಚಿನ ಸಹಕಾರ ಲಭ್ಯವಾಯಿತು.

ರಾಂಟ್ಜೆನ್ ಅವರು ಕಂಡು ಹಿಡಿದ ವಿಕಿರಣ ಪರೀಕ್ಷೆ ಎಕ್ಸ್ ರೇ ಎಂದು ಪ್ರಸಿದ್ಧಿಯಾಯಿತು. 1901ರಲ್ಲಿ ರಾಂಟ್ಜೆನ್ ಅವರ ಈ ವೈಜ್ಞಾನಿಕ ಸಾಧನೆಗೆ ನೊಬೆಲ್ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ಅನೇಕ ವೈದ್ಯರು, ವೈದ್ಯ ವಿಜ್ಞಾನಿಗಳು, ತಂತ್ರಜ್ಞರು ರೇಡಿಯಾಲಜಿ ಮತ್ತು ರೇಡಿಯೊಗ್ರಫಿ ವಿಸ್ತೃತ ವಿಭಾಗಕ್ಕೆ ಕೊಡುಗೆ ನೀಡುತ್ತಲೇ ಬಂದಿದ್ದಾರೆ.

1918ರಲ್ಲಿ ಜಾರ್ಜ್ ಇಸ್ವಿವೆನ್ಸ್ ಅವರು ರೇಡಿಯೊಗ್ರಫಿ ವಿಜ್ಞಾನದ ವಿಸ್ತಾರ ಬಳಕೆಗೆ ಚಾಲನೆ ನೀಡಿದರು.

1958ರಲ್ಲಿ ಸ್ಕಾಟಿಸ್ಟ್ ಮಹಿಳಾ ತಜ್ಞೆ ಅಯಾನ್ ಡೊನಾಲ್ಡ್ ಅವರು ಅಲ್ಟ್ರಾಸೌಂಡ್ ಕಂಡು ಹಿಡಿದರು. ಈಗ ಸಿಟಿಸ್ಕ್ಯಾನ್, ಎಂಆರ್‌ಐ ಸ್ಕ್ಯಾನ್ ಇತ್ಯಾದಿ ರೇಡಿಯೊಗ್ರಫಿಯಲ್ಲಿ ಉನ್ನತ ಸೇವಾ ವೈವಿಧ್ಯಗಳಿವೆ.

ರೇಡಿಯೊಗ್ರಫಿ ಅಥವಾ ರೇಡಿಯಾಲಜಿಯಲ್ಲಿ ಸ್ನಾತಕೋತ್ತರ ವೈದ್ಯಕೀಯ (ಎಂ.ಡಿ.) ಪದವಿಗಳನ್ನು ಕೆಲವು ವೈದ್ಯಕೀಯ ಕಾಲೇಜುಗಳು ಪ್ರಾರಂಭಿಸಿವೆ. ರೇಡಿಯೊಗ್ರಫಿ ತಂತ್ರಜ್ಞರಾಗಲು ರೇಡಿಯೊಗ್ರಫಿ ಟೆಕ್ನಿಷಿಯನ್ ಕೋರ್ಸ್‌ಗಳನ್ನು ಕಲಿಯಲು ಅವಕಾಶ ನೀಡುವ ರೇಡಿಯೊಗ್ರಫಿ ವಿಜ್ಞಾನದ ವಿದ್ಯಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.

ಅಮೆರಿಕದ ರೇಡಿಯೊಗ್ರಫಿ ಕಾಲೇಜುಗಳ ಸಂಘಟನೆ ಮತ್ತು ಇಂಟರ್ ನ್ಯಾಶನಲ್ ರೇಡಿಯೊಗ್ರಾಫರ್ಸ್ ಮತ್ತು ರೇಡಿಯೊಲಾಜಿಕಲ್ ಟೆಕ್ನಾಲಜಿಸ್ಟ್ ಐಎಸ್ ಆರ್‌ಆರ್‌ಟಿ 2012ರಿಂದ ವಿಶ್ವ ರೇಡಿಯೊಗ್ರಫಿ ದಿನವನ್ನು ಆಚರಿಸುತ್ತಿವೆ. ರೇಡಿಯೊಗ್ರಫಿ ತಂತ್ರಜ್ಞಾನ ಬಳಕೆಯ ಬಗ್ಗೆ ಜನ ಜಾಗೃತಿ ಮೂಡಿಸುವುದು ಹಾಗೂ ಇದನ್ನು ಕಂಡುಹಿಡಿದ ವಿಜ್ಞಾನಿ ರಾಂಟ್ಜೆನ್ ಅವರ ಸ್ಮರಣೆ ಈ ದಿನಾಚರಣೆಯ ಉದ್ದೇಶ.

