ರೋಗಿಯನ್ನು ನಿರೋಗಿಯಾಗಿಸುವ ಕೇಂದ್ರ; ದೀರ್ಘ ಕಾಲದ ಸಮಸ್ಯೆಗಳಿದ್ದರೂ ಭಯ ಬೇಡ!

Update: 2025-04-05 17:54 IST
ರೋಗಿಯನ್ನು ನಿರೋಗಿಯಾಗಿಸುವ ಕೇಂದ್ರ; ದೀರ್ಘ ಕಾಲದ ಸಮಸ್ಯೆಗಳಿದ್ದರೂ ಭಯ ಬೇಡ!
  • whatsapp icon

ದೀರ್ಘ ಕಾಲದ ಬೆನ್ನು, ಕಾಲು, ಕುತ್ತಿಗೆ, ಕೈ ನೋವು, ಉದರ ಸಮಸ್ಯೆ, ಬೊಜ್ಜು, ನಿತ್ಯವೂ ಕಿರಿಕಿರಿ ಆಗುವ ತಲೆನೋವು, ನರದ ಸಮಸ್ಯೆ, ಖಿನ್ನತೆ, ನಿದ್ರಾಹೀನತೆ, ಅಲರ್ಜಿ, ಮಾನಸಿಕ ಒತ್ತಡ, ಚರ್ಮ ರೋಗಗಳು, ಪಾರ್ಶ್ವವಾಯು ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳೇ? ಪಿಸಿಓಡಿಯಂಥ ಮಹಿಳೆಯರ ಸಂಕಷ್ಟಗಳಿಗೂ ಇಲ್ಲಿದೆ ಪರಿಹಾರ ಸೂತ್ರ.

ನಮ್ಮ ಜೀವನ ಶೈಲಿ, ಆಹಾರ ವಿಧಾನವನ್ನೇ ಕೊಂಚ ಬದಲಾಯಿಸಿ 'ಆರೋಗ್ಯ ಸೂತ್ರ' ಕಟ್ಟಿಕೊಡುವ ಒಂದು ವಿಶಿಷ್ಟ ಪ್ರಯತ್ನ ಉತ್ತರ ಕನ್ನಡದ ಸಹ್ಯಾದ್ರಿ ನಡುವೆ ಅಭಿಯಾನದ ಮಾದರಿಯಲ್ಲಿ ನಡೆಯುತ್ತಿದೆ. ಹಸಿರಿನ ನಡುವೆಯ ನಿಸರ್ಗಮನೆ ಆರೋಗ್ಯ ಕೇಂದ್ರ ಅನೇಕ ಜನರ ಪಾಲಿನ ಆರೋಗ್ಯ ಸಾಧನಾ ಕೇಂದ್ರ!.

ಆರೋಗ್ಯ ಭಾಗ್ಯದ, ಆರೋಗ್ಯ ಸಾಧನೆಯಲ್ಲಿ ನಮ್ಮನ್ನು ಸಾಧಕರನ್ನಾಗಿ ರೂಪಿಸುವ ಆರೋಗ್ಯ ಕೇಂದ್ರ ಶಿರಸಿ ಗಣೇಶನಗರದ ಹೊರ ವಲಯದ ನಿಸರ್ಗಮನೆ ವೇದ ಆರೋಗ್ಯ ಕೇಂದ್ರವಾಗಿದೆ. ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗೆ ಒಂದೇ ಸೂರಿನಡಿ ಸಮಸ್ಯೆಗೆ ಪರಿಹಾರ ಒದಗಿಸುತ್ತಿದೆ.

ಹೌದು, ಶಿರಸಿಯ ನಿಸರ್ಗಮನೆ ಆರೋಗ್ಯ ಕೇಂದ್ರ ಇಂದು ಕೇವಲ ರಾಜ್ಯ ಮಾತ್ರವಲ್ಲ, ರಾಷ್ಟ್ರದ ಗಮನ ಸೆಳೆಯುತ್ತಿದೆ. ಕಳೆದ ಎರಡುವರೆ ದಶಕಗಳಾಚೆಯಿಂದ ನಿರಂತರ ಪ್ರಕೃತಿ ಆರೋಗ್ಯ ಚಿಕಿತ್ಸೆ ನೀಡುವ ಡಾ. ವೆಂಕಟ್ರಮಣ ಹೆಗಡೆ ಅವರ ತಜ್ಞ ವೈದ್ಯರ, ಸಿಬ್ಬಂದಿಗಳ ತಂಡ ರೋಗಿಗಳನ್ನು ನಿರೋಗಿಯಾಗಿಸಿ ಹೊಸ ಬದುಕಿನ ಉತ್ಸಾಹ ತುಂಬಿಸುವ ಅಭಿಯಾನದ ಕಾರ್ಯ ಮುನ್ನಡೆಸುತ್ತಿದೆ.

