ಭಾರತೀಯ ಕೌನ್ಸುಲೇಟ್ ಮೇಲೆ ದಾಳಿ ; ಎನ್ಐಎಯಿಂದ 10 ಆರೋಪಿಗಳ ಚಿತ್ರ ಬಿಡುಗಡೆ

Update: 2023-09-21 16:58 GMT
NIA| Photo: PTI 

ಹೊಸದಿಲ್ಲಿ: ಈ ವರ್ಷದ ಮಾರ್ಚ್ ತಿಂಗಳಿನಲ್ಲಿ, ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೊ ನಗರದಲ್ಲಿರುವ ಭಾರತೀಯ ಕೌನ್ಸುಲೇಟ್ ಕಚೇರಿಯ ಮೇಲೆ ನಡೆದ ದಾಳಿ ಪ್ರಕರಣದ 10 ಆರೋಪಿಗಳ ಚಿತ್ರಗಳನ್ನು ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ಬಿಡುಗಡೆಗೊಳಿಸಿದೆ. ಅವರ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರನ್ನು ಕೋರಿದೆ.

ಆರೋಪಿಗಳ ಬಗ್ಗೆ ಮಾಹಿತಿ ಕೋರಿ ಎನ್ಐಎ ಮೂರು ಪ್ರತ್ಯೇಕ ನೋಟಿಸ್ ಗಳನ್ನು ಹೊರಡಿಸಿದ್ದು, ಆರೋಪಿಗಳ ಬಂಧನಕ್ಕೆ ಸಹಾಯ ಮಾಡುವ ಯಾವುದೇ ಮಹತ್ವದ ಮಾಹಿತಿಯನ್ನು ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಎರಡು ನೋಟಿಸ್ ಗಳಲ್ಲಿ ತಲಾ ಇಬ್ಬರು ಆರೋಪಿಗಳ ಭಾವಚಿತ್ರಗಳಿವೆ ಮತ್ತು ಮೂರನೇ ನೋಟಿಸ್ ನಲ್ಲಿ ಇನ್ನುಳಿದ ಆರು ಆರೋಪಿಗಳ ಚಿತ್ರಗಳಿವೆ.

ಈ 10 ಆರೋಪಿಗಳ ಕುರಿತ ಯಾವುದೇ ಮಾಹಿತಿಯನ್ನು ನೀಡಲು ಎನ್ಐಎ ಟೆಲಿಫೋನ್ ಸಂಖ್ಯೆಗಳು ಮತ್ತು ಇಮೇಲ್ ವಿಳಾಸಗಳನ್ನು ನೀಡಿದೆ.

ಸ್ಯಾನ್ಫ್ರಾನ್ಸಿಸ್ಕೊದಲ್ಲಿರುವ ಕೌನ್ಸುಲೇಟ್ ಮೇಲೆ ಮಾರ್ಚ್ 18ರ ರಾತ್ರಿ ದಾಳಿ ನಡೆದಿತ್ತು. ಖಾಲಿಸ್ತಾನಿ ಪರ ವ್ಯಕ್ತಿಗಳು ಕೌನ್ಸುಲೇಟ್ ಆವರಣಕ್ಕೆ ನುಗ್ಗಿ ಅಲ್ಲಿನ ವಸ್ತುಗಳನ್ನು ಸುಟ್ಟು ಹಾಕಲು ಪ್ರಯತ್ನಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News