ಮಂಡ್ಯ | ಐಸ್ ಕ್ರೀಮ್ ತಿಂದ ಬಳಿಕ ಅವಳಿ ಮಕ್ಕಳು ಮೃತ್ಯು , ತಾಯಿ ಆಸ್ಪತ್ರೆಗೆ ದಾಖಲು

Update: 2024-04-18 14:00 IST
ಮಂಡ್ಯ | ಐಸ್ ಕ್ರೀಮ್ ತಿಂದ ಬಳಿಕ ಅವಳಿ ಮಕ್ಕಳು ಮೃತ್ಯು , ತಾಯಿ ಆಸ್ಪತ್ರೆಗೆ ದಾಖಲು

Image by wirestock on Freepik ಸಾಂದರ್ಭಿಕ ಚಿತ್ರ

  • whatsapp icon

ಶ್ರೀರಂಗಪಟ್ಟಣ : ಐಸ್ ಕ್ರೀಮ್ ಸೇವನೆ ಮಾಡಿದ ಬಳಿಕ ಅವಳಿ ಮಕ್ಕಳು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ

ಗ್ರಾಮದ ಪ್ರಸನ್ನ ಮತ್ತು ಪೂಜಾ ದಂಪತಿಯ ಒಂದೂವರೆ ವರ್ಷದ ತ್ರಿಶೂಲ್ ಮತ್ತು ತ್ರಿಶಾ ಮೃತಪಟ್ಟಿರುವ ಮಕ್ಕಳು. ಇವರ ಜೊತೆ ಐಸ್ ಕ್ರೀಂ ತಿಂದಿದ್ದ ತಾಯಿ ಪೂಜಾ ಕೂಡ ಅಸ್ವಸ್ಥಗೊಂಡಿದ್ದು, ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಬುಧವಾರ ಸಂಜೆ ವಾಹನದಲ್ಲಿ ಬೆಟ್ಟಹಳ್ಳಿಗೆ ತಂದಿದ್ದ ಐಸ್ ಕ್ರೀಂ ಖರೀದಿಸಿ ತಿಂದ ಕೆಲ ಹೊತ್ತಿನ ಬಳಿಕ ಮಕ್ಕಳು ಅಸ್ವಸ್ಥಗೊಂಡಿದೆ ಎಂದು ಹೇಳಲಾಗಿದೆ. ಅಸ್ವಸ್ಥಗೊಂಡಿದ್ದ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇದೇ ವಾಹನದಲ್ಲಿ ಗ್ರಾಮದ ಇನ್ನೂ ಹಲವರು ಐಸ್‌ಕ್ರೀಂ ಖರೀದಿಸಿ ಸೇವಿಸಿದ್ದರು. ಬೇರೆಯವರಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ ಎನ್ನಲಾಗಿದೆ. ಮಕ್ಕಳ ಸಾವು ಪ್ರಕರಣ ಅನುಮಾನಾಸ್ಪವಾಗಿದ್ದು, ಈ ಬಗ್ಗೆ ತನಿಖೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News