ಇಂದು ಎಲ್ಲರಿಗೂ ಆಧುನಿಕ ಜೀವನದ ಪದ್ಧತಿ ಅನೇಕ ಒತ್ತಡದ ಬದುಕನ್ನೂ ಕಟ್ಟಿಕೊಟ್ಟಿದೆ. ಈ ಬದುಕು ನಮ್ಮ ನೆಮ್ಮದಿ ಕೆಡಿಸುವ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ವಾಸಿ ಮಾಡಲಾಗದ ರೋಗದ ನಿವಾರಣೆಗೂ ಹಾಗೂ ಆರೋಗ್ಯ ರಕ್ಷಣೆಗೆ ಒಂದೊಳ್ಳೆಯ ಪರಿಹಾರ ಕೇಂದ್ರ ನಿಸರ್ಗಮನೆ.

ಇಲ್ಲಿ ಪ್ರಕೃತಿ ಚಿಕಿತ್ಸೆ ಜೊತೆಗೆ ಪಂಚಕರ್ಮ ಚಿಕಿತ್ಸೆ, ನಿಸರ್ಗದತ್ತ ಆಹಾರ ಜೊತೆ ಪ್ರಕೃತಿಗೆ ಹತ್ತಿರುವಾಗುವ ವಸತಿ ಸೌಲಭ್ಯ, ಕಾಟೇಜುಗಳೂ ಇಲ್ಲಿವೆ. ಕಡಿಮೆ ಮಾಡಲು ಕಷ್ಟಕರವಾದ ಅಟೋಇಮ್ಯೂನ್ ಡಿಸಾರ್ಡರಗಳ ಯಶಸ್ವಿ ನಿರ್ವಹಣೆಗೂ ಡಾ. ಹೆಗಡೆ ಅವರಲ್ಲಿ ಹೊಸ ಉಪಾಯವಿದೆ.

ಜೊತೆ ಜೊತೆಗೆ ಅಕ್ಯುಪಂಕ್ಚರ್, ಅಕ್ಯುಪ್ರಶರ್, ಮಣ್ಣಿನ ಚಿಕಿತ್ಸೆ, ಮಸಾಜ್, ಸ್ಟೀಮ್ ಬಾತ್, ಫಿಸಿಯೋಥೆರಪಿ, ಆಹಾರ ಚಿಕಿತ್ಸೆ, ವಾಟರ್ ಮಸಾಜ್, ಯೋಗ ಚಿಕಿತ್ಸೆ ಸೇರಿದಂತೆ ಹತ್ತಾರು ಬಗೆಯ ಚಿಕಿತ್ಸೆಗಳಿವೆ. ಭಾರತೀಯ ಚಿಕಿತ್ಸಾ ಪದ್ಧತಿಯಲ್ಲಿ ಇಲ್ಲಿ ಅನೇಕ ರೋಗ, ಆನಾರೋಗ್ಯಗಳಿಗೆ ಪರಿಣಾಮಕಾರಿ ಚಿಕಿತ್ಸೆ ಇದೆ. ಅದರ ಜೊತೆ ಕೌಟುಂಬಿಕ ವಾತಾವರಣದ ಸೇವೆ ನಿರಂತರವಾಗಿದೆ.

ಆಹಾರದ ಮೂಲಕ ಆರೋಗ್ಯ ಕುರಿತು ಅಪಾರ ಜ್ಞಾನಗಳಿಸಿದ ಡಾ. ಪ್ರವೀಣ್ ಜೇಕಬ್, ಆಯುರ್ವೇದ ಚಿಕಿತ್ಸೆಯಲ್ಲಿ ಅನುಭವಿಗಳಾದ ಡಾ. ವೆಂಕಟೇಶ್ ಗಾಂವಕರ್ ಅವರ ಸೇವೆಯೂ ಇದೆ. ಇಲ್ಲಿ ಪ್ರಸಿದ್ಧ ಚಿತ್ರತಾರೆಯರು, ಕಲಾವಿದರು, ಮಠಾಧೀಶರು, ರಾಜಕಾರಣಿಗಳು, ಅಧಿಕಾರಿಗಳು, ಸಚಿವರು, ಸಂಸದರು, ಉದ್ಯಮಿಗಳು, ಜನ ಸಾಮಾನ್ಯರು, ಅನೇಕರು ನಿಸರ್ಗಮನೆಯ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ, ಆಗುತ್ತಲೂ ಇದ್ದಾರೆ.