ಆರೋಗ್ಯ ರಕ್ಷಣೆ ಮತ್ತು ಜಾಗೃತಿಯಲ್ಲಿ ಸಹಕರಿಸುವ ರೇಡಿಯೊಗ್ರಫಿ ಅಥವಾ ವಿಕಿರಣ ಶಾಸ್ತ್ರ ಜನೋಪಯೋಗಿಯಾದ ಜಾಗತಿಕ ತಂತ್ರಜ್ಞಾನ. ಈ ವರ್ಷದ ರೇಡಿಯೊಗ್ರಫಿ ದಿನದ ಧ್ಯೇಯದಂತೆ ಕಾಣದ ವಿಷಯವನ್ನು ಹುಡುಕುವ ಅಥವಾ ಕಾಣುವ ರೇಡಿಯೊಗ್ರಾಫರ್ ಎಂಬಂತೆ ವಿಕಿರಣ ಶಾಸ್ತ್ರದ ಸಹಾಯದಿಂದ ಸಂಕೀರ್ಣ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಲು ಸಹಾಯವಾಗಬಹುದು.

ರೇಡಿಯಾಲಜಿ ಮತ್ತು ರೇಡಿಯೊಗ್ರಫಿ ವಿಜ್ಞಾನವು ಕೆಲವಾರು ಸಂದರ್ಭಗಳಲ್ಲಿ ಚಿಕಿತ್ಸೆ ನೀಡುವ ವೈದ್ಯರಿಗೆ ರೋಗ ಪತ್ತೆಗೆ ನೆರವು ನೀಡುತ್ತದೆ.

ಅನೇಕ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ, ಆಸ್ಪತ್ರೆಗಳಲ್ಲಿ ವಿಶ್ವ ರೇಡಿಯೊಗ್ರಫಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಾರೆ. ವಿವಿಧೆಡೆಗಳಲ್ಲಿ ದಿನದ 24 ಗಂಟೆ, ವರ್ಷವಿಡೀ ನಿರಂತರ ಕಾರ್ಯನಿರತರಾದ ರೇಡಿಯಾಲಜಿ ವಿಭಾಗಗಳ ತಜ್ಞ ವೈದ್ಯರಿಗೆ ಮತ್ತು ತಂತ್ರಜ್ಞರಿಗೆ ವಿಶ್ವ ರೇಡಿಯೊಗ್ರಫಿ ದಿನದ ಶುಭಾಶಯಗಳು. ರೇಡಿಯೊಗ್ರಫಿ ವಿಜ್ಞಾನದ ಬಲದಿಂದ ಜನರಲ್ಲಿ ಆರೋಗ್ಯ ಜಾಗೃತಿ ಉಂಟಾದಾಗ ದಿನಾಚರಣೆ ಧನ್ಯತೆಯತ್ತ ಮನ ಮಾಡುತ್ತದೆ. ಅನೇಕ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ, ಆಸ್ಪತ್ರೆಗಳಲ್ಲಿ ವಿಶ್ವ ರೇಡಿಯೊಗ್ರಫಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಾರೆ. ವಿವಿಧೆಡೆಗಳಲ್ಲಿ ದಿನದ 24 ಗಂಟೆ, ವರ್ಷವಿಡೀ ನಿರಂತರ ಕಾರ್ಯನಿರತರಾದ ರೇಡಿಯಾಲಜಿ ವಿಭಾಗಗಳ ತಜ್ಞ ವೈದ್ಯರಿಗೆ ಮತ್ತು ತಂತ್ರಜ್ಞರಿಗೆ ವಿಶ್ವ ರೇಡಿಯೊಗ್ರಫಿ ದಿನದ ಶುಭಾಶಯಗಳು. ರೇಡಿಯೊಗ್ರಫಿ ವಿಜ್ಞಾನದ ಬಲದಿಂದ ಜನರಲ್ಲಿ ಆರೋಗ್ಯ ಜಾಗೃತಿ ಉಂಟಾದಾಗ ದಿನಾಚರಣೆ ಧನ್ಯತೆಯತ್ತ ಮನ ಮಾಡುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಲ್.ಎನ್. ಭಟ್ ಮಳಿ

contributor

ಹಿರಿಯ ಫಾರ್ಮಸಿಸ್ಟ್, ಎಸ್‌ಸಿಎಸ್ ಆಸ್ಪತ್ರೆ ಮಂಗಳೂರು

Similar News