‘ಕೇರಳ’ವನ್ನು ‘ಕೇರಳಂ’ ಎಂದು ಮರು ನಾಮಕರಣ ಮಾಡುವಂತೆ ಕೇಂದ್ರಕ್ಕೆ ಆಗ್ರಹ: ಕೇರಳ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ ಎಡರಂಗ ಸರ್ಕಾರ

Update: 2023-08-09 09:36 GMT

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ (Photo credit: Onmanorama)

ತಿರುವನಂತಪುರಂ: ಕೇರಳದಲ್ಲಿನ ಆಡಳಿತಾರೂಢ ಎಡರಂಗ ಸರ್ಕಾರವು ಬುಧವಾರ ಕೇರಳವನ್ನು ‘ಕೇರಳಂ’ ಎಂದು ಮರುನಾಮಕರಣ ಮಾಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ. 

ಈ ಸಂಬಂಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ಣಯವೊಂದನ್ನು ಮಂಡಿಸಲು ಮುಂದಾಗಿದ್ದು, ಈ ನಿರ್ಣಯವು ಆಗಸ್ಟ್ 9ರ ಸದನ ಕಲಾಪಗಳ ವೇಳಾಪಟ್ಟಿಯಲ್ಲಿ ನಮೂದಾಗಿದೆ. ಈ ಮಾಹಿತಿಯು ಕೇರಳ ರಾಜ್ಯ ವಿಧಾನಸಭೆಯ ಅಂತರ್ಜಾಲ ತಾಣದಲ್ಲಿ ಅಪ್ಲೋಡ್ ಆಗಿದೆ. 

ಕೇರಳ ರಾಜ್ಯದ ಹೆಸರು ‘ಕೇರಳಂ’ ಎಂದು ಸಂವಿಧಾನ ಮತ್ತು ಎಲ್ಲ ಅಧಿಕೃತ ದಾಖಲೆಗಳಲ್ಲಿ ಮರುನಾಮಕರಣಗೊಳ್ಳಬೇಕು ಎಂಬುದು ಕೇರಳ ಸರ್ಕಾರದ ಬೇಡಿಕೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News