ಇನ್ನು ಡಾ. ವೆಂಕಟ್ರಮಣ ಹೆಗಡೆ ಅವರು ವಿಜಯವಾಣಿ ಪತ್ರಿಕೆಯಲ್ಲಿ ನಿರಂತರ ಆರೋಗ್ಯ ಜಾಗೃತಿ ಅಂಕಣ ಬರೆಯುತ್ತಿದ್ದಾರೆ. ಯುಟ್ಯೂಬ್, ವಾಟ್ಸಪ್ ಗ್ರುಪಗಗಳ ಮೂಲಕ ಆರೋಗ್ಯ ಸಂಬಂಧಿ ಮಾಹಿತಿ ನೀಡುತ್ತಿದ್ದಾರೆ. ಪವರ್ ಡಯಟ್, ಆಹಾರ ಆರೋಗ್ಯ, ಮನೆಯತಲ್ಲೇ ಪರಿಹಾರ ಸೇರಿದಂತೆ ಅನೇಕ ಕೃತಿಗಳನ್ನೂ ನೀಡಿದ್ದು, ಒಂದೊಂದು ಕೃತಿಗಳೂ ಲಕ್ಷಾಂತರ ಸಂಖ್ಯೆಯಲ್ಲಿ ಓದುಗರ ಮನೆ, ಮನ ಸೇರಿದೆ. ಡಾ. ವೆಂಕಟ್ರಮಣ ಹೆಗಡೆ ಅವರ ಆರೋಗ್ಯ ಕ್ಷೇತ್ರದ ಸಾಧನೆಗೆ ಪ್ರತಿಷ್ಠಿತ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ, ನೋಬಲ್ ಮ್ಯಾನ್ದ ರಾಷ್ಟ್ರೀಯ ಪ್ರಶಸ್ತಿ, ಪರಿಮಳ ಪ್ರಶಸ್ತಿ, ನಮ್ಮನೆ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಬಂದಿವೆ. ಇವರು ಈವರೆಗೆ ಸಾವಿರಕ್ಕೂ ಮಿಕ್ಕಿದ ಆರೋಗ್ಯ ಜಾಗೃತಿ ಶಿಬಿರ ನಡೆಸಿ ಆರೋಗ್ಯ ಜಾಗೃತಿ ಮೂಡಿಸುತ್ತಿದ್ದಾರೆ.

ಇದೇ ವೇಳೆ ಪವರ್ ಡಯಟ್, ಅಡುಗೆ ಮನೆಯೇ ಆಸ್ಪತ್ರೆ, ಆಹಾರವೇ ಔಷಧ, ಮನೆಯಲ್ಲೇ ಪರಿಹಾರ, ಆಹಾರ ಆರೋಗ್ಯ, ಪುಸ್ತಕಗಳು, ಅಲ್ಪಾ ನ್ಯಾಚುರಲ್ ಆಹಾರ ಔಷಧಿಗಳು ಲಭ್ಯವಿರಲಿವೆ. ಇಲ್ಲಿಗೆ ಬರುವವರು ಹೆಗಡೆ ಅವರ ಭೇಟಿಗೆ ಸಮಯವನ್ನೂ ಖಚಿತಪಡಿಸಿಕೊಳ್ಳಬಹುದು. ಇದಕ್ಕಾಗಿ 8073320478, 8970822508ಗೆ ಸಂಪರ್ಕ ಮಾಡಬಹುದು.

ನನಗೆ ಪಿಸಿಓಡಿ ಸಮಸ್ಯೆ ಎಷ್ಟಿತ್ತೆಂದರೆ ಆತ್ಮಹತ್ಯೆಯೊಂದೇ ದಾರಿ ಎಂಬಂತಾಗಿತ್ತು. ಇಲ್ಲಿಗೆ ಬಂದು ಹತ್ತು ದಿನ ಉಳಿದು ಚಿಕಿತ್ಸೆ ಪಡೆದೆ. ಈಗ ಆರಾಮಾಗಿದ್ದೇನೆ.

-ಸುವರ್ಣಾ ಎಂ.ಕೆ. ಬೆಂಗಳೂರು

ನಾನಿಲ್ಲಿ ಬಂದಾಗ ಬೊಜ್ಜು ರಾಶಿ ಇತ್ತು. ಬೆನ್ನು ನೋವೂ ಇತ್ತು. ತೂಕದಲ್ಲೂ ಇಳಿದೆ. ಡಯಾಬಿಟಿಸ್ ನಿಯಂತ್ರಣಕ್ಕೆ ಬಂದಿದೆ. ಆರಾಮ ಎನಿಸುತ್ತಿದೆ.

-ನೀಲಕಂಠ ಪಿ. ಹುಬ್ಬಳ್ಳಿ

ಇಲ್ಲಿಗೆ ಬಂದರೆ ನನಗೆ ತವರು ಮನೆಯ ಅನುಭವ ಕೊಡುತ್ತದೆ. ನನ್ನದೀರ್ಘ ಕಾಲದ ಕೆಲ ಸಮಸ್ಯೆಗಳನ್ನು ನಿವಾರಿಸಿಕೊಟ್ಟಿದ್ದಾರೆ. ಇಲ್ಲಿ ಹೇಳಿದ ಮಾದರಿಯಲ್ಲೇ ನಿತ್ಯ ಜೀವನ ನಡೆಸಲು ಸಂಕಲ್ಪ ಮಾಡಿದ್ದೇನೆ.

-ಆರತಿ ಎಸ್. ಎಚ್. ಮಹಾರಾಷ್ಟ್ರ

ಪ್ರಯೋಜಿತ ಲೇಖನ